ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಜಯ ಪಡೆದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ದೇಶದ ಕಡು ಬಡವರ ಕುಟುಂಬಕ್ಕೆ ವಾರ್ಷಿಕ 72 ಸಾವಿರ ರೂ. ಆದಾಯ ನೀಡಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಕನಿಷ್ಠ ಆದಾಯ ಭರವಸೆ ನೀಡಿದ 2 ತಿಂಗಳ ಬಳಿಕ ಕಾಂಗ್ರೆಸ್ ಪಕ್ಷ ಈ ಆಶ್ವಾಸನೆಯನ್ನು ನೀಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಧ್ಯಕ್ಷ ರಾಹುಲ್ ಗಾಂಧಿ, ‘ನ್ಯಾಯ’ ಯೋಜನೆ ಜಾರಿಗೆ ತರುವ ಮೂಲಕ ಬಡ ಕುಟುಂಬಕ್ಕೆ ತಿಂಗಳಿಗೆ 6 ಸಾವಿರದಂತೆ, ಅಂದರೆ ವಾರ್ಷಿಕ 72 ಸಾವಿರ ರೂ. ಆದಾಯವನ್ನು ನೀಡಲಾಗುತ್ತದೆ. ಯೋಜನೆಯಿಂದ ದೇಶದ 20% ರಷ್ಟು ಜನರಿಗೆ, ಅಂದರೆ 25 ಕೋಟಿ ಮಂದಿಗೆ ಅನುಕೂಲ ಆಗಲಿದೆ ಎಂದು ತಿಳಿಸಿದ್ದಾರೆ.
Advertisement
5 crore families, that is, approximately 25 crore people will benefit from Minimum Income Guarantee scheme: Congress President @RahulGandhi #RahulForBehtarBharat pic.twitter.com/jInDgUXu5I
— Congress (@INCIndia) March 25, 2019
Advertisement
ಜಗತ್ತಿನ ಅತಿ ದೊಡ್ಡ ಕನಿಷ್ಠ ಆದಾಯ ಯೋಜನೆ ಇದಾಗುತ್ತದೆ. ಅಲ್ಲದೇ ಗಬ್ಬರ್ ಸಿಂಗ್ ಟ್ಯಾಕ್ಸ್ ಪದ್ಧತಿಯನ್ನು ರದ್ದುಗೊಳಿಸಿ, ಜಿಎಸ್‍ಟಿ ಸರಳೀಕರಣ ಮಾಡಲಾಗುವುದು. ಈ ಮೂಲಕ ದೇಶದ ಸಣ್ಣ ಮತ್ತು ಮಧ್ಯಮ ವರ್ಗದ ಉದ್ಯಮಗಳನ್ನು ಮರು ಸ್ಥಾಪಿಸಿ ಆ ಮೂಲಕ ಉದ್ಯೋಗ ಅವಕಾಶ ಹೆಚ್ಚಿಸಲಾಗುವುದು. ದೇಶದ ಸ್ವಾವಲಂಬಿ ಬದುಕಿನ ಸಾಮಥ್ರ್ಯ ಹೆಚ್ಚಸುವ ಉದ್ದೇಶದಿಂದ ಕೇಂದ್ರ ಸರ್ಕಾರಿ ಕೆಲಸ ಹಾಗೂ ಪಿಎಸ್‍ಯುಎಸ್ ನಲ್ಲಿ ಮಹಿಳೆಯರಿಗೆ 33% ಮೀಸಲಾತಿ ನೀಡಲಾಗುವುದು ಎಂದು ಆಶ್ವಾಸನೆ ನೀಡಿದರು.
Advertisement
ದೇಶದ ಜನತೆಗೆ ಗರಿಷ್ಠ ಆರೋಗ್ಯ ಖಾತರಿ ನೀಡಲಾಗುವುದು. ಆಯುಷ್ಮಾನ್ ಭಾರತ್ ನಂತೆ ಸೀಮಿತ ಜನರಿಗೆ ಕನಿಷ್ಟ ಹಣ ನೀಡುವುದು ನಮ್ಮ ಯೋಜನೆಯ ಗುರಿಯಲ್ಲ. ಆರೋಗ್ಯ ರಕ್ಷಣೆಯನ್ನು ಒಂದು ಮೂಲಭೂತ ವಿಚಾರವಾಗಿ ಪರಿಗಣಿಸಿರುವುದರಿಂದ ಆರೋಗ್ಯ ವೃತ್ತಿಪರರ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದರು.
Advertisement
14 crore people were lifted out of poverty under MNREGA scheme. Minimum Income Guarantee scheme will lift 25 crore people out of poverty: Congress President @RahulGandhi #RahulForBehtarBharat pic.twitter.com/9Fgxtg4rtt
— Congress (@INCIndia) March 25, 2019