– ಕೇಳಿದರೂ ಸಿಗದ ಅವಕಾಶ ಇದು.. ಖಂಡಿತಾ ಬರುತ್ತೇನೆಂದ RSS ಮುಖ್ಯಸ್ಥ
ನವದೆಹಲಿ: ಅಯೋಧ್ಯೆ ರಾಮಮಂದಿರ (Ayodhya Ram Mandir) ಉದ್ಘಾಟನೆಗೆ ಆರ್‌ಎಸ್‌ಎಸ್ (RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಅವರಿಗೆ ಆಹ್ವಾನ ನೀಡಲಾಗಿದೆ.
Advertisement
ಅಯೋಧ್ಯೆ ರಾಮಮಂದಿರ ನಿರ್ಮಾಣ ಸಮಿತಿ ಅಧ್ಯಕ್ಷ ನೃಪೇಂದ್ರ ಮಿಶ್ರಾ ಹಾಗೂ ವಿಶ್ವ ಹಿಂದೂ ಪರಿಷತ್ತಿನ ಅಂತಾರಾಷ್ಟ್ರೀಯ ಕಾರ್ಯಾಧ್ಯಕ್ಷ ಅಲೋಕ್ ಕುಮಾರ್ ಅವರು ಇಂದು (ಬುಧವಾರ) ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರಿಗೆ ರಾಮಮಂದಿರ ‘ಪ್ರಾಣ ಪ್ರತಿಷ್ಠೆ’ ಸಮಾರಂಭಕ್ಕೆ ಆಹ್ವಾನ ನೀಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆಗೆ ತಲುಪಿತು 2,400 ಕೆ.ಜಿಯ ದೇಶದ ಅತೀ ದೊಡ್ಡ ಘಂಟೆ
Advertisement
Advertisement
ಇಂತಹ ಅದ್ಧೂರಿ ಸಮಾರಂಭದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ. ಏಕೆಂದರೆ ಶ್ರೀರಾಮನ ದೇವಾಲಯವು ಕೇವಲ ಪೂಜೆಯ ದೇವಾಲಯವಲ್ಲ. ಇದು ಈ ದೇಶದ ಪಾವಿತ್ರ್ಯತೆ ಮತ್ತು ಈ ದೇಶದ ಘನತೆಯ ಸ್ಥಾಪನೆಯ ಸಂದರ್ಭವಾಗಿದೆ. ಇಡೀ ದೇಶದಲ್ಲಿ ಶ್ರೀರಾಮನನ್ನು ಮರ್ಯಾದಾ ಪುರುಷೋತ್ತಮ ಎಂದು ಪರಿಗಣಿಸಲಾಗಿದೆ. ನಾವು ಸ್ವತಂತ್ರರಾದಾಗ, ಸ್ವಾತಂತ್ರ್ಯದಲ್ಲಿ ‘ಸ್ವಯಂ’ ನಮ್ಮ ಘನತೆಯಾಗಿದೆ. ಆ ‘ಸ್ವ’ದಿಂದಲೇ ನಮ್ಮ ಬದುಕು ಪವಿತ್ರ, ಆ ‘ಸ್ವ’ದಿಂದಲೇ ನಮಗೆ ಜಗತ್ತಿನಾದ್ಯಂತ ಪ್ರತಿಷ್ಠೆ ಎಂದು ಮೋಹನ್ ಭಾಗವತ್ ತಿಳಿಸಿದ್ದಾರೆ.
Advertisement
ಈ ಕಾರ್ಯಕ್ರಮಕ್ಕೆ ಎಲ್ಲರೂ ಬರಲು ಸಾಧ್ಯವಿಲ್ಲ. ಕೆಲವರಿಗೆ ಆಹ್ವಾನ ಬಂದಿದ್ದು, ಬರುತ್ತಾರೆ. ಆದರೆ, ಪ್ರತಿ ಹಳ್ಳಿ ಮತ್ತು ಪ್ರತಿ ಮನೆಯಲ್ಲೂ ಅದರ ಉತ್ಸಾಹವಿದೆ. ಇದಕ್ಕೆ ಕಾರಣ, ಬಹಳ ವರ್ಷಗಳ ನಂತರ ನಾವು ಭಾರತದ ‘ಸ್ವಯಂ’ ಸಂಕೇತವನ್ನು ಪುನರ್ನಿರ್ಮಿಸುತ್ತಿರುವುದು. ಅದು ನಮ್ಮ ಪ್ರಯತ್ನದ ಆಧಾರದ ಮೇಲೆ ಆಯಿತು ಎಂದು ಹೇಳಿದ್ದಾರೆ. ಇದನ್ನೂ ಓದಿ: 8 ಕೆಜಿ ಬೆಳ್ಳಿ ಪಾದುಕೆ ಹೊತ್ತು 7,200 km ಪಾದಯಾತ್ರೆ – 64ರ ವೃದ್ಧನ ಭಕ್ತಿಗೆ ರಾಮನ ಭಕ್ತರಿಂದ ಮೆಚ್ಚುಗೆ
ನಾವು ಹಲವು ದಶಕಗಳಿಂದ ನಮ್ಮದೇ ಆದ ದಿಕ್ಕನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ನಾವು ಅದನ್ನು ಕಂಡುಕೊಂಡಿದ್ದು, ಈಗ ಅದನ್ನು ಸ್ಥಾಪಿಸಿದ್ದೇವೆ. ಪ್ರತಿಯೊಬ್ಬರ ಮನಸ್ಸಿನಲ್ಲಿ ಒಂದು ನಂಬಿಕೆಯು ನೆಲೆಗೊಂಡಿದೆ. ಇದರಿಂದಾಗಿ ಇಡೀ ದೇಶದ ವಾತಾವರಣವು ಮಂಗಳಕರವಾಗಿದೆ ಎಂದು ಖುಷಿ ವ್ಯಕ್ತಪಡಿಸಿದ್ದಾರೆ.
ಇದು ಯಾವುದೋ ಜನ್ಮದಲ್ಲಿ ಎಲ್ಲೋ ಮಾಡಿದ ಪುಣ್ಯವಾಗಿರಬೇಕು. ಅದರ ಫಲವನ್ನು ನಾವೀಗ ಪಡೆಯುತ್ತಿದ್ದೇವೆ. ಆದ್ದರಿಂದ ನಾನು ನಿಮಗೆ ಕೃತಜ್ಞತೆಯಿಂದ ಧನ್ಯವಾದ ಹೇಳುತ್ತೇನೆ. ಕೇಳಿದರೂ ಸಿಗದ ಅವಕಾಶ ಇದು. ಸಿಕ್ಕಿದೆ… ಖಂಡಿತಾ ಇರುತ್ತೇನೆ ಎಂದು ರಾಮಮಂದಿರ ಟ್ರಸ್ಟ್ ಆಹ್ವಾನಕ್ಕೆ ಧನ್ಯವಾದ ತಿಳಿಸಿದ್ದಾರೆ. ಇದನ್ನೂ ಓದಿ: ಅಯೋಧ್ಯೆಯ ಸೀತಾಮಾತೆಗೆ ಸೂರತ್‌ನಲ್ಲಿ ಸಿದ್ಧಗೊಂಡಿದೆ ಸ್ಪೆಷಲ್ ಸೀರೆ – ವಿಶೇಷತೆ ಏನು?