ನವದೆಹಲಿ : ರಾಜ್ಯ ಸರ್ಕಾರದಿಂದ ಆರ್ಟಿಇ ನಿಯಮ ನಾಲ್ಕಕ್ಕೆ ತಿದ್ದುಪಡಿ ವಿಚಾರಕ್ಕೆ ಸಂಬಂಧಿಸಿದಂತೆ ಸೋಮವಾರದೊಳಗೆ ವಿಸ್ತೃತ ವರದಿ ಸಲ್ಲಿಸಲು ಸುಪ್ರೀಂಕೋರ್ಟ್ ಅರ್ಜಿದಾರರಿಗೆ ಸೂಚಿಸಿದೆ.
Advertisement
ಇಂದು ವಿಚಾರಣೆ ಆರಂಭಿಸಿದ ನ್ಯಾ. ಎನ್.ವಿ ರಮಣ ನೇತೃತ್ವದ ಪೀಠ, ವಾದದ ವರದಿ ಸಲ್ಲಿಕೆ ಬಳಿಕ ಸುದೀರ್ಘ ವಿಚಾರಣೆ ಆಲಿಸುವುದಾಗಿ ಭರವಸೆ ನೀಡಿದೆ. 2019ರ ಆರ್ಟಿಇ ತಿದ್ದುಪಡಿ ಸಂಬಂಧ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ, ಆರ್ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಷನ್ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದೆ.
Advertisement
Advertisement
ಮಕ್ಕಳು ವಾಸಿಸುವ ಪ್ರದೇಶಗಳಲ್ಲಿ ಸರ್ಕಾರಿ ಹಾಗೂ ಇತರೆ ಅನುದಾನಿತ ಶಾಲೆಗಳಿದ್ದಲ್ಲಿ ಖಾಸಗಿ ಶಾಲೆಗಳನ್ನ ಆರ್ಟಿಇ ಅಡಿಯಲ್ಲಿ ಗುರುತಿಸುವಂತಿಲ್ಲ ಎಂದು ನಿಯಮ ನಾಲ್ಕಕ್ಕೆ ತಿದ್ದುಪಡಿ ಮಾಡಲಾಗಿತ್ತು. ಇದನ್ನ ಪ್ರಶ್ನಿಸಿ ಆರ್ಟಿಇ ಸ್ಟೂಡೆಂಟ್ಸ್ ಆ್ಯಂಡ್ ಪೇರೆಂಟ್ಸ್ ಅಸೋಸಿಯೇಷನ್ ರಾಜ್ಯ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಸಲ್ಲಿಸಲಾಗಿತ್ತು. ಹೈಕೋರ್ಟ್ ಸರ್ಕಾರದ ತಿದ್ದುಪಡಿಯನ್ನ ನಿರ್ಧಾರವನ್ನು ಎತ್ತಿ ಹಿಡಿದಿತ್ತು.