ಮುಂಬೈ: ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಲೆಜೆಂಡ್ಸ್ ಲೀಗ್ (RSWS 2022 Final) ಕ್ರಿಕೆಟ್‍ನಲ್ಲಿ ಶ್ರೀಲಂಕಾ ಲೆಜೆಂಡ್ಸ್ (Sri Lanka Legends) ವಿರುದ್ಧ ಫೈನಲ್ ಪಂದ್ಯದಲ್ಲಿ ಭಾರತದ ಲೆಜೆಂಡ್ಸ್ (India Legends) ತಂಡ 33 ರನ್‍ಗಳ ಜಯದೊಂದಿಗೆ ಚಾಂಪಿಯನ್ ಆಗಿದೆ.
Advertisement
ಫೈನಲ್‍ನಲ್ಲಿ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಭಾರತದ ನಮನ್ ಓಜಾ ಶತಕ ಸಿಡಿಸಿ ತಮ್ಮ ಅಬ್ಬರದಾಟ ಪ್ರದರ್ಶನದಿಂದ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 195 ರನ್ ಬಾರಿಸಿತು. 196 ರನ್‍ಗಳ ಗುರಿ ಪಡೆದ ಶ್ರೀಲಂಕಾ ಲೆಜೆಂಡ್ಸ್ ಕನ್ನಡಿಗ ವಿನಯ್ ಕುಮಾರ್ ದಾಳಿಗೆ ನಲುಗಿ 162 ರನ್‍ಗಳಿಗೆ ಸರ್ವಪತನ ಕಂಡು ಸೋಲುಂಡಿದೆ. ಇದನ್ನೂ ಓದಿ: ನಿವೃತ್ತಿಯಾಗುವ ಮುನ್ನ ಪಾಕಿಸ್ತಾನದಲ್ಲಿ ಆಡಿ – ಕೊಹ್ಲಿ ಆಹ್ವಾನಿಸಿದ ಪಾಕ್ ಅಭಿಮಾನಿ
Advertisement
Advertisement
ಶ್ರೀಲಂಕಾ ಪರ ಇಶಾನ್ ಜಯರತ್ನ ಅರ್ಧಶತಕ ಸಿಡಿಸಿದ್ದನ್ನು ಹೊರತು ಪಡಿಸಿ ಉಳಿದ ಬ್ಯಾಟ್ಸ್‌ಮ್ಯಾನ್‌ಗಳು ಭಾರತದ ಲೆಜೆಂಡ್ಸ್ ಆಟಗಾರರ ಬೌಲಿಂಗೆ ಬೆದರಿದರು. ಪರಿಣಾಮವಾಗಿ 18.5 ಓವರ್‌ಗಳ ಅಂತ್ಯಕ್ಕೆ 162 ರನ್‍ಗೆ ಆಲೌಟ್ ಆದರು. ಭಾರತದ ಪರ ವಿನಯ್ ಕುಮಾರ್ 3 ವಿಕೆಟ್ ಪಡೆದು ಮಿಂಚಿದರೆ, ಅಭಿಮನ್ಯು ಮಿಥುನ್ 2 ಮತ್ತು ಸ್ಟುವರ್ಟ್ ಬಿನ್ನಿ, ರಾಜೇಶ್ ಪವರ್, ರಾಹುಲ್ ಶರ್ಮಾ, ಯೂಸುಫ್ ಪಠಾಣ್ ತಲಾ 1 ವಿಕೆಟ್ ಕಿತ್ತರು. ಇದನ್ನೂ ಓದಿ: ಟೀಂ ಇಂಡಿಯಾ ಜೊತೆ ಆಸ್ಟ್ರೇಲಿಯಾಗೆ ಬುಮ್ರಾ – ಮೆಡಿಕಲ್ ಟೀಂನಿಂದ ಶುಭ ಸುದ್ದಿ
Advertisement
ಈ ಮೊದಲು ಬ್ಯಾಟಿಂಗ್‍ನಲ್ಲಿ ನಮನ್ ಓಜಾ ಏಕಾಂಗಿ ಹೋರಾಟ ನಡೆಸಿದರು. ಆರಂಭಿಕರಾಗಿ ಕಣಕ್ಕಿಳಿದ ಸಚಿನ್ ತೆಂಡೂಲ್ಕರ್ ಶೂನ್ಯ ಸುತ್ತಿದರೆ, ರೈನಾ 4, ವಿನಯ್ ಕುಮಾರ್ 36, ಯುವರಾಜ್ 19, ಇರ್ಫಾನ್ ಪಠಾನ್ 11 ಮತ್ತು ಸ್ಟುವರ್ಟ್ ಬಿನ್ನಿ ಅಜೇಯ 8 ರನ್ ಬಾರಿಸಿ ತಂಡಕ್ಕೆ ನೆರವಾದರು. ಆದರೆ ಬ್ಯಾಟಿಂಗ್‍ನಲ್ಲಿ ಓಜಾ ಮಾತ್ರ ಎಲ್ಲರ ಮನಗೆದ್ದರು. 71 ಎಸೆತಗಳಲ್ಲಿ 15 ಬೌಂಡರಿ, 2 ಸಿಕ್ಸ್ ಸಹಿತ 108 ರನ್ ಚಚ್ಚಿದ ಬ್ಯಾಟಿಂಗ್ ಈ ಹಿಂದಿನ ನೆನಪುಗಳನ್ನು ಮೆಲುಕು ಹಾಕುವಂತೆ ಮಾಡಿತು.