ಬೆಂಗಳೂರು: ಹಬ್ಬ, ವೀಕೆಂಡ್ ಲಾಂಗ್ ಲೀವ್ ಸಿಕ್ಕಿದೆ ಎಂದು ನಗರದಿಂದ ಸ್ವಗ್ರಾಮಕ್ಕೆ ತೆರಳುವ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿ ಬಸ್ ದರ ಹೆಚ್ಚಳ ಮಾಡುತ್ತಿದ್ದ ಬಸ್ ಮಾಲೀಕರಿಗೆ ಸಾರಿಗೆ ಇಲಾಖೆಯ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ.
ಪ್ರಯಾಣಿಕರ ಅವಶ್ಯಕತೆಯನ್ನೇ ಬಂಡವಾಳ ಮಾಡಿಕೊಂಡು ಯದ್ವಾತದ್ವ ದರ ಹೆಚ್ಚಳ ಮಾಡುವ ಆಗಿಲ್ಲ ಎಂದು ಆರ್ ಟಿಒ ಕಮಿಷನರ್ ಹೇಳಿದ್ದು, ಎಲ್ಲಾ ಖಾಸಗಿ ಬಸ್‍ಗಳ ಮೇಲೆ ಇಲಾಖೆ ನಿಗಾ ವಹಿಸಿರುತ್ತದೆ. ಒಂದು ಸಮಯ ಶೇ.10 ಕ್ಕಿಂತ ಹೆಚ್ಚಿನ ದರ ಏರಿಸಿದರೆ ರಹದಾರಿಯನ್ನೇ ರದ್ದು ಮಾಡುವುದಾಗಿ ಆರ್ ಟಿಓ ಕಮಿಷನರ್ ಇಕ್ಕೇರಿ ಹೇಳಿದ್ದಾರೆ.
Advertisement
ಲೋಕಸಭಾ ಮತದಾನಕ್ಕಾಗಿ ಬೆಂಗಳೂರಿನಿಂದ ಹೊರ ಜಿಲ್ಲೆಗಳಿಗೆ ಹೋಗುವ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಇದನ್ನೇ ಬಂಡವಾಳ ಮಾಡಿಕೊಳ್ಳಲು ಯತ್ನಿಸಿದ ಖಾಸಗಿ ಬಸ್ ಮಾಲೀಕರು ಬಸ್ ಟಿಕೆಟ್ ದರವನ್ನು ಹೆಚ್ಚಳ ಮಾಡಿದ್ದರು. ಅಲ್ಲದೇ 2ನೇ ಮತದಾನ ನಡೆಯುವ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಿಗೂ ಬಸ್ ಟಿಕೆಟ್ ದರ ಮತ್ತಷ್ಟು ದುಬಾರಿಯಾಗಿತ್ತು. ಈ ಕುರಿತು ಪಬ್ಲಿಕ್ ಟಿವಿ ವರದಿ ಮಾಡಿತ್ತು.