ವಿಜಯಪುರ: ಸ್ವಾತಂತ್ರ‍್ಯ ಹೋರಾಟದಲ್ಲಿ (Freedom Fight) ಆರ್‌ಎಸ್‌ಎಸ್ (RSS), ವಿಹೆಚ್‌ಪಿ (VHP) ಹಾಗೂ ಬಿಜೆಪಿ (BJP) ಭಾಗಿಯಾಗಿರಲಿಲ್ಲ. ಅವರು ಬ್ರಿಟಿಷರ (British) ಜೊತೆಗೆ ಶಾಮೀಲಾಗಿದ್ದರು. ಆದರೂ ಅವರು ತಮ್ಮನ್ನು ತಾವು ಸ್ವಾತಂತ್ರ್ಯ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಸಚಿವ ರಾಮಲಿಂಗಾ ರೆಡ್ಡಿ (Ramalinga Reddy) ವಾಗ್ದಾಳಿ ನಡೆಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ರಾಮಲಿಂಗಾ ರೆಡ್ಡಿ, ಸ್ವಾತಂತ್ರ‍್ಯ ಹೋರಾಟದಲ್ಲಿ ಲಕ್ಷಾಂತರ ಜನರು ಭಾಗವಹಿಸಿದ್ದರು. ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸದೇ ತಾವೇ ಆರ್‌ಎಸ್‌ಎಸ್, ಬಿಜೆಪಿಯವರು ಸ್ವಾತಂತ್ರ‍್ಯ ಹೋರಾಟಗಾರರೆಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರು ಸುಳ್ಳು ಹೇಳಿಕೊಂಡು ರಾಜಕೀಯ ಮಾಡುತ್ತಿರುವುದರೊಂದಿಗೆ, ದೇಶವನ್ನು ಛಿದ್ರ ಛಿದ್ರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು. ಇದನ್ನೂ ಓದಿ: ರಾಯಚೂರು ಏಮ್ಸ್ ಹೋರಾಟಗಾರರಿಂದ ಶಾಸಕನ ಮನೆಗೆ ಮುತ್ತಿಗೆ
Advertisement
Advertisement
ಬಿಜೆಪಿ ಭಾರತೀಯ ಜನತಾ ಪಕ್ಷ ಎನ್ನುವ ಬದಲಿಗೆ ಬುರುಡೆ ಜನರ ಪಕ್ಷ ಹೆಸರು ಬದಲಾಯಿಸಿಕೊಳ್ಳಬೇಕು. ಅವರು ಸುಳ್ಳು ಹೇಳಿ ಜನರನ್ನು ತಪ್ಪು ದಾರಿಗೆ ತರುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ ಎಂದರು.
Advertisement
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಹಿನ್ನೆಲೆ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಪರ ರಾಮಲಿಂಗಾ ರೆಡ್ಡಿ ಬ್ಯಾಟ್ ಬೀಸಿ, ನಾವು ಕರ್ನಾಟಕದವರು ಎಂದರು. ರಾಹುಲ್ ಗಾಂಧಿ ಮಾತಿನಂತೆ ಚುನಾವಣೆ ಆಗುತ್ತಿದೆ. ಶಶಿ ತರೂರು, ಖರ್ಗೆ ಮಧ್ಯೆ ಚುನಾವಣೆ ಆಗುತ್ತಿದೆ. ಯಾರು ಗೆಲ್ಲುತ್ತಾರೆ ನೋಡೋಣ ಎಂದರು. ಇದನ್ನೂ ಓದಿ: ಹಾಸನದಲ್ಲಿ ಭೀಕರ ರಸ್ತೆ ಅಪಘಾತ- ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ