ಚಿಕ್ಕಬಳ್ಳಾಪುರ: ಪ್ರಕರಣವೊಂದರ ಬಿ ರಿಪೋರ್ಟ್ ಸಲ್ಲಿಕೆಗೆ 70 ಸಾವಿರ ಲಂಚ ಪಡೆದ ಪ್ರಕರಣದಲ್ಲಿ ASI ಹಾಗೂ PSI ಇಬ್ಬರನ್ನ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ (Chikkaballapura) ನಡೆದಿದೆ.
ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸ್ (Chikkaballapura Rural Police Station) ಠಾಣೆಯ ಪಿಎಸ್ಐ ಶರಣಪ್ಪ ಹಾಗೂ ಎಎಸ್‌ಐ ವೆಂಕಟೇಶ್ ಇಬ್ಬರನ್ನ ಚಿಕ್ಕಬಳ್ಳಾಪುರ ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಅಂದಹಾಗೆ ಚಿಕ್ಕಬಳ್ಳಾಪುರ ತಾಲೂಕಿನ ಮೋಟಲೂರು ಗ್ರಾಮದ ರಘು ಎಂಬತನ ಬಳಿ ಪ್ರಕರಣ ಒಂದರ ಬಿ ರಿಪೋರ್ಟ್ ಸಲ್ಲಿಕೆಗಾಗಿ 1 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಈ ಸಂಬಂಧ 70 ಸಾವಿರ ರೂಪಾಯಿ ಲಂಚ ಪಡೆಯುವಾಗ ಚಿಕ್ಕಬಳ್ಳಾಪುರ ನಗರದ ಕನ್ನಡ ಭವನದ ಬಳಿ ಎಎಸ್‌ಐ ವೆಂಕಟೇಶ್ ರನ್ನ ರೆಡ್ ಅಂಡ್ ಆಗಿ ಹಿಡಿಯಲಾಗಿದೆ.
ಇನ್ನು ಪಿಎಸ್ಐ ಶರಣಪ್ಪ ಸೂಚನೆ ಮೇರೆಗೆ ಎಎಸ್‌ಐ ವೆಂಕಟೇಶ್ ಸೂಚನೆ ಮೇರೆಗೆ ಹಣ ಪಡೆದಿದ್ದಾರೆ ಎನ್ನಲಾಗಿದ್ದು ಪಿಎಸ್ಐ ಶರಣಪ್ಪನನ್ನ ಸಹ ವಶಕ್ಕೆ ಪಡೆಯಲಾಗಿದೆ.

