ಮೈಸೂರು: ತಾಲಿಬಾನ್ ಮತ್ತು ಆರ್‌ಎಸ್‌ಎಸ್ ಸಂಘಟನೆ ನಡುವೆ ಕೆಲವು ಹೋಲಿಕೆ ಇದೆ. ಹೀಗಾಗಿ ಆರ್‌ಎಸ್‌ಎಸ್ ಕೂಡಾ ತಾಲಿಬಾನ್ ಸಂಘಟನೆಯಂತೆ’ ಎಂದು ಚಾಮರಾಜ ನಗರ ಮಾಜಿ ಸಂಸದ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷ ಧ್ರುವ ನಾರಾಯಣ್ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, `ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಧರ್ಮ ಇಟ್ಕೊಂಡು ಆರ್‌ಎಸ್‌ಎಸ್, ತಾಲಿಬಾನ್ ಕೆಲಸ ಮಾಡುತ್ತಿದೆ. ನನ್ನ ವಿರುದ್ಧ ಆರ್‌ಎಸ್‌ಎಸ್, ಬಿಜೆಪಿಯವರು ಏನೇ ಹೋರಾಟ ಮಾಡಿದರೂ ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನಾನು ಖಾಯಂ ಮುಖ್ಯಮಂತ್ರಿ, ಯಾರು ಏನೇ ಅಂದ್ರು ನನ್ನ ಪದವಿಗೆ ಧಕ್ಕೆ ಆಗಲ್ಲ-ಮುಖ್ಯಮಂತ್ರಿ ಚಂದ್ರು
ಬೆಂಗಳೂರು-ಮೈಸೂರು ಹೈವೆ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳೂ ಸೇರುತ್ತದೆ. 2013ರಲ್ಲೇ ಅದರ ಪ್ರಾಜೆಕ್ಟ್ ರೆಡಿಯಾಗಿತ್ತು. ಆಗ ರಾಜ್ಯದಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಯುಪಿಎ ಸರ್ಕಾರ ಇತ್ತು. ಸಿದ್ದರಾಮಯ್ಯ ಹಾಗೂ ಮಹಾದೇವಪ್ಪ ಸೇರಿ ಆಸ್ಕರ್ ಫರ್ನಾಂಡಿಸ್ ಜೊತೆ ಪ್ರಯತ್ನ ಮಾಡಿದ್ದರು. ವಿಶ್ವನಾಥ್ ಅವರ ಜೊತೆಗೂಡಿ ನಾನೂ ಕೂಡಾ ಆ ಪ್ರಯತ್ನದಲ್ಲಿ ಇದ್ದೆ. ನಂತರ ಎನ್‍ಡಿಎ ಸರ್ಕಾರ ಬಂತು. ಪ್ರತಾಪ್ ಸಿಂಹ ಕೂಡಾ ಅದರ ಪ್ರಯತ್ನ ಮಾಡಿದ್ದಾರೆ. ಹಾಗಾಗಿ ಈ ಹೈವೆಯ ಶ್ರೇಯಸ್ಸು ಎಲ್ಲಾ ಜನಪ್ರತಿನಿಧಿಗಳಿಗೂ ಸೇರುತ್ತದೆ ಎಂದರು. ಇದನ್ನೂ ಓದಿ: ದಶಪಥದ ರಸ್ತೆ ಇರೋದು ಮೈಸೂರಿಗಾಗಿ, ಇದಕ್ಕಾಗಿ ಹೆಚ್ಚು ಆಸಕ್ತಿವಹಿಸಿದ್ದೇನೆ: ಪ್ರತಾಪ್ ಸಿಂಹ
ಆರ್‌ಎಸ್‌ಎಸ್-ತಾಲಿಬಾನ್ ಸಂಘಟನೆಯಂತೆ ಎಂದಿದ್ದ ಧ್ರುವ ನಾರಾಯಣ್ ಹೇಳಿಕೆ ಖಂಡಿಸಿ ಮೈಸೂರಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟಿಸಿದರು. ಮೈಸೂರಿನಲ್ಲಿರುವ ಕಾಂಗ್ರೆಸ್ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.