ಮಂಡ್ಯ: ಬಿಜೆಪಿ ಕಾರ್ಯಕರ್ತ ಮಂಜುನಾಥ್ ಅವರು ಮಾಹಿತಿ ಹಕ್ಕಿನ ಅಡಿಯಲ್ಲಿ ಅರ್ಜಿ ಸಲ್ಲಿಸಿ ಮಾಜಿ ಸಂಸದೆ ರಮ್ಯಾಗೆ ಟಾಂಗ್ ಕೊಟ್ಟಿದ್ದಾರೆ.
ಹಂದಿ ತಾನಿರುವ ಚೆಂದಕ್ಕೆ ನಂದಿಯನ್ನ ಆಡಿಕೊಂಡಂತೆ ಎಂಬ ಗಾದೆ ಮಾತು ಪಿಯುಸಿ ಮಾಡಿರುವ ಮಾಜಿ ಸಂಸದೆ ರಮ್ಯಾ ಎಂಎ ಮಾಡಿರುವ ನರೇಂದ್ರ ಮೋದಿ ಅವರನ್ನ ಆಡಿಕೊಂಡಿರುವುದಕ್ಕೆ ಉದಾಹರಣೆ ಕೊಡಬಹುದೆ ಅಂತ ಅರ್ಜಿಯಲ್ಲಿ ತಿಳಿಸಿದ್ದಾರೆ.
ರಮ್ಯಾ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ವಿದ್ಯಾರ್ಹತೆ ಬಗ್ಗೆ ಆಡಿಕೊಂಡಿದ್ದರು. ಹೀಗಾಗಿ ಮಂಜುನಾಥ್ ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ಮತ್ತು ಗಾದೆ ವಿಭಾಗಕ್ಕೆ ಮಾಹಿತಿ ಹಕ್ಕಿನ ಮೂಲಕ `ಹಂದಿ ತಾನಿರುವ ಚೆಂದಕ್ಕೆ ನಂದಿಯನ್ನು ಆಡಿಕೊಂಡಂತೆ’ ಎಂಬ ಗಾದೆ ರಮ್ಯಾರಿಗೆ ಉದಾಹರಣೆ ಕೊಡಬಹುದೆ ಅಂತ ಅರ್ಜಿ ಸಲ್ಲಿಸುವ ಮೂಲಕ ರಮ್ಯಾಗೆ ಟಾಂಗ್ ನೀಡಿದ್ದಾರೆ.
Breaking news: Found @narendramodi‘s missing marks/report card! pic.twitter.com/LaTw9oEe5c
— Ramya/Divya Spandana (@divyaspandana) March 23, 2018
ರಮ್ಯಾ ಏನ್ ಹೇಳಿದ್ದರು?:
ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್ ಒಂದು ರಿಪೋರ್ಟ್ ಕಾರ್ಡ್ ಕೊಟ್ಟಿತ್ತು. ಈ ರಿಪೋರ್ಟ್ ಕಾರ್ಡ್ ಸಾಕಷ್ಟು ವಿವಾದಕ್ಕೆ ಗುರಿಯಾಗಿತ್ತು. ಶಾಲೆಯಲ್ಲಿ ಸಿಗೋ ಮಾರ್ಕ್ಸ್ ಕಾರ್ಡ್ ನಂತೆ ಮಾಡಿ ಅದರಲ್ಲಿ ವಿಷಯ, ರಿಮಾರ್ಕ್ ಮತ್ತು ದರ್ಜೆ ಅಂತ ರಿಪೋರ್ಟ್ ಕಾರ್ಡ್ ನಲ್ಲಿ ನಮೂದಿಸಲಾಗಿತ್ತು.
ಹೆಸರು -ಪ್ರಧಾನಿ ನರೇಂದ್ರ ಮೋದಿ
ಅವಧಿ -2014ರಿಂದ ಇಲ್ಲಿಯವರೆಗೂ
ರೋಲ್ ನಂಬರ್ -282 (ಲೋಕಸಭಾ ಸದಸ್ಯರ ಸಂಖ್ಯೆ)
ಬ್ಲಡ್ ಗ್ರೂಪ್- ಬಿಜೆಪಿ
ಉದ್ಯೋಗ ಸೃಷ್ಟಿ ಪರೀಕ್ಷೆಯಲ್ಲಿ- ಡಿ ಗ್ರೇಡ್
ರಕ್ಷಣಾ ಪರೀಕ್ಷೆಯಲ್ಲಿ-ಸಿ ಗ್ರೇಡ್
ಆರೋಗ್ಯ ಪರೀಕ್ಷೆಯಲ್ಲಿ -ಎಫ್ ಗ್ರೇಡ್
ಆರ್ಥಿಕ ಪರೀಕ್ಷೆಯಲ್ಲಿ -ಎಫ್ ಗ್ರೇಡ್
ಮಹಿಳಾ ಸುರಕ್ಷತೆ ಪರೀಕ್ಷೆಯಲ್ಲಿ- ಸಿ ಗ್ರೇಡ್
ಸ್ಟೋರಿ ಟೆಲ್ಲಿಂಗ್‍ನಲ್ಲಿ -ಎ + +
ಇತರೆ ವಿಭಾಗಗಳು- ಹಿಂಸೆ ? ಯೆಸ್, ಕೋಮುವಾದ-ಯೆಸ್
ಫೈನಲ್ ಗ್ರೇಡ್ – ಡಿ ಗ್ರೇಡ್
ಕೊನೆಯದಾಗಿ ಈ ಹುಡುಗ ಹಿಂಸಾತ್ಮಕವಾಗಿ ವರ್ತಿಸುತ್ತಾನೆ.. ಅಸಮರ್ಥ.. ಆದರೆ ಸುಳ್ಳು ಹೇಳುವುದರಲ್ಲಿ, ದ್ವೇಷ ಹರಡುವುದರಲ್ಲಿ ಪರಿಣಿತ ಅಂತ ಹೇಳಲಾಗಿತ್ತು. ಈ ರಿಪೋರ್ಟ್ ಕಾರ್ಡನ್ನು ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆ ರಮ್ಯಾ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಮೋದಿಯನ್ನು ಹೀಗಳೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv