ನವದೆಹಲಿ: ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ವಿರುದ್ಧ ಹಿಂದೂ ಸಂಘಟನೆಗಳು ಈಗ ಆಕ್ರೋಶ ವ್ಯಕ್ತಪಡಿಸಲು ಆರಂಭಿಸಿವೆ.
ಮಂದಿರ-ಮಸೀದಿ (Mandir-Masjid) ವಿಚಾರದಲ್ಲಿ ದಿನಕ್ಕೊಂದು ವಿವಾದಗಳನ್ನು ಸೃಷ್ಟಿಸುತ್ತಿರುವುದು ಸರಿಯಲ್ಲ ಎಂಬ ಸಲಹೆಗೆ ಅಖಿಲ ಭಾರತೀಯ ಸಂತ ಸಮಿತಿ ಆಕ್ರೋಶ ಹೊರಹಾಕಿದೆ
Advertisement
ಹಿಂದೂಗಳ ಧಾರ್ಮಿಕ ನಂಬಿಕೆಗಳ ವಿಚಾರದಲ್ಲಿ ನಿರ್ಣಯ ಕೈಗೊಳ್ಳಬೇಕಿರುವುದು ಧಾರ್ಮಿಕ ಮುಖಂಡರೇ ಹೊರತು, ಸಾಂಸ್ಕೃತಿಕ ಸಂಘಟನೆ ಆರ್‌ಎಸ್‌ಎಸ್ ಅಲ್ಲ. ಧಾರ್ಮಿಕ ಗುರುಗಳ ನಿರ್ಧಾರಗಳನ್ನು ಸಂಘಪರಿವಾರ ಮತ್ತು ವಿಹೆಚ್‌ಪಿ ಒಪ್ಪಬೇಕು ಎಂದು ಎಕೆಎಸ್‌ಎಸ್ ಪ್ರಧಾನ ಕಾರ್ಯದರ್ಶಿ ಸ್ವಾಮಿ ಜಿತೇಂದ್ರನಂದ ಸರಸ್ವತಿ ಸ್ಪಷ್ಟವಾಗಿ ಹೇಳಿದ್ದಾರೆ. ಇದನ್ನೂ ಓದಿ: ಉಡುಪಿ| ದೈವದ ಕಾರಣಿಕ – 28 ವರ್ಷಗಳ ಬಳಿಕ ಮನೆಗೆ ಮರಳಿ ಬಂದ ಮಗ
Advertisement
Advertisement
ಜ್ಯೋತಿರ್ಮಠದ ಅವಿಮುಕ್ತೇಶ್ವರನಂದ ಶಂಕರಾಚಾರ್ಯರು ಸಹ ಭಾಗವತ್ ಧೋರಣೆಯನ್ನು ವಿರೋಧಿಸಿದ್ದಾರೆ. ಅವರಿಗೆ ಅಧಿಕಾರ ಬೇಕಿದ್ದಾಗ ಅವರು ದೇಗುಲಗಳ ಬಗ್ಗೆ ಮಾತನಾಡಿದ್ದರು. ಈಗ ಅವರು ಅಧಿಕಾರದಲ್ಲಿರುವ ಕಾರಣ ದೇಗುಲಗಳ ಕಡೆ ನೋಡಬೇಡಿ ಎಂದು ಸಲಹೆ ನೀಡುತ್ತಿದಾರೆ. ಇದೆಷ್ಟು ಸರಿ ಎಂದು ಕೇಳಿದ್ದಾರೆ.
Advertisement
ಹಿಂದೆ ನಾಶ ಮಾಡಲ್ಪಟ್ಟಿದ್ದ ದೇಗುಲಗಳನ್ನು ಗುರುತಿಸಿ ಪುನರುಜ್ಜೀನಗೊಳಿಸುವ ಮೂಲಕ ಹಿಂದೂಗಳು ತಮ್ಮ ಆಸ್ಮಿತೆಯನ್ನು ಪುನರ್‌ರೂಪಿಸಿಕೊಳ್ತಿದ್ದಾರೆ. ಇದರಲ್ಲಿ ತಪ್ಪೇನಿದೆ ಎಂದು ಅವಿಮುಕ್ತೇಶ್ವರನಂದ ಸ್ವಾಮೀಜಿ ಪ್ರಶ್ನಿಸಿದ್ದಾರೆ. ಮೋಹನ್ ಭಾಗವತ್ ಅವರ ಹೇಳಿಕೆ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಮೋಹನ್ ಭಾಗವತ್ ಹೇಳಿದ್ದೇನು?
ಕೆಲ ದಿನಗಳ ಹಿಂದೆ ಪುಣೆಯಲ್ಲಿ ನಡೆದ ಸಹಜೀವನ ಉಪನ್ಯಾಸ ಮಾಲಿಕೆ ಕಾರ್ಯಕ್ರಮದಲ್ಲಿʼ ಭಾರತ – ವಿಶ್ವಗುರು’ ವಿಷಯದ ಬಗ್ಗೆ ಉಪನ್ಯಾಸ ನೀಡಿದ್ದರು. ಇಂದು ಎಲ್ಲರನ್ನೂ ಒಳಗೊಳ್ಳುವ ಸಮಾಜದ ಅಗತ್ಯವಿದೆ. ದೇಶವು ಸಾಮರಸ್ಯದಿಂದ ಬದುಕಬಹುದು ಎಂಬುದನ್ನು ಜಗತ್ತಿಗೆ ತೋರಿಸಬೇಕಿದೆ ಎಂದಿದ್ದರು.
ರಾಮಕೃಷ್ಣ ಮಿಷನ್‌ನಲ್ಲಿ ಕ್ರಿಸ್‌ಮಸ್ ಆಚರಿಸಲಾಗುತ್ತದೆ. ನಾವು ಹಿಂದೂಗಳಾಗಿರುವುದರಿಂದ ಮಾತ್ರ ಇದನ್ನೆಲ್ಲವನ್ನು ಮಾಡುತ್ತಿದ್ದೇವೆ. ಹೊಸ ಮಂದಿರ-ಮಸೀದಿ ವಿವಾದದಿಂದಾಗಿ ದೇಶದ ಬಹುತ್ವ ಸಿದ್ಧಾಂತಕ್ಕೆ ಪೆಟ್ಟು ಬೀಳುತ್ತಿದೆ. ಹಿಂದೂಗಳ ಆಶಯದಂತೆ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣವಾಗಿದೆ. ಮತ್ತೆ ನಾವು ಹೊಸ ವಿವಾದಗಳಿಗೆ ಅವಕಾಶ ಕಲ್ಪಿಸಿ ಕೊಡಬಾರದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದರು.