ಬೆಳಗಾವಿ: ನಗರದಲ್ಲಿ ರಾಷ್ಟ್ರೀಯ ಸ್ವಯಂ ಸಂಘಟನೆ ವತಿಯಿಂದ ಬೃಹತ್ ಆಕರ್ಷಕ ಪಥಸಂಚಲನ ನಡೆಸಿ ಅಖಂಡ ಹಿಂದೂ ಧರ್ಮದ ಏಕತೆಯನ್ನು ಪ್ರದರ್ಶಿಸಿದರು.
ಕಲಿಯುಗಾಬ್ಧ, ಪ್ಲವನಾಮ ಸಂವತ್ಸರ, ಪಾಲ್ಗುಣ ಮಾಸ ದಶಮಿ ಪ್ರಯುಕ್ತ ನಗರದಲ್ಲಿ RSS ಸಂಘಟನೆ ವತಿಯಿಂದ ಆಕರ್ಷಕ ಪಥಸಂಚಲನ ಕಾರ್ಯಕ್ರಮ ಜರುಗಿತು. ಸುಮಾರು ಎರಡು ವರ್ಷಗಳಿಂದ ಕೋವಿಡ್ ಹಿನ್ನೆಲೆಯಲ್ಲಿ ಪ್ರತಿವರ್ಷ ಏರ್ಪಡಿಸುತ್ತಿದ್ದ ಪಥಸಂಚಲನವನ್ನು ರದ್ದುಪಡಿಸಲಾಗಿತ್ತು. ಇದನ್ನೂ ಓದಿ: ಸಿಖ್ಖರು ಈಗ ವಿಮಾನ ನಿಲ್ದಾಣಗಳಲ್ಲಿ ಕಿರ್ಪನ್‍ಗಳನ್ನು ಒಯ್ಯಬಹುದು: ಕೇಂದ್ರದ ಹೊಸ ರೂಲ್ಸ್
ನಗರದ ಲಿಂಗರಾಜ ಕಾಲೇಜು ಆವರಣದಿಂದ ಪ್ರಾರಂಭವಾದ ಪಥಸಂಚಲನ ಕಾಲೇಜು ರಸ್ತೆ, ಗೋಂಧಳಿ ಗಲ್ಲಿ, ಕಂಗ್ರಾಳ್ ಗಲ್ಲಿ, ಕಾಕತಿವೇಸ್ ರಸ್ತೆ, ಶನಿವಾರ ಕೂಟ, ಗಣಪತ್‍ಗಲ್ಲಿ, ಮಾರುತಿ ಗಲ್ಲಿ, ಅನ್ಸೂರ್‌ಕರ್‌ಗಲ್ಲಿ, ನ್ಯೂಕ್ಲಿಎಸ್ ಮಾಲ್ ರಸ್ತೆ, ಸಂಭಾಜಿ ಸರ್ಕಲ್, ಕಿರ್ಲೋಸ್ಕರ್ ರಸ್ತೆ, ರಾಮದೇವ ಗಲ್ಲಿ, ಖಡೆಬಜಾರ್, ಸಮಾದೇವಿ ಗಲ್ಲಿ ಮುಖಾಂತರ ಲಿಂಗರಾಜ್ ಕಾಲೇಜ್ ಆವರಣಕ್ಕೆ ಬಂದು ಪಥಸಂಚಲನ ಸಂಪನ್ನವಾಯಿತು.
ಎಲ್ಲ ಸ್ವಯಂಸೇವಕರು ಈ ಆಕರ್ಷಕ ಪಥಸಂಚಲದಲ್ಲಿ ಕೈಯಲ್ಲಿ ಲಾಠಿ ಹಿಡಿದು, ಶಿಸ್ತಿನಿಂದ ಸಂಚರಿಸುವಾಗ ಸ್ಥಳೀಯ ನಾಗರಿಕರು ರಂಗೋಲಿ ಹಾಕಿ ರಸ್ತೆಯುದ್ದಕ್ಕೂ ಹೂವನ್ನು ಚೆಲ್ಲಿ ಮತ್ತಷ್ಟು ಈ ಯಾತ್ರೆಗೆ ಶೋಭೆಯನ್ನು ತಂದರು. ಇದನ್ನೂ ಓದಿ: ಅದ್ದೂರಿ ಹುಟ್ಟುಹಬ್ಬ ಆಚರಿಸಿಕೊಂಡ ಉಮೇಶ್ ಕತ್ತಿ
ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನಗರದ ಉಪಪೊಲೀಸ್ ಆಯುಕ್ತ ರವೀಂದ್ರ ಗಡಾದಿ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿತ್ತು.