ರಾಷ್ಟ್ರೀಯ ಸ್ವಯಂಸೇವಕ ಸಂಘವು (ಆರ್‌ಎಸ್‌ಎಸ್) ರಾಷ್ಟ್ರ ರಾಜಧಾನಿಯಲ್ಲಿ ಈ ಹಿಂದಿದ್ದ ತನ್ನ ಕಚೇರಿ ಸ್ಥಳದಲ್ಲೇ ಹೊಸ ಕಚೇರಿ ಸಂಕೀರ್ಣವನ್ನು ನಿರ್ಮಿಸಿದೆ. ಶಿವಾಜಿ ಜಯಂತಿ ದಿನ ಅಂದರೆ ಫೆ.19ರಂದು 150 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಕಟ್ಟಡದ ಉದ್ಘಾಟನಾ ಸಮಾರಂಭ ನಡೆಯಲಿದೆ. ಈ ಕಟ್ಟಡವನ್ನು ʼಕೇಶವ ಕುಂಜ್ʼ ಎಂದು ಕರೆಯಲಾಗುತ್ತದೆ.
ಕಟ್ಟಡದ ಸಂಕೀರ್ಣವನ್ನು ಆರ್‌ಎಸ್‌ಎಸ್ ಮುಖ್ಯಸ್ಥ ಡಾ.ಮೋಹನ್ ಭಾಗವತ್ ನಿರ್ವಹಿಸಲಿದ್ದಾರೆ. ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಉದ್ಘಾಟನಾ ಸಮಾರಂಭದ ನೇತೃತ್ವ ವಹಿಸಲಿದ್ದಾರೆ. ಹಾಗಿದ್ರೆ ಈ ಕಟ್ಟಡ ಹೇಗಿದೆ? ವಿಶೇಷತೆಗಳೇನು ಎಂಬುದನ್ನು ಇಲ್ಲಿ ವಿವರಿಸಲಾಗಿದೆ.
Advertisement
Advertisement
ಹೇಗಿದೆ ಕಟ್ಟಡ?
3.75 ಎಕರೆ ಜಾಗದಲ್ಲಿ ತಲಾ ಹದಿಮೂರು ಅಂತಸ್ತಿನ ಮೂರು ಕಟ್ಟಡಗಳು ಆಧುನಿಕ ತಂತ್ರಜ್ಞಾನದ ಸ್ಪರ್ಶದೊಂದಿಗೆ ಪ್ರಾಚೀನ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಾಣಗೊಂಡಿದ್ದು, 300 ಕೊಠಡಿಗಳನ್ನು ಒಳಗೊಂಡಿವೆ.
Advertisement
ಈ ಕಟ್ಟಡಗಳಿಗೆ ಸಾಧನ, ಪ್ರೇರಣಾ ಮತ್ತು ಅರ್ಚನಾ ಎಂದು ಹೆಸರಿಸಲಾಗಿದೆ. ಯೋಜನೆಯ ಒಟ್ಟು ವೆಚ್ಚ ಸುಮಾರು 150 ಕೋಟಿ ರೂ.ಗಳಾಗಿದ್ದು, ಹಿಂದುತ್ವ ಸಿದ್ಧಾಂತದ ಬಗ್ಗೆ ಒಲವು ಹೊಂದಿರುವ 75,000 ಕ್ಕೂ ಹೆಚ್ಚು ಜನರ ದೇಣಿಗೆಯಿಂದ ಈ ಕಟ್ಟಡವನ್ನು ನಿರ್ಮಿಸಲಾಗಿದೆ.
Advertisement
ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ನವೆಂಬರ್ 2016ರಲ್ಲಿ ಯೋಜನೆಗೆ ಅಡಿಪಾಯ ಹಾಕಿದ್ದರು. ಆದರೆ ಕೋವಿಡ್‌ನಿಂದಾಗಿ ಕೆಲಸ ವಿಳಂಬವಾಯಿತು. ಈಗ, ಕೇಶವ ಕುಂಜ್ ಬಳಕೆಗೆ ಸಿದ್ಧವಾಗಿದೆ. ಆರ್‌ಎಸ್‌ಎಸ್ ಮೂಲಗಳ ಪ್ರಕಾರ, ಯೋಜನೆಯು ಮೂರು ಗೋಪುರಗಳನ್ನು ಹೊಂದಿದ್ದು, ಪ್ರತಿಯೊಂದೂ ನೆಲ ಮಹಡಿ ಮತ್ತು 12 ಹೆಚ್ಚುವರಿ ಮಹಡಿಗಳನ್ನು ಹೊಂದಿದೆ. ಕೇಶವ ಕುಂಜ್‌ನಲ್ಲಿ ಒಟ್ಟು 13 ಲಿಫ್ಟ್‌ಗಳಿದ್ದು, ಮೊದಲ ಮತ್ತು ಎರಡನೇ ಗೋಪುರಗಳಲ್ಲಿ ಐದು ಮತ್ತು ಮೂರನೇ ಗೋಪುರದಲ್ಲಿ ಮೂರು ಇವೆ. ಪ್ರತಿ ಗೋಪುರದಲ್ಲಿ ಸೇವಾ ಲಿಫ್ಟ್ ಕೂಡ ಇದೆ.
ಹೊಸ ಪ್ರಧಾನ ಕಚೇರಿಯನ್ನು ಗುಜರಾತ್ ಮೂಲದ ವಾಸ್ತುಶಿಲ್ಪಿ ಅನೂಪ್ ಡೇವ್ ವಿನ್ಯಾಸಗೊಳಿಸಿದ್ದಾರೆ. ಎರಡನೇ ಮತ್ತು ಮೂರನೇ ಗೋಪುರಗಳ ನಡುವೆ ಒಂದು ದೊಡ್ಡ ತೆರೆದ ಸ್ಥಳವಿದೆ, ಅಲ್ಲಿ ಆರ್‌ಎಸ್‌ಎಸ್ ಸಂಸ್ಥಾಪಕ ಕೇಶವ ಬಲಿರಾಮ್ ಹೆಡ್ಗೆವಾರ್ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಮೂಲಗಳ ಪ್ರಕಾರ ಈ ಪ್ರದೇಶವನ್ನು ‘ಸಂಘ ಸ್ಥಾನ’ (ಆರ್‌ಎಸ್‌ಎಸ್ ಸ್ಥಳ) ಎಂದು ಕರೆಯಲಾಗುತ್ತದೆ.
ಈ ಕಟ್ಟಡವು ರಾಮ ಜನ್ಮಭೂಮಿ ಚಳುವಳಿ ಮತ್ತು ವಿಶ್ವ ಹಿಂದೂ ಪರಿಷತ್ತಿನೊಂದಿಗೆ ಸಂಬಂಧ ಹೊಂದಿರುವ ಪ್ರಮುಖ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರಿನ ದೊಡ್ಡ ಸಭಾಂಗಣವನ್ನು ಸಹ ಹೊಂದಿದೆ. ಕಟ್ಟಡದಲ್ಲಿ ಗ್ರಂಥಾಲಯ, ಆರೋಗ್ಯ ಚಿಕಿತ್ಸಾಲಯ ಮತ್ತು ಒಳಚರಂಡಿ ಸಂಸ್ಕರಣಾ ಘಟಕದಂತಹ ಸೌಲಭ್ಯಗಳನ್ನು ಹೊಂದಿರುತ್ತದೆ. ಈ ಸ್ಥಳದಲ್ಲಿ ಸೌರಶಕ್ತಿಯನ್ನು ಸಹ ಬಳಸಲಾಗುತ್ತಿದೆ.
ಆರ್‌ಎಸ್‌ಎಸ್ ಸಂಬಂಧಿತ ವಾರಪತ್ರಿಕೆಗಳಾದ ಪಾಂಚಜನ್ಯ ಮತ್ತು ಆರ್ಗನೈಸರ್‌ನ ಕಚೇರಿಗಳು ಹಾಗೂ ಸುರುಚಿ ಪಬ್ಲಿಕೇಷನ್‌ಗಳು ಸಹ ಇದೇ ಕಟ್ಟದಲ್ಲಿ ಇರಲಿದೆಯ ಕೇಶವ್ ಕುಂಜ್‌ನ ಎರಡು ಮಹಡಿಗಳನ್ನು ಆರ್‌ಎಸ್‌ಎಸ್ ದೆಹಲಿ ಘಟಕಕ್ಕೆ ಮೀಸಲಿಡಲಾಗುವುದು ಮತ್ತು ಒಂದು ಮಹಡಿಯನ್ನು ವಿಶಾವ್ ಕೇಂದ್ರಕ್ಕೆ ಮೀಸಲಿಡಲಾಗುವುದು. ಸಂಕೀರ್ಣವು ಐದು ಹಾಸಿಗೆಗಳನ್ನು ಹೊಂದಿರುವ ಆಸ್ಪತ್ರೆಯನ್ನು ಸಹ ಒಳಗೊಂಡಿದೆ, ದೈಹಿಕ ಸದೃಢತೆಗಾಗಿ ಯೋಗ ಕೊಠಡಿ ಮತ್ತು ಆಧುನಿಕ ವ್ಯಾಯಾಮ ಉಪಕರಣಗಳು ಸಹ ಲಭ್ಯವಿರುತ್ತವೆ. ಪ್ರಧಾನ ಕಛೇರಿಯು ವೈದ್ಯಕೀಯ ಆರೈಕೆಗಾಗಿ ಐದು ಹಾಸಿಗೆಗಳ ಆಸ್ಪತ್ರೆ, ವಿಶ್ರಾಂತಿಗಾಗಿ ದೊಡ್ಡ ಹುಲ್ಲುಹಾಸುಗಳು ಮತ್ತು ಹನುಮಾನ್ ದೇವಾಲಯವನ್ನು ಸಹ ಹೊಂದಿದೆ.
ಈ ಸಂಕೀರ್ಣವು ಪ್ರಸ್ತುತ 135 ಕಾರುಗಳಿಗೆ ಪಾರ್ಕಿಂಗ್ ಸ್ಥಳವನ್ನು ಹೊಂದಿದ್ದು, ಶೀಘ್ರದಲ್ಲೇ ಇದರ ಸಾಮರ್ಥ್ಯವನ್ನು 270ಕ್ಕೆ ಹೆಚ್ಚಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
1,300ಕ್ಕೂ ಹೆಚ್ಚು ಜನರು ಆಸೀನರಾಗುವಷ್ಟು ಸಾಮರ್ಥ್ಯವಿರುವ ಮೂರು ದೊಡ್ಡ ಸಭಾಂಗಣಗಳಿವೆ. ಕ್ರೀಡಾಂಗಣದ ಆಸನಗಳು ಮತ್ತು ಮೆತ್ತನೆಯ ಸೋಫಾ ಆಸನಗಳನ್ನು ಹೊಂದಿರುವ ಒಂದು ಸಭಾಂಗಣಕ್ಕೆ ಮಾಜಿ ವಿಎಚ್‌ಪಿ ಅಧ್ಯಕ್ಷ ಮತ್ತು ರಾಮ ಮಂದಿರ ಚಳವಳಿಯ ಪ್ರಮುಖ ನಾಯಕ ಅಶೋಕ್ ಸಿಂಘಾಲ್ ಅವರ ಹೆಸರನ್ನು ಇಡಲಾಗಿದೆ. ಮರದ ಅಗತ್ಯತೆಯನ್ನು ಕಡಿಮೆಗೊಳಿಸುವ ಸಲುವಾಗಿ 1,000 ಗ್ರಾನೈಟ್‌ಗಳನ್ನು ಬಳಸಲಾಗಿದೆ.
ಏಕಕಾಲದಲ್ಲಿ 100 ಕ್ಕೂ ಹೆಚ್ಚು ಜನರು ಕುಳಿತುಕೊಳ್ಳಬಹುದಾದ ಸುಸಜ್ಜಿತ ಭೋಜನಾಲಯವನ್ನೂ ಈ ಕಟ್ಟಡ ಒಳಗೊಂಡಿದೆ. ಇನ್ನು ಹೊಸದಾಗಿ ನಿರ್ಮಿಸಲಾದ ʼಕೇಶವ ಪುಸ್ತಕಾಲಯʼ ಗ್ರಂಥಾಲಯದಲ್ಲಿ 8,500ಕ್ಕೂ ಹೆಚ್ಚು ಪುಸ್ತಕಗಳಿವೆ. ಬೌದ್ಧ ಮತ್ತು ಸಿಖ್ ವಿಚಾರಗಳಿಂದ ಹಿಡಿದು ಕ್ರಿಶ್ಚಿಯನ್ ಮತ್ತು ಇಸ್ಲಾಮಿಕ್ ಅಧ್ಯಯನಗಳವರೆಗೆ ಹಲವಾರು ಸೈದ್ಧಾಂತಿಕ ಪಠ್ಯಗಳನ್ನೊಳಗೊಂಡ ಪುಸ್ತಕಗಳು ಈ ಗ್ರಂಥಾಲಯದಲ್ಲಿವೆ. ಗ್ರಂಥಾಲಯವು ಸಾರ್ವಜನಿಕರಿಗೆ ಮುಕ್ತವಾಗಿದೆ.