ಮಂಗಳೂರು: ಆರ್‍ಎಸ್‍ಎಸ್‍ನವರು ಗೋಡ್ಸೆಯನ್ನು ಗಾಂಧಿ ವಿರುದ್ಧ ಆಯುಧ ಮಾಡಿದರು. ಗಾಂಧಿ ಹತ್ಯೆಯ ದಿನ ದೇಶದಲ್ಲಿ ಸಿಹಿ ಹಂಚಿದರು ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಆರ್‍ಎಸ್‍ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಇಂದು ಮಂಗಳೂರಿನಲ್ಲಿ ನಡೆದ ಕೋಮು ಸೌಹಾರ್ದ ಸಮಾವೇಶದಲ್ಲಿ ಮಾತನಾಡಿದ ಅವರು, ಆರ್‍ಎಸ್‍ಎಸ್ ಬ್ರಿಟಿಷರ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆರ್‍ಎಸ್‍ಎಸ್ ದೇಶದ ಜನರನ್ನು ವಿಭಾಗ ಮಾಡಿದೆ. ಆರ್‍ಎಸ್‍ಎಸ್‍ನವರು ಗೋಡ್ಸೆಯನ್ನು ಗಾಂಧಿ ವಿರುದ್ಧ ಆಯುಧ ಮಾಡಿದರು. ಗಾಂಧಿ ಹತ್ಯೆಯ ದಿನ ದೇಶದಲ್ಲಿ ಸಿಹಿ ಹಂಚಿದರು. ಅಂದು ಆರ್‍ಎಸ್‍ಎಸ್‍ನ ಹಿರಿಯ ಮುಖಂಡರು ಮುಸೋಲಿನಿಯನ್ನು ಭೇಟಿಯಾಗಿದ್ದಾರೆ. ಮುಸೋಲಿನಿ ಜೊತೆ ಸಂಘ ಕಟ್ಟುವ ಚರ್ಚೆ ಮಾಡಿದ್ದಾರೆ. ಆ ನೀತಿಯನ್ನು ದೇಶದಲ್ಲೇ ಜಾರಿಗೆ ತಂದಿದ್ದಾರೆ ಎಂದು ಪಿಣರಾಯಿ ಹೇಳಿದರು.
Advertisement
Advertisement
ಆರ್‍ಎಸ್‍ಎಸ್ ಅಸಹಿಷ್ಣುತೆಗೆ ಸಾಹಿತಿ ಎಂ.ಎಂ.ಕಲಬುರ್ಗಿ ಸಾವು ಸಾಕ್ಷಿಯಾಗಿದೆ. ಆರ್‍ಎಸ್‍ಎಸ್ ಇತರರ ಅಭಿಪ್ರಾಯವನ್ನು ಒಪ್ಪುವುದಿಲ್ಲ. ಗೋವಿಂದ್ ಪನ್ಸಾರೆ, ನರೇಂದ್ರ ದಾಮೋಡ್ಕರ್ ಕೊಲೆಯಾಗಿದೆ. ಬೇರೆ ವಿಚಾರಧಾರೆಯನ್ನು ಒಪ್ಪಿಕೊಳ್ಳಲ್ಲ. ಆರ್‍ಆರ್‍ಎಸ್ ಎಂದೂ ಜನಪರ ನಿಲುವು ಹೊಂದಿಲ್ಲ, ಕೋಮು ಸೌಹಾರ್ದವನ್ನು ಕೆರಳಿಸುತ್ತದೆ. ಅದಕ್ಕಾಗಿ ಇಂದು ಈ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸಿಎಂ ಪಿಣರಾಯಿ ವಾಗ್ದಾಳಿ ನಡೆಸಿದ್ರು.
Advertisement