ಹೈದರಾಬಾದ್: ಬುಧವಾರ ಆರ್ಎಸ್ಎಸ್ ಪ್ರಮುಖ ಮೋಹನ್ ಭಾಗವತ್ ಹೇಳಿಕೆಗೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ತಿರುಗೇಟು ನೀಡಿದ್ದಾರೆ. ಆರ್ಎಸ್ಎಸ್ ಬಳಿಯಲ್ಲಿರುವ ಬುದ್ಧಿ ಶೂನ್ಯ, ಆದ್ರೆ ಮುಸ್ಲಿಮರ ಮೇಲಿನ ಅವರ ದ್ವೇಷ ಮಾತ್ರ ಶೇ.100ರಷ್ಟು ಎಂದು ಟ್ವೀಟ್ ಮಾಡಿದ್ದಾರೆ.
ಮೋಹನ್ ಭಾಗವತ್ ಪ್ರಕಾರ, 1930ರಿಂದಲೇ ಮುಸ್ಲಿಮರ ಜನಸಂಖ್ಯೆಯನ್ನ ಹೆಚ್ಚಿಸುವ ಪ್ರಯತ್ನ ನಡೆದಿತ್ತು. ಒಂದು ವೇಳೆ ಎಲ್ಲರ ಡಿಎನ್ಎ ಒಂದೇ ಆಗಿದ್ರೆ ಈ ಎಣಿಕೆ ಏಕೆ? ಇನ್ನೂ ಎರಡನೇ ವಿಷಯ, 1950 ರಿಂದ 2011ರ ನಡುವೆ ಮುಸ್ಲಿಮರ ಜನಸಂಖ್ಯೆ ಬೆಳವಣಿಗೆ ದರ ಇಳಿಕೆಯಾಗಿದೆ. ಹಾಗಾಗಿ ಸಂಘದವರ ಬಳಿಯಲ್ಲಿರುವ ಬುದ್ಧಿ ಶೂನ್ಯವಾಗಿದ್ದು, ಶೇ.100ರಷ್ಟು ಮುಸ್ಲಿಮರ ವಿರುದ್ಧ ದ್ವೇಷವನ್ನು ಹೊಂದಿದ್ದಾರೆ ಎಂದು ಆರೋಪಿಸಿದ್ದಾರೆ.
Advertisement
Advertisement
ಎರಡನೇ ಟ್ವೀಟ್ ನಲ್ಲಿ ಆರ್ಎಸ್ಎಸ್ ವಿರುದ್ಧ ಕಿಡಿಕಾರಿರುವ ಓವೈಸಿ, ಮುಸ್ಲಿಮರನ್ನು ದ್ವೇಷಿಸುವುದು ಸಂಘದವರ ಅಭ್ಯಾಸ. ನಿಧಾನವಾಗಿ ಸಮಾಜದಲ್ಲಿ ವಿಷ ಹರಡುವಿಕೆ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಹಿಂದೆ ಮೋಹನ್ ಭಾಗವತ್ ಎಲ್ಲರೂ ಒಂದು ಅಂತ ಹೇಳಿದ್ದರು. ಈ ಹೇಳಿಕೆ ಬಳಿಕ ಅವರ ಸಮರ್ಥಕರು ಭಾಗವತ್ ಅವರಿಗೆ ತೊಂದರೆ ಕೊಟ್ಟಿರಬಹುದು. ಹಾಗಾಗಿ ಮುಸ್ಲಿಮರು ಕಡಿಮೆ ಎಂದು ತೋರಿಸಲು ಭಾಗವತ್ ಮತ್ತೊಮ್ಮೆ ಸುಳ್ಳು ಹೇಳಲು ಮುಂದಾಗಿದ್ದಾರೆ. ಆಧುನಿಕ ಭಾರತದಲ್ಲಿ ಹಿಂದುತ್ವಕ್ಕೆ ಎಲ್ಲಿಯೂ ಸ್ಥಳ ಇರಬರಾದು ಅಂತ ಹೇಳಿದ್ದಾರೆ. ಇದನ್ನೂ ಓದಿ: ಸಂಘ ಪರಿವಾರಕ್ಕೆ ದೇಶದ 130 ಕೋಟಿ ಜನರೂ ಹಿಂದೂಗಳೇ: ಮೋಹನ್ ಭಾಗವತ್
Advertisement
Sangh is addicted to anti-Muslim hate & poisoned society with it. All of Bhagwat’s drama about “we are one” earlier this month must have discomfited his followers too much. So he had to get back to demonising Muslims & lying. Hindutva should have no place in modern India 2/2
— Asaduddin Owaisi (@asadowaisi) July 22, 2021
Advertisement
ಮೋಹನ್ ಭಾಗವತ್ ಹೇಳಿದ್ದೇನು?:
1930ರಿಂದಲೇ ಸಂಘಟಿತ ರೂಪದಲ್ಲಿ ಮುಸ್ಲಿಮರ ಜನಸಂಖ್ಯೆಯನ್ನ ಹೆಚ್ಚಿಸುವ ಪ್ರಯತ್ನ ನಡೆದಿವೆ. ಈ ಮೂಲಕ ತಮ್ಮ ಸಾಮಾಥ್ರ್ಯ ಹೆಚ್ಚಿಸಿಕೊಳ್ಳುವುದು. ತಮ್ಮ ಸಮುದಾಯದ ಸಂಖ್ಯೆಯನ್ನು ವಿಸ್ತರಿಸಿಕೊಂಡು ಈ ದೇಶವನ್ನು ಮತ್ತೊಂದು ಪಾಕಿಸ್ತಾನ ಮಾಡುವುದು. ಪಂಜಾಬ್, ಸಿಂಧ್, ಅಸ್ಸಾಂ ಮತ್ತು ಬಂಗಾಳದ ಆಸುಪಾಸಿನಲ್ಲಿ ಈ ಕೆಲಸ ನಡೆಯುತ್ತಿದೆ. ಈ ಪ್ಲಾನ್ ನಲ್ಲಿ ಒಂದು ಹಂತದವರೆಗೆ ಅವರು ಸಫಲರಾಗಿದ್ದಾರೆ. ಪಂಜಾಬ್ ಮತ್ತು ಬಂಗಾಳದಲ್ಲಿ ಅರ್ಧ ಭಾಗ ಅವರಿಗೂ ಸಿಕ್ಕಿದ್ದು, ಅಸ್ಸಾಂ ಲಭ್ಯವಾಗಿಲ್ಲ. ಇಷ್ಟು ಆದ್ರೂ ಅವರು ತಮ್ಮ ಪ್ರಯತ್ನ ಬಿಟ್ಟಿಲ್ಲ ಎಂದು ಮೋಹನ್ ಭಾಗವತ್ ಬುಧವಾರ ಹೇಳಿದ್ದರು. ಇದನ್ನೂ ಓದಿ: ಕೇಂದ್ರ ಸರ್ಕಾರ ಬೆನ್ನು ತೋರಿಸಿ ಓಡ್ತಿದೆ: ಅಸಾದುದ್ದೀನ್ ಓವೈಸಿ