– ಆರ್‌ಎಸ್‌ಎಸ್‌ನ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು
ನವದೆಹಲಿ: ಡಿಸಿಎಂ (DK Shivakumar) ಆಗಿ ಸಂಘದ ಪ್ರಾರ್ಥನೆ ಹೇಳುವುದರಲ್ಲಿ ಅಭ್ಯಂತರ ಇಲ್ಲ. ಆದರೇ ಕೆಪಿಸಿಸಿ ಅಧ್ಯಕ್ಷರಾಗಿ ಆರ್‌ಎಸ್‌ಎಸ್ (RSS) ಪ್ರಾರ್ಥನೆ ಹಾಡಿದ್ದು ತಪ್ಪು. ಅಧ್ಯಕ್ಷರಾಗಿ ಹೇಳಿದ್ರೆ ಡಿಕೆ ಶಿವಕುಮಾರ್ ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ಎಂಎಲ್‌ಸಿ ಬಿಕೆ ಹರಿಪ್ರಸಾದ್ (BK Hariprasad) ಹೇಳಿದ್ದಾರೆ.
ಡಿಕೆಶಿ ಆರ್‌ಎಸ್‌ಎಸ್ ಗೀತೆ ಹೇಳಿದ ಕುರಿತು ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು (BJP) ಇಂತಹ ಹೇಳಿಕೆ ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ. ಆರ್‌ಎಸ್‌ಎಸ್‌ನ ದೇಶದಲ್ಲಿ ಈಗಾಗಲೇ ಮೂರು ಬಾರಿ ನಿಷೇಧ ಮಾಡಲಾಗಿತ್ತು. ಡಿಸಿಎಂ ಆಗಿ ಹೇಳಿದ್ರೆ ನಮ್ಮದು ಅಭ್ಯಂತರ ಇಲ್ಲ. ಸರ್ಕಾರ ಎಲ್ಲರ ಸ್ವತ್ತು. ಅದರಲ್ಲಿ ಒಳ್ಳೆಯವರು ಎಲ್ಲಾರೂ ಇರುತ್ತಾರೆ. ಆರ್‌ಎಸ್‌ಎಸ್, ತಾಲಿಬಾನ್‌ಗಳು ಇರುತ್ತಾರೆ. ಕಾಂಗ್ರೆಸ್ ಅಧ್ಯಕ್ಷರಾಗಿ ಹೇಳುವಂತಿಲ್ಲ, ಹೇಳಿದ್ರೆ ಕ್ಷಮೆ ಕೇಳಬೇಕು ಎಂದು ಮನವಿ ಮಾಡಿದರು. ಇದನ್ನೂ ಓದಿ: ಗಣೇಶ ಚತುರ್ಥಿಗೆ ಎರಡೇ ದಿನ ಬಾಕಿ – ಬಿಬಿಎಂಪಿಯಿಂದ 75 ಏಕಗವಾಕ್ಷಿ ಕೇಂದ್ರಗಳ ಸ್ಥಾಪನೆ
ಮಹಾತ್ಮ ಗಾಂಧಿ ಕೊಂದವರು ಆರ್‌ಎಸ್‌ಎಸ್‌ನವರು. ಹೀಗಾಗಿ ಪಕ್ಷದ ನೆಲೆಗಟ್ಟಿನಲ್ಲಿ ಹಾಗೆ ಹೇಳಿದ್ರೆ ಕ್ಷಮೆ ಕೇಳಬೇಕು. ಯಾರಿಗೆ ಸಂದೇಶ ಕೊಡಲು ಆರ್‌ಎಸ್‌ಎಸ್ ಪ್ರಾರ್ಥನೆ ಮಾಡಿದ್ದಾರೋ ಗೊತ್ತಿಲ್ಲ. ಅವರಿಗೆ ಹಲವು ಮುಖಗಳು ಇವೆ. ಕೃಷಿಕರು, ವ್ಯಾಪಾರಸ್ಥರು, ಉದ್ಯೋಗಸ್ಥರು, ರಾಜಕರಣಿ ಅಂತಾ ಹಲವು ಮುಖಗಳಿವೆ. ಗಾಂಧಿ ಕೊಂದ ಸಂಘಟನೆ ಬಗ್ಗೆ ಹೀಗೆ ಹೇಳಿದ್ದಾರೆ. ಇದು ಯಾರಿಗಾದ್ರು ಸಂದೇಶ ಕೊಡುತ್ತಿರಬಹುದು ಎಂದರು. ಇದನ್ನೂ ಓದಿ: ತವರೂರು ಲಕ್ನೋದಲ್ಲಿ ಶುಭಾಂಶು ಶುಕ್ಲಾಗೆ ಭರ್ಜರಿ ಸ್ವಾಗತ
ಬಿಜೆಪಿಯಿಂದ ಧರ್ಮಸ್ಥಳ ಚಲೋ (Dharmasthala Chalo) ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಘಟ್ಟದ ಮೇಲೆ ಮತ್ತು ಕೆಳಗೆ ಇರುವ ಆರ್‌ಎಸ್‌ಎಸ್ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ಬರುತ್ತಿದೆ. ಧರ್ಮಸ್ಥಳದ ವಿಚಾರದಲ್ಲಿ ಈ ಹಿಂದೆ ನಳಿನ್ ಕುಮಾರ್ ಕಟೀಲ್ ಹಾಗೂ ಶಾಸಕ ಸುನಿಲ್ ಕುಮಾರ್ ಹೇಳಿಕೆಗಳು ನೋಡಿ. ಸೌಜನ್ಯ ಪ್ರಕರಣದಲ್ಲಿ ತನಿಖೆ ಆಗಬೇಕೆಂದು ಧರ್ಮಸ್ಥಳಕ್ಕೆ ಹೋಗಿ ಭಾಷಣ ಮಾಡಿದ್ರು, ಎಸ್‌ಐಟಿ ಮಾಡಬೇಕು ಅಂತಾ ಹೇಳಿದ್ದು ಬಿಜೆಪಿಯವರೇ. ಸರ್ಕಾರ ಕಾಲಮಿತಿಯೊಳಗೆ ತನಿಖೆ ಮುಗಿಸಬೇಕು. ಎಸ್‌ಐಟಿ ಧರ್ಮಸ್ಥಳ ದೇವಾಲಯ ಅಥವಾ ದೇವಾಲಯದವರನ್ನ ತನಿಖೆ ಮಾಡುತ್ತಿಲ್ಲ, ಬದಲಾಗಿ ಯಾರು ಆ ಬಗ್ಗೆ ಹೇಳಿಕೆ ನೀಡಿದ್ದಾರೋ ಮಾಸ್ಕಮ್ಯಾನ್, ಸಮೀರ್ ಸೇರಿದಂತೆ ಹಲವರ ಬಗ್ಗೆ ತನಿಖೆ ಮಾಡುತ್ತಿದೆ. ರಾಮಾಯಣ ಕಾಲದಲ್ಲಿ ಸೀತೆಯನ್ನ ಪರೀಕ್ಷಿಸಲಾಯಿತು. ಜನರು ಅರ್ಥ ಮಾಡಿಕೊಳ್ಳಬೇಕು, ಹೇಳಿಕೆ ನೀಡಿರುವವರನ್ನ ಮಾತ್ರ ತನಿಖೆ ಮಾಡುತ್ತಿದ್ದಾರೆ. ಧಾರ್ಮಿಕ ವಿಚಾರದಲ್ಲಿ ರಾಜಕೀಯಕ್ಕೆ ಬಿಜೆಪಿ ಶತಪ್ರಯತ್ನ ಮಾಡುತ್ತಿದೆ. ಆರ್‌ಎಸ್‌ಎಸ್ ಹಾಗೂ ಘಟ್ಟದ ಮೇಲೆ ಇರುವವರ ಗುಂಪಿನಿಂದ ಧರ್ಮಸ್ಥಳಕ್ಕೆ ಅಪಪ್ರಚಾರ ಮಾಡಲಾಗುತ್ತಿದೆ. ಸಂಘದ ಇಬ್ಬರು ಪ್ರಮುಖ ನಾಯಕರಿಂದ ಧರ್ಮಸ್ಥಳದ ಹೆಸರು ಹಾಳಾಗುತ್ತಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್