ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪ ಅವರು ರಾಜೀನಾಮೆ ನೀಡಿದ ಬಳಿಕ ಇವತ್ತು ಬೆಂಗಳೂರಿನಲ್ಲಿ ಆರ್‍ಎಸ್‍ಎಸ್ ನಾಯಕರನ್ನು ಭೇಟಿಯಾಗಿದ್ದಾರೆ.
ಬುಧವಾರ ಕಾವೇರಿ ನಿವಾಸದಲ್ಲಿ ಆರ್‍ಎಸ್‍ಎಸ್ ಮುಖಂಡ ಮುಕುಂದ್ ಜೊತೆ ಚರ್ಚೆ ನಡೆಸಿದ್ರು. ಇವತ್ತು ಚಾಮರಾಜಪೇಟೆಯಲ್ಲಿರುವ ಕೇಶವಕೃಪಾಕ್ಕೆ ಭೇಟಿ ನೀಡಿದ್ದರು. ಇಲ್ಲೂ ಮುಕುಂದ್ ಅವರ ಜೊತೆ ಚರ್ಚೆ ಮಾಡಿದ್ರು. ಯಡಿಯೂರಪ್ಪ ಅವರಿಗೆ ರಾಜ್ಯಪಾಲರ ಹುದ್ದೆ ಒಪ್ಪಿಕೊಳ್ಳುವಂತೆ ಆರ್‍ಎಸ್‍ಎಸ್ ಮನವೊಲಿಕೆ ಮಾಡಿದೆ ಎನ್ನಲಾಗಿದೆ.
ಆರ್‍ಎಸ್‍ಎಸ್ ನಾಯಕರ ಭೇಟಿ ಬಳಿಕ ಮಾತನಾಡಿದ ಯಡಿಯೂರಪ್ಪ, ಗಣಪತಿ ಹಬ್ಬದ ಬಳಿಕ ಪ್ರತಿ ಜಿಲ್ಲೆಗೆ ಪ್ರವಾಸ ಮಾಡುತ್ತೇನೆ. ಮುಂದಿನ ಚುನಾವಣೆಯಲ್ಲಿ 135-150 ಸ್ಥಾನ ಗೆದ್ದು ಪಕ್ಷ ಅಧಿಕಾರಕ್ಕೆ ತರುವ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು. ಈ ಮಧ್ಯೆ, ಶ್ಯಾಡೋ ಸಿಎಂ ಅನ್ನೋ ಟೀಕೆಗಳ ಮಧ್ಯೆಯೇ ಇವತ್ತು ಕೂಡ ಯಡಿಯೂರಪ್ಪರನ್ನು ಭೇಟಿಯಾಗಿ ಸಿಎಂ ಬೊಮ್ಮಾಯಿ ಮಾತುಕತೆ ನಡೆಸಿದರು. ಇದನ್ನೂ ಓದಿ: ಯಾರಿಗೆ ಕೊಕ್ ನೀಡ್ತಾರೆ ಗೊತ್ತಿಲ್ಲ, ನಾನ್ ಮಾತ್ರ ಸಂಪುಟದಲ್ಲಿ ಇರ್ತೀನಿ: ಎಂಟಿಬಿ ನಾಗರಾಜ್
ರಾಜೀನಾಮೆ ನೀಡಿದ ದಿನದಂದು ಮಾಧ್ಯಮಗಳ ಜೊತೆ ಮಾತನಾಡಿದ್ದ ಯಡಿಯೂರಪ್ಪ, ಪಕ್ಷದಿಂದ ಯಾವ ಹುದ್ದೆಯನ್ನು ಬಯಸಲ್ಲ. ರಾಜ್ಯಪಾಲನಾಗಿ ಯಾವುದೋ ರಾಜ್ಯದಲ್ಲಿ ಕುಳಿತಲ್ಲ. ರಾಜಕಾರಣದಿಂದ ನಿವೃತ್ತಿ ಪಡೆಯಲ್ಲ. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ರಾಜೀನಾಮೆಗೆ ದೆಹಲಿ ನಾಯಕರಿಂದ ಯಾವುದೇ ಒತ್ತಡ ಬಂದಿಲ್ಲ. ಬೇರೆಯವರಿಗೂ ಅವಕಾಶ ಮಾಡಿಕೊಡುವ ದೃಷ್ಟಿಯಿಂದ ಸ್ವಯಂಪ್ರೇರಿತವಾಗಿ ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಇದಕ್ಕೂ ಮೊದಲು ಸರ್ಕಾರ ರಚನೆಯ ಎರಡು ವರ್ಷದ ಸಂಭ್ರಮಾಚರಣೆ ವೇದಿಕೆಯಲ್ಲಿ ತಮ್ಮ ರಾಜೀನಾಮೆ ನಿರ್ಧಾರ ತಿಳಿಸಿ ಕಣ್ಣೀರು ಹಾಕಿದ್ದರು. ಇದನ್ನೂ ಓದಿ: ಉಸಿರಿರೋತನಕ ಕೇಳಿ ಸಚಿವ ಸ್ಥಾನ ಪಡೆಯಲ್ಲ- ಕುಂದಾಪುರದ ವಾಜಪೇಯಿ ಹಾಲಾಡಿ ನೇರ ನುಡಿ