ಬೆಂಗಳೂರು: ಉತ್ತರಪ್ರದೇಶ ಮತ್ತು ಗುಜರಾತ್ ಚುನಾವಣೆಯಲ್ಲಿ ಜಯ ಸಾಧಿಸಿರುವ ಬಿಜೆಪಿ ಅದೇ ಪ್ಲ್ಯಾನ್ ಗಳನ್ನು ಕರ್ನಾಟಕದಲ್ಲಿ ಅಳವಡಿಸಿಕೊಂಡಿದೆ. ಚುನವಾಣೆ ಹತ್ತಿರವಾಗುತ್ತಿದ್ದಂತೆ ಅಮಿತ್ ಶಾ ರಾಜ್ಯಕ್ಕೆ ಪದೇ ಪದೇ ಭೇಟಿ ನೀಡುತ್ತಿದ್ದು, ರಾಜ್ಯದ ನಾಯಕರೊಂದಿಗೆ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಆರ್‍ಎಸ್‍ಎಸ್ ತನ್ನ ಕಾರ್ಯಕರ್ತರನ್ನು ಚುನಾವಣಾ ಕಣಕ್ಕೆ ಇಳಿಸಿದೆ. ತಮಗೆ ನೀಡಿರುವಂತಹ ಕ್ಷೇತ್ರಗಳಲ್ಲಿ ಆರ್‍ಎಸ್‍ಎಸ್ ಕಾರ್ಯಕರ್ತರು ಹಿಂದುತ್ವ ಅಜೆಂಡಾ, ಮೋದಿ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಮಾಡಲಿದ್ದಾರೆ. ಒಂದು ವಾರದಿಂದ ಫೀಲ್ಡ್ ಗೆ ಇಳಿದಿರುವ ಕಾರ್ಯಕರ್ತರು ಬೂತ್ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.
Advertisement
ಒಂದು ವಿಧಾನಸಭಾ ಕ್ಷೇತ್ರದಲ್ಲಿ ಬೈಕ್ ನಲ್ಲಿ ಇಬ್ಬರು ವಿಸ್ತಾರಕರು ಸಂಚಾರ ಮಾಡುತ್ತಿದ್ದಾರೆ. ಉತ್ತರಪ್ರದೇಶ ಚುನಾವಣೆಗೆ ಬಳಸಿದ ಬೈಕ್ ಗಳನ್ನೇ ರಾಜ್ಯದಲ್ಲೂ ಬಳಸಲಾಗುತ್ತಿದ್ದು, ವಿಸ್ತಾರಕರು ಸಂಚಾರದ ಮೂಲಕ ಕ್ಷೇತ್ರದ ಲಾಭ-ನಷ್ಟಗಳ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಉತ್ತರಪ್ರದೇಶ, ಗುಜರಾತ್ ಚುನಾವಣಾ ಮಾದರಿಯನ್ನೇ ಕರ್ನಾಟಕದಲ್ಲಿ ಬಿಜೆಪಿ ಅನುಸರಿಸುತ್ತಿದ್ದು, ಇದು ಇಲ್ಲಿ ವಕೌರ್ಟ್ ಆಗುತ್ತಾ ಎಂದು ಕಾದು ನೋಡಬೇಕಿದೆ.