ಕೋಲಾರ: ಮಹಿಳಾ ಅಧಿಕಾರಿಯ ವೈಯಕ್ತಿಕ ವಿಚಾರಗಳ ಮಾಹಿತಿ ಕೇಳಿ ಆರ್‌ಟಿಐ (RTI) ಕಾರ್ಯಕರ್ತನೊಬ್ಬ ಪೇಚೆಗೆ ಸಿಲುಕಿದ ಘಟನೆ ಕೋಲಾರದಲ್ಲಿ (Kolar) ನಡೆದಿದೆ.
ಕೋಲಾರ ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ಮಂಡಿಕಲ್ ನಾಗರಾಜ್ ಬಂಧಿತ ಆರ್‌ಟಿಐ ಕಾರ್ಯಕರ್ತ. ಈತ ಮುಳಬಾಗಿಲು ತಹಶೀಲ್ದಾರ್ ಶೋಭಿತಾ ಅವರ ವೈಯಕ್ತಿಕ ವಿಚಾರಗಳ ಕುರಿತು ಆರ್‌ಟಿಐ ಅಡಿ ಮಾಹಿತಿ ಕೇಳಿದ್ದ. ಶೋಭಿತಾಗೆ ಇದುವರೆಗೂ ಎಷ್ಟು ಮದುವೆಯಾಗಿದೆ? (Marriage) ಯಾರೊಂದಿಗೆ ವಿಚ್ಛೇದನ ಆಗಿದೆ? ಸದ್ಯ ಯಾರ ಜೊತೆ ಸಂಸಾರ ಮಾಡುತ್ತಿದ್ದಾರೆ ಎಂಬೆಲ್ಲಾ ಮಾಹಿತಿ ಕೇಳಿದ್ದಾನೆ.
Advertisement
Advertisement
ಅಷ್ಟೇ ಅಲ್ಲದೇ ಶೋಭಿತಾ ಅವರಿಗೆ ಎಲ್ಲಿ ಮದುವೆಯಾಗಿದೆ. ಲಗ್ನ ಪತ್ರಿಕೆ, ಕಲ್ಯಾಣ ಮಂಟಪದ ವಿವರ ಕೊಡಿ. ಪತಿಯ ಜೊತೆ ವಿಚ್ಛೇದನ ಆಗಿದಿಯಾ ಇಲ್ಲವಾ? ಆಗಿದ್ದರೇ ಕಾರಣ ಕೊಡಿ ಹಾಗೂ ಅವರೆಲ್ಲಾ ಯಾವ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಎಲ್ಲಾ ಮಾಹಿತಿಯನ್ನು ತುರ್ತಾಗಿ ನೀಡುವಂತೆ ಆರ್‌ಟಿಐಗೆ ಸಲ್ಲಿಸಿದ್ದಾನೆ. ಇದನ್ನೂ ಓದಿ: ಸುವರ್ಣಸೌಧದಲ್ಲಿ ಈ ವರ್ಷ ಚೆನ್ನಮ್ಮ, ರಾಯಣ್ಣ ಪ್ರತಿಮೆ ಪ್ರತಿಷ್ಠಾಪನೆ- ಬೊಮ್ಮಾಯಿ
Advertisement
Advertisement
ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿ ಆರ್‌ಟಿಐ ಕಾರ್ಯಕರ್ತ ನಾಗರಾಜ್‍ನನ್ನು ಇದೀಗ ಮುಳಬಾಗಿಲು ನಗರ ಪೊಲೀಸರು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದರು. ಇದನ್ನೂ ಓದಿ: ರಾಹುಲ್, ಸೋನಿಯಾ ಗಾಂಧಿ ಅವರ ತ್ಯಾಗ ಬಹಳಷ್ಟಿದೆ: ಮಲ್ಲಿಕಾರ್ಜುನ ಖರ್ಗೆ