Connect with us

Bengaluru City

ಟೋಲ್ ಬಳಿ ಲಾರಿ ಹರಿಸಿ RTI ಕಾರ್ಯಕರ್ತನ ಹತ್ಯೆಗೆ ಯತ್ನ!

Published

on

ಬೆಂಗಳೂರು: ಕೊಬ್ಬರಿ ಹಗರಣ ಬಯಲಿಗೆಳೆದಿದ್ದ ಆರ್ ಟಿಐ ಕಾರ್ಯಕರ್ತ ರವಿಕುಮಾರ್ ಹತ್ಯೆಗೆ ಸಂಚು ನಡೆಸಲಾಗಿದೆ. ದಾಖಲೆ ಇಲ್ಲದೆ ಕೊಬ್ಬರಿಯನ್ನ ಹೊರರಾಜ್ಯಕ್ಕೆ ಅಕ್ರಮವಾಗಿ ಸಾಗಾಟದ ಬಗ್ಗೆ ವಾಣಿಜ್ಯ ತೆರಿಗೆ ಆಯುಕ್ತರಿಗೆ ತುಮಕೂರು ಮೂಲದ ರವಿ ದೂರು ನೀಡಿದ್ರು. ಅಲ್ಲದೆ ಅದಕ್ಕೆ ಬೇಕಾದ ಎಲ್ಲಾ ಆಡಿಯೋ, ವಿಡಿಯೋ ಸಾಕ್ಷ್ಯ ಕೂಡಾ ಒದಗಿಸಿದ್ದರು.

ಇದರ ಮಧ್ಯೆ ರವಿ ಕುಮಾರ್ ಕಾರ್ ಮೇಲೆ ಲಾರಿ ಹರಿಸಿ ಹತ್ಯೆಗೆ ಸಂಚು ರೂಪಿಸಲಾಗಿದೆಯಂತೆ. ನೆಲಮಂಗಲ ಪಟ್ಟಣದ ನವಯುಗ ಟೋಲ್ ಬಳಿ ತಮಿಳುನಾಡು ರಿಜಿಸ್ಟ್ರೇಷನ್ ಲಾರಿ ರವಿ ಕಾರಿಗೆ ಡಿಕ್ಕಿ ಹೊಡೆದಿದೆ. ಚಾಲಕ ಇದು ಬ್ರೆಕ್ ಫೇಲ್ಯೂರ್‍ನಿಂದ ಆಗಿರುವ ಅಪಘಾತ ಎಂದು ಹೇಳಿದ್ರೂ, ಲಾರಿ ಬ್ರೇಕ್ ಫೇಲ್ಯೂರ್ ಆಗಿರಲಿಲ್ಲ ಅನ್ನೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ನೆಲಮಂಗಲ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರವಿಕುಮಾರ್ ದೂರು ಕೊಟ್ಟು ಒಂದೂವರೆ ತಿಂಗಳಾದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ಬಗ್ಗೆ ತಿಪಟೂರು ಎಪಿಎಂಸಿ ಕಾರ್ಯದರ್ಶಿಯನ್ನು ಕೇಳಿದ್ರೆ, ಈ ವಿಚಾರವಾಗಿ ದೂರು ನೀಡಿದ್ರೆ ಯಾವುದೇ ಪ್ರಯೋಜನ ಇಲ್ಲ. 29 ಮಂದಿ ಕೆಲಸಗಾರರ ಜಾಗದಲ್ಲಿ ಇರೋದು ಇಬ್ಬರು ಮಾತ್ರ. ಹೀಗಿದ್ದಾಗ ಅಕ್ರಮ ತಡೆಗಟ್ಟಲು ಹೇಗೆ ಸಾಧ್ಯ ಅಂತಿದ್ದಾರೆ ಎಂದು ರವಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Click to comment

Leave a Reply

Your email address will not be published. Required fields are marked *