ಚಿಕ್ಕಬಳ್ಳಾಪುರ: ಮಧ್ಯರಾತ್ರಿ ಏಕಾಂಗಿಯಾಗಿ ತಮ್ಮ ಖಾಸಗಿ ವಾಹನದಲ್ಲಿ ಆರ್ಟಿಒ ಅಧಿಕಾರಿಯೊಬ್ಬರು ಕಾರ್ಯಾಚರಣೆಗೆ ನಡೆಸಿದ್ದಾರೆ.
ಚಿಕ್ಕಬಳ್ಳಾಪುರ ಪ್ರಾದೇಶಿಕ ಸಾರಿಗೆ ಅಧಿಕಾರಿ ನಾಗಿರೆಡ್ಡಿ ಅವರು ರಾಷ್ಟ್ರೀಯ ಹೆದ್ದಾರಿ 7ರಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. ಅಲ್ಲದೇ ಅಧಿಕ ಭಾರ ಹೊತ್ತು ಅತಿವೇಗದಿಂದ ಸಾಗುತ್ತಿದ್ದ ಮೂರು ಟಿಪ್ಪರ್ ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ಚಾಲಕ ಟಿಪ್ಪರ್ ನಿಲ್ಲಿಸದೇ ಪರಾರಿಯಾಗುತ್ತಿದ್ದ. ಈ ವೇಳೆ ನಾಗಿರೆಡ್ಡಿ ತಮ್ಮ ಕಾರಿನಲ್ಲಿ ಚೇಸ್ ಮಾಡಿ ಟಿಪ್ಪರ್ ತಡೆದರು. ಆರ್ಟಿಒ ಚೇಸ್ ಮಾಡುವಾಗ ಚಾಲಕ ಟಿಪ್ಪರ್ ನಿಲ್ಲಿಸದೇ ಆರ್ಟಿಒ ಅಧಿಕಾರಿಗೆ ಸೈಡ್ ಕೊಡಲಿಲ್ಲ. ಕೊನೆಗೆ ನಾಗಿರೆಡ್ಡಿ ಅವರು ಹರಸಾಹಸ ಪಟ್ಟು ಚೇಸ್ ಮಾಡಿ ಟಿಪ್ಪರ್ ವಶಕ್ಕೆ ಪಡೆದುಕೊಂಡಿದ್ದಾರೆ.
Advertisement
Advertisement
ದಾಳಿ ವೇಳೆ ನೀವು ಆರ್ಟಿಒ ಆದರೆ ದಾಖಲೆ ಕೊಡಿ ಎಂದು ಚಾಲಕ ನಾಗಿರೆಡ್ಡಿ ಅವರನ್ನು ಪ್ರಶ್ನಿಸಿದ್ದಾನೆ. ಆಗ ನಾಗಿರೆಡ್ಡಿ ಐಡಿ ಕಾರ್ಡ್ ತೋರಿಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಾಗಿರೆಡ್ಡಿ ಟಿಪ್ಪರ್ ವಶಕ್ಕೆ ಪಡೆದ ಬಳಿಕ ಚಾಲಕ ಟಿಪ್ಪರ್ ಬಿಟ್ಟು ಎಸ್ಕೇಪ್ ಆಗಿದ್ದಾನೆ.
Advertisement
ಇದಾದ ಬಳಿಕ ಆರ್ಟಿಒ ಕಾರ್ಯಾಚರಣೆ ನಡೆಸಿ ಮತ್ತೆರೆಡು ಟಿಪ್ಪರ್ ಲಾರಿ ವಶಕ್ಕೆ ಪಡೆದರು. ಟಿಪ್ಪರ್ ಮಾಲೀಕರ ಕಡೆಯವರಿಂದ ಆರ್ಟಿಒ ಕಾರ್ಯಾಚರಣೆಗೆ ಅಡ್ಡಿ ಪಡಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಯಾಕೆ ಟಿಪ್ಪರ್ ಮಾತ್ರ ಹಿಡಿತೀರಾ ಎಲ್ಲಾ ವಾಹನಗಳ ಪರಿಶೀಲನೆ ನಡೆಸಿ ಅಂತ ಅಗ್ರಹಿಸಿದರು. ಟಿಪ್ಪರ್ ವಶಕ್ಕೆ ಪಡೆದ ಬಳಿಕ ನಾಗಿರೆಡ್ಡಿ ಆರ್ಟಿಒ ಪೊಲೀಸರಿಗೆ ಕರೆ ಮಾಡಿ ತಿಳಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv