ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್‍ಎಸ್‍ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಸೇರಿದಂತೆ ಸಂಘದ ಇತರ ಮುಖಂಡರು ಟ್ವಿಟ್ಟರ್ ಖಾತೆ ತೆರೆದಿದ್ದಾರೆ.
ಆರ್‍ಎಸ್‍ಎಸ್‍ನ ಸರಸಂಘ ಚಾಲಕ ಮೋಹನ್ ಭಾಗವತ್, ಪ್ರಧಾನ ಕಾರ್ಯದರ್ಶಿ ಸುರೇಶ್ ಭಯ್ಯಾಜಿ ಜೋಶಿ, ಜಂಟಿ ಪ್ರಧಾನ ಕಾಯದರ್ಶಿ ಸುರೇಶ್ ಸೋನಿ ಸೇರಿದಂತೆ ಒಟ್ಟು ಆರು ಜನ ಟ್ವಿಟ್ಟರ್ ಖಾತೆಯನ್ನು ತೆರೆದಿದ್ದಾರೆ. ನಕಲಿ ಖಾತೆಗಳ ಮೂಲಕ ತಪ್ಪು ಮಾಹಿತಿ ಹರಡುವುದನ್ನು ತಡೆಯಲು ಈ ಖಾತೆಗಳನ್ನು ತೆರೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
Advertisement
Advertisement
ಮೋಹನ್ ಭಗವತ್ ಅವರು ಮೇ ತಿಂಗಳಲ್ಲೇ ಖಾತೆ ತೆರೆದಿದ್ದು ಈ ವರೆಗೆ ಯಾವುದೇ ಟ್ವೀಟ್ ಮಾಡಿಲ್ಲ. ಅವರ ಟ್ವಿಟ್ಟರ್ ಖಾತೆ @DrMohanBhagwat ಆಗಿದೆ.
Advertisement
ಅಲ್ಲದೆ, ಮೋಹನ್ ಭಾಗವತ್ ಅವರು ಆರ್‍ಎಸ್‍ಎಸ್‍ನ ಅಧಿಕೃತ ಟ್ವಿಟ್ಟರ್ ಖಾತೆಯೊಂದನ್ನೇ ಫಾಲೋ ಮಾಡುತ್ತಿದ್ದಾರೆ. ಆರ್‍ಎಸ್‍ಎಸ್ ಖಾತೆಯನ್ನು 2011ರಲ್ಲಿ ತೆರೆಯಲಾಗಿದ್ದು, 1.3 ಮಿಲಿಯನ್ ಹಿಂಬಾಲಕರನ್ನು ಹೊಂದಿದೆ. ಅಲ್ಲದೆ, ಆರ್‍ಎಸ್‍ಎಸ್‍ನ ಫೇಸ್‍ಬುಕ್ ಪೇಜ್‍ನ್ನು 54 ಲಕ್ಷಕ್ಕೂ ಅಧಿಕ ಜನ ಲೈಕ್ ಮಾಡಿದ್ದಾರೆ. ಆರ್‍ಎಸ್‍ಎಸ್‍ನ ಟ್ವಿಟ್ಟರ್ ಖಾತೆಯನ್ನು ಕೇವಲ ಹೇಳಿಕೆಗಳ ಬಿಡುಗಡೆ ಹಾಗೂ ಮಾಹಿತಿ ರವಾನೆಗೆ ಮಾತ್ರ ಬಳಸಲಾಗುತ್ತಿದೆ.