LatestLeading NewsMain PostNational

ಸ್ವತಂತ್ರ ಭಾರತ ತಿರಸ್ಕರಿಸಿ, ಭಗವಾಧ್ವಜವೇ ರಾಷ್ಟ್ರಧ್ವಜ ಎಂದಿತ್ತು ಆರ್‌ಎಸ್‌ಎಸ್‌: ಹರ್‌ ಘರ್‌ ತಿರಂಗಾ ಅಭಿಯಾನಕ್ಕೆ ಓವೈಸಿ ಟಾಂಗ್‌

ನವದೆಹಲಿ: ಭಾರತದ 75ನೇ ಸ್ವಾತಂತ್ರ್ಯೋತ್ಸವದ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕರೆ ನೀಡಿರುವ ʼಹರ್‌ ಘರ್‌ ತಿರಂಗಾʼ ಅಭಿಯಾನಕ್ಕೆ ಎಐಎಂಐಎಂ ಮುಖ್ಯಸ್ಥ ಹಾಗೂ ಸಂಸದ ಅಸಾದುದ್ದೀನ್‌ ಓವೈಸಿ ತಿರುಗೇಟು ನೀಡಿದ್ದಾರೆ.

ಆರ್‌ಎಸ್‌ಎಸ್‌ ಸ್ವತಂತ್ರ ಭಾರತವನ್ನು ತಿರಸ್ಕರಿಸಿತ್ತು. ಭಗವಾಧ್ವಜವನ್ನು ರಾಷ್ಟ್ರಧ್ವಜ ಮಾಡಬೇಕೆಂದು ಒತ್ತಾಯಿಸಿತ್ತು ಎಂದು ಟ್ವೀಟ್‌ ಮಾಡಿ ಆರ್‌ಎಸ್‌ಎಸ್‌ ಮತ್ತು ಪ್ರಧಾನಿ ಮೋದಿ ಅವರಿಗೆ ಓವೈಸಿ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ನರೇಂದ್ರ ಮೋದಿ ಏನು ಮಾಡಿದರೂ ನಾವು ಹೆದರುವುದಿಲ್ಲ: ರಾಹುಲ್ ಗಾಂಧಿ

ದೇಶಭಕ್ತರು ಭಾರತದ ಸ್ವಾತಂತ್ರ್ಯವನ್ನು ಆಚರಿಸಿದರೆ ಆರ್‌ಎಸ್‌ಎಸ್ ಕಹಿಯಾಗುತ್ತದೆ. ಆರ್‌ಎಸ್‌ಎಸ್‌ ಸ್ವಾತಂತ್ರ್ಯ ಚಳವಳಿಯಲ್ಲಿ ಯಾವುದೇ ಪಾತ್ರವನ್ನು ವಹಿಸಲಿಲ್ಲ. ಅಲ್ಲದೇ ಸಂಘಟಕರು, 1947ರ ಆಗಸ್ಟ್‌ 14ರಂದು ಹಿಂದೂ ರಾಷ್ಟ್ರದ ಬೇಡಿಕೆಯಿಟ್ಟಿದ್ದರು ಮತ್ತು ತಿರಂಗಾವನ್ನು ಬಹಿರಂಗವಾಗಿ ಅವಮಾನಿಸಿದ್ದರು. ತ್ರಿವರ್ಣ ಧ್ವಜವನ್ನು ಎಂದಿಗೂ ಗೌರವಿಸಲಾಗುವುದಿಲ್ಲ ಎಂದು ಆರ್‌ಎಸ್‌ಎಸ್‌ ಪ್ರತಿಪಾದಿಸಿತ್ತು ಎಂದು ಓವೈಸಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್ ನಮಗೆ ಅಡಿಪಾಯ. ರಾಷ್ಟ್ರಕ್ಕಾಗಿ ಬದುಕಲು ಸ್ಫೂರ್ತಿ ನೀಡಿದೆ ಎಂದು ಪ್ರಧಾನಿ ಮೋದಿ ಅವರು ಹೊಗಳಿದ್ದಾರೆ. ತಿರಂಗಾವನ್ನು ಪ್ರೊಫೈಲ್‌ಗಳಲ್ಲಿ ಹಾಕಲು ಮತ್ತು ರ‍್ಯಾಲಿಗಳನ್ನು ನಡೆಸಲು ಕರೆ ನೀಡಿದ್ದಾರೆ. ಆದರೆ ಸ್ವತಂತ್ರ ಭಾರತವನ್ನು ಆರ್‌ಎಸ್‌ಎಸ್‌ ತಿರಸ್ಕರಿಸಿತ್ತು ಎಂದು ಅಸಾದುದ್ದೀನ್‌ ಓವೈಸಿ ಕುಟುಕಿದ್ದಾರೆ. ಇದನ್ನೂ ಓದಿ: ರಾಷ್ಟ್ರಧ್ವಜದ ಮೇಲೆ ಕಾಂಗ್ರೆಸ್‍ನವರಿಗೆ ಇರುವುದು ಹುಸಿ ಪ್ರೇಮ: ಬಿಜೆಪಿ

Live Tv

Leave a Reply

Your email address will not be published. Required fields are marked *

Back to top button