ನವದೆಹಲಿ: ಪ್ರತಿವರ್ಷ ವರಮಹಾಲಕ್ಷ್ಮಿ ಹಬ್ಬವನ್ನ ಅದ್ದೂರಿಯಾಗಿ ಆಚರಿಸುತ್ತಿದ್ದ ಇಂಧನ ಸಚಿವ ಡಿ.ಕೆ ಶಿವಕುಮಾರ್‍ಗೆ ಈ ಬಾರಿ ಐಟಿ ಸಂಕಟ ತಂದಿಟ್ಟಿದ್ದು, ದೆಹಲಿಯ ಆಪ್ತ ಆಂಜನೇಯ ನಿವಾಸದಲ್ಲಿ ಜೋಡಿಸಿಟ್ಟಿದ್ದ 8.5 ಕೋಟಿ ನೋಟುಗಳು ಬಹಿರಂಗವಾಗಿವೆ.
100 ರೂ, 500 ರೂ ಮತ್ತು 2000 ಸಾವಿರ ನೋಟುಗಳನ್ನ ಪ್ರತ್ಯೇಕವಾಗಿ 3 ಸಾಲಿನಲ್ಲಿ ಕಂತೆ ಕಂತೆಯಾಗಿ ಜೋಡಿಸಿಡಲಾಗಿದೆ. ಇದೆಲ್ಲವೂ ದೆಹಲಿಯ ಸಫ್ದಾರ್‍ಜಂಗ್ ಎನ್‍ಕ್ಲೇವ್‍ನ ಡಿಕೆಶಿ ಮನೆಯಲ್ಲಿದ್ದ ಹಣವಾಗಿದೆ. ಗುರುವಾರ ವಿಚಾರಣೆ ವೇಳೆ ಆಂಜನೇಯ ಹಣ ಇರುವ ವಿಚಾರದ ಬಗ್ಗೆ ತಪ್ಪೊಪ್ಪಿಕೊಂಡಿದ್ದರು ಎನ್ನುವ ಮಾಹಿತಿಯನ್ನು ಮಾಧ್ಯಮವೊಂದು ಪ್ರಸಾರ ಮಾಡಿತ್ತು.
Advertisement
ಬೆಂಗಳೂರಿನ ಡಿಕೆಶಿ ನಿವಾಸದಲ್ಲಿ ಸತತ ಮೂರನೇ ದಿನವೂ ಐಟಿ ವಿಚಾರಣೆ ಮುಂದುವರಿದಿದೆ. ಬೆಳಗ್ಗಿನಿಂದಲೂ ಡ್ರಿಲ್ ಮಾಡಿರುವ ಐಟಿ ಅಧಿಕಾರಿಗಳು, ವಿವಿಧ ಬ್ಯಾಂಕ್ ಖಾತೆಗಳು ಹಾಗೂ ವಿದೇಶದ ಹಣದ ವ್ಯವಹಾರದ ಬಗ್ಗೆಯೂ ಮಾಹಿತಿ ಸಂಗ್ರಹಿಸಿದ್ದಾರೆ. ಮೂರು ದಿನಗಳ ತನಿಖೆಯಲ್ಲಿ ನೂರು ಕೋಟಿಗೂ ಹೆಚ್ಚಿನ ಆಸ್ತಿ ಪತ್ರಗಳು ಸಿಕ್ಕಿದೆ ಎನ್ನಲಾಗಿದೆ. ಇವತ್ತು ರಾತ್ರಿಯೂ ತನಿಖೆ ಮುಂದುವರಿಯುವ ಸಾಧ್ಯತೆ ಇದೆ.
Advertisement
Advertisement
ಇಂಧನ ಸಚಿವ ಡಿ.ಕೆ.ಶಿವಕುಮಾರ್ ನಿರ್ದೇಶನನದಲ್ಲಿ ನಾನು 5 ಕೋಟಿ ರೂ. ಹಣವನ್ನು ಸಾಗಿಸಿದ್ದೇನೆ ಎಂದು ಎಚ್.ಆಂಜನೇಯ ಅವರು ಆದಾಯ ತೆರಿಗೆ ಇಲಾಖೆ ಅಧಿಕಾರ ವಿಚಾರಣೆ ವೇಳೆ ಬಾಯಿಬಿಟ್ಟಿದ್ದರು.
Advertisement
ಹೇಳಿಕೆಯಲ್ಲೇನಿದೆ?: ಶೈಲೇಂದರ್ 1 ಕೋಟಿ ರೂ., 2.5 ಕೋಟಿ ರೂ., 1.5 ಕೋಟಿ ರೂ. ಸೇರಿ ಒಟ್ಟು 5 ಕೋಟಿ ರೂ. ಹಣವನ್ನು ತಂದಿದ್ದರು. ಕಳೆದ ವಾರ 1.60 ಕೋಟಿ ರೂ. ಹಣವನ್ನು ನಾನೇ ಸಾಗಿಸಿದೆ. ಸಚಿವ ಡಿಕೆ ಶಿವಕುಮಾರ್ ಅವರ ಸೂಚನೆಯಂತೆ ನಾನು ಹಣವನ್ನು ಬಿ2/107 ಮನೆಯಿಂದ ಬಹ/201 ಮನೆಗೆ ಸಾಗಿಸಿದ್ದೇನೆ. ಆದರೆ ಈ ಹಣವನ್ನು ನನ್ನ ಮೂಲಕವೇ ಯಾಕೆ ಸಾಗಿಸಿದ್ದಾರೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿರುವ ಪ್ರಶ್ನಾವಳಿಗೆ ಆಂಜನೇಯ ಸಹಿ ಹಾಕಿದ್ದಾರೆ ಎಂದು ಸುದ್ದಿ ವಾಹಿನಿ ವರದಿ ಮಾಡಿದೆ.
ಬಿಜೆಪಿ ಸಚಿವರ ಮೇಲೂ ದಾಳಿ ಆಗಲಿ: ಸಚಿವ ಪ್ರಮೋದ್ ಮಧ್ವರಾಜ್ https://t.co/oCT4KW08yK#Udupi #PramodhMadhvaraj #DKShivakumar #ITraid pic.twitter.com/faHb1Dmbnh
— PublicTV (@publictvnews) August 4, 2017
ಡಿಕೆಶಿ ತಾಯಿ ಮಾಧ್ಯಮಗಳಿಗೆ ಸಿಗದಂತೆ ಬೆಂಬಲಿಗರಿಂದ ಕಾವಲು! https://t.co/7VAVQvSRbi#DKShivakumar #Media #Gouramma #Videos pic.twitter.com/W3vuCnFxN6
— PublicTV (@publictvnews) August 4, 2017
ಡಿಕೆಶಿ ರಾಜೀನಾಮೆ ಕೇಳೋದಕ್ಕೆ ಬಿಜೆಪಿಗೆ ಯಾವ ನೈತಿಕತೆ ಇದೆ: ಸಿಎಂ ಪ್ರಶ್ನೆ https://t.co/Sk7eiDQb0W#Bengaluru #Siddaramaiah #DKShivakumar #ITRaid pic.twitter.com/Es5VVlQEOD
— PublicTV (@publictvnews) August 4, 2017