ಚಂಡೀಘಡ: ಡಿಜಿಟಲ್ ಮೊಬೈಲ್ ವ್ಯಾಲೆಟ್ ಮೊಬಿಕ್ವಿಕ್ ಸಂಸ್ಥೆಯ ಖಾತೆಯಿಂದ ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿದೆ.
ಮೊಬಿಕ್ವಿಕ್ ಸಂಸ್ಥೆಯ ಖಾತೆಗಳನ್ನು ಪರೀಶಿಲನೆಯನ್ನು ಮಾಡಿದ ನಂತರ ಭಾರೀ ಮೊತ್ತದ ಹಣವು ನಾಪತ್ತೆಯಾಗಿರುವ ಮಾಹಿತಿ ಹೊರಬಂದಿದೆ. ಘಟನೆ ಬಗ್ಗೆ ಮಾಹಿತಿ ಪಡೆದ ನಂತರ ಸಂಸ್ಥೆಯ ಅಧಿಕಾರಿಗಳು ಹಣ ನಾಪತ್ತೆಯಾಗಿರುವ ಕುರಿತು ಪೋಲಿಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಮೊಬಿಕ್ವಿಕ್ ಸಿಸ್ಟಮ್ಸ್ ಪ್ರೈವೆಟ್ ಲಿಮಿಟೆಡ್ ಸಂಸ್ಥೆಯ ಗ್ರಾಹಕರ ಖಾತೆಗಳಿಂದ ಕಡಿತವಾಗಬೇಕಿದ್ದ ಹಣ ಸಂಸ್ಥೆಯ ವೈಯಕ್ತಿಕ ಖಾತೆಯಿಂದ ಕಡಿತಗೊಳಿಸಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
Advertisement
ಗುರುಗಾಂವ್ ಸೆಕ್ಟರ್ 53ರ ಪೊಲೀಸ್ ಠಾಣೆಯ ಸೈಬರ್ ಕ್ರೈಮ್ ವಿಭಾಗದಲ್ಲಿ ಐಪಿಸಿ ಸೆಕ್ಷನ್ 420(ವಂಚನೆ) ಮತ್ತು 406(ಕ್ರಿಮಿನಲ್ ಅಪರಾಧ)ರ ಪ್ರಕಾರ ದೂರು ದಾಖಲಾಗಿದೆ ಎಂದು ಸಂಸ್ಥೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Advertisement
ಪ್ರಕರಣವನ್ನು ಇಂದು ದಾಖಲು ಮಾಡಿಕೊಳ್ಳಲಾಗಿದ್ದು, ದೂರಿನಲ್ಲಿ ನೀಡಿರುವ ಮಾಹಿತಿಯನ್ನು ಪರಿಶೀಲನೆಯನ್ನು ಮಾಡುತ್ತಿದ್ದೇವೆ. ಸುಮಾರು 19 ಕೋಟಿ ರೂ. ಹಣ ನಾಪತ್ತೆಯಾಗಿರುವ ಕುರಿತು ದೂರಿನಲ್ಲಿ ಮಾಹಿತಿಯನ್ನು ನೀಡಲಾಗಿದೆ. ಶೀಘ್ರದಲ್ಲಿಯೇ ಕ್ರಮ ಕೈಗೊಳ್ಳಲಾಗುವುದು ಎಂದು ಸೈಬರ್ ಕ್ರೈಮ್ ವಿಭಾಗದ ಅಧಿಕಾರಿ ಅನಂದ್ ಯಾದವ್ ತಿಳಿಸಿದ್ದಾರೆ.
Advertisement
ಸಂಸ್ಥೆಯ ಸಿಬ್ಬಂದಿ ಉದ್ದೇಶಪೂರ್ವವಾಗಿಯೇ ಲೋಪ ಎಸಗಿದ್ದಾರೋ ಅಥವಾ ಯಾವುದೋ ಬಗ್ ನಿಂದ ಹಣ ನಾಪತ್ತೆಯಾಗಿದೆಯೋ ಎನ್ನುವುದು ತಿಳಿದು ಬಂದಿಲ್ಲ. ಪ್ರಕರಣ ತನಿಖೆ ಪೂರ್ಣಗೊಳಿಸಿದ ನಂತರವಷ್ಟೇ ಸತ್ಯಾಂಶ ಹೊರಬರಲಿದೆ ಎಂದು ಯಾದವ್ ಪ್ರತಿಕ್ರಿಯಿಸಿದ್ದಾರೆ.
ಸಂಸ್ಥೆಯ ಹಣವು ನಾಪತ್ತೆಯಾದ ತಕ್ಷಣ ಗುರುಗಾಂವ್ ಸೈಬರ್ ಕ್ರೈಂ ವಿಭಾಗಕ್ಕೆ ದೂರನ್ನು ನೀಡಿದ್ದೇವೆ. ಅಲ್ಲದೇ ಸಂಸ್ಥೆಯ ಖಾತೆಗಳಿಗೆ ಸೂಕ್ತ ರಕ್ಷಣೆಯನ್ನು ನೀಡಲಾಗಿದೆ ಎಂದು ಮೊಬಿಕ್ವಿಕ್ ಸಂಸ್ಥೆಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಇಚ್ಚಿಗೆ ಅಂತರ್ಜಾಲದಲ್ಲಿ ಹಣವನ್ನು ವಂಚನೆ ಮಾಡುವ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, 2016ರ ನಂತರ ನಗರದಲ್ಲಿ ಸುಮಾರು 2,270 ಪ್ರಕರಣಗಳು ಸೈಬರ್ ವಂಚನೆ ಅಪರಾಧ ಅಡಿಯಲ್ಲಿ ದಾಖಲಾಗಿವೆ. 2015ರಲ್ಲಿ ವರ್ಷದಲ್ಲಿ ಸುಮಾರು 1,963 ಪ್ರಕರಣಗಳು ದಾಖಲಾಗಿದ್ದು, ಸುಮಾರು 15% ರಷ್ಟು ಪ್ರಕರಣಗಳ ಸಂಖ್ಯೆ ಹೆಚ್ಚಳವಾಗಿದೆ. ಪ್ರಸ್ತುತ ವರ್ಷದಲ್ಲಿ ಇದುವರೆಗೆ ಸುಮಾರು 1,260 ಪ್ರಕರಣಗಳು ದಾಖಲಾಗಿವೆ. ಈ ಎಲ್ಲಾ ಪ್ರಕರಣಗಳು ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಆನ್‍ಲೈನ್ ಬ್ಯಾಂಕಿಂಗ್ ಮಾಡುವ ಸಮಯದಲ್ಲಿ ವಂಚನೆಗೊಳಗಾಗಿರುವ ಪ್ರಕರಣಕ್ಕೆ ಸಂಬಂಧಿಸಿವೆ ಎಂದು ಪೊಲೀಸ್ ಅಧಿಕಾರಿ ಮಾಹಿತಿಯನ್ನು ನೀಡಿದ್ದಾರೆ.