ಲಕ್ನೋ: ಹೆಚ್ಚಿನ ಹಣದ ಅವಶ್ಯಕತೆ ಇದ್ದಾಗ ಭಿಕ್ಷೆ ಬೇಡುತ್ತಿದ್ದ ವ್ಯಕ್ತಿ ಸಾಯುವಾಗ ಶ್ರೀಮಂತನಾಗಿ ಸತ್ತ ಅಚ್ಚರಿಯ ಘಟನೆಯೊಂದು ಉತ್ತರಪ್ರದೇಶದಲ್ಲಿ ನಡೆದಿದೆ.
ವ್ಯಕ್ತಿಯನ್ನು ಧೀರಜ್ ಎಂದು ಗುರುತಿಸಲಾಗಿದೆ. ಈತ ಪ್ರಯಾಗರಾಜ್‍ನಲ್ಲಿರುವ ಮುಖ್ಯ ವೈದ್ಯಕೀಯ ಮತ್ತು ಆರೋಗ್ಯ ಅಧಿಕಾರಿ ಆಸ್ಪತ್ರೆಯ ಕುಷ್ಠರೋಗ ವಿಭಾಗದಲ್ಲಿ ಕಸ ಗುಡಿಸುವ ಕೆಲಸ ಮಡುತ್ತಿದ್ದನು. ಕ್ಷಯರೋಗದಿಂದ ಬಳಲುತ್ತಿದ್ದ ಈತ ಭಾನುವಾರ ನಸುಕಿನ ವೇಳೆಯಲ್ಲಿ ಸಾವನ್ನಪ್ಪಿದ್ದಾನೆ.
ಧೀರಜ್ ಮರಣದ ಬಳಿಕ ಆತನ ಬ್ಯಾಂಕ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಇರುವುದು ಪತ್ತೆಯಾಗಿದೆ. ಧೀರಜ್‍ನ ತಂದೆಯೂ ಇದೇ ಆಸ್ಪತ್ರೆಯಲ್ಲಿ ಸ್ವೀಪರ್ ಆಗಿದ್ದು, ಅವರ ಮರಣದ ನಂತರ ಧೀರಜ್‍ಗೆ ಈ ಕೆಲಸ ಸಿಕ್ಕಿತ್ತು. ಇದನ್ನೂ ಓದಿ: ಹೈವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶಿಸಿ ಇಬ್ಬರು ಸ್ಥಳದಲ್ಲೇ ಸಾವು
ಇತ್ತ ಕೆಲವೊಂದು ಬಲವಾದ ಕಾರಣಗಳಿಂದಾಗಿ ತಂದೆ ಹಾಗೂ ಮಗ ಇಬ್ಬರೂ ತಮ್ಮ ಸಂಬಳ ಬರುವ ಬ್ಯಾಂಕ್ ಖಾತೆಯಿಂದ ಯಾವುದೇ ಹಣವನ್ನು ಡ್ರಾ ಮಾಡುತ್ತಿರಲಿಲ್ಲ. ತಂದೆಯಂತೆ ಧೀರಜ್ ಕೂಡ ರಸ್ತೆಯಲ್ಲಿ ನಡೆದುಕೊಂಡು ಹೋಗುವವರಿಂದ ಹಣ ಕೇಳುತ್ತಾ, ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಿದ್ದನು.
ಧೀರಜ್ ತನ್ನ ಬ್ಯಾಂಕ್ ಖಾತೆಯಿಂದ ಒಂದು ಬಾರಿಯೂ ಹಣ ಡ್ರಾ ಮಾಡಿರಲಿಲ್ಲ. ತನ್ನ 80 ವರ್ಷದ ತಾಯಿಗೆ ಬರುವ ಪಿಂಚಣಿಯಿಂದ ಜೀವನ ನಡೆಸುತ್ತಿದ್ದರು. ಅಲ್ಲದೆ ಹೆಚ್ಚಿನ ಹಣದ ಅಗತ್ಯವಿದ್ದರೆ ಸ್ನೇಹಿತರು ಹಾಗೂ ಹೊರಗಡೆ ಭಿಕ್ಷೆ ಬೇಡುತ್ತಿದ್ದನು. ಹೀಗಾಗಿ ಧೀರಜ್ ಖಾತೆಯಲ್ಲಿ ಸುಮಾರು 70 ಲಕ್ಷಕ್ಕೂ ಅಧಿಕ ಹಣ ಉಳಿದುಕೊಂಡಿದೆ ಎನ್ನಲಾಗಿದೆ.
ಕೆಲ ತಿಂಗಳ ಹಿಂದೆ ಅಧಿಕಾರಿಗಳು ಧೀರಜ್ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಅವರು ಹಣದ ಬಗ್ಗೆ ಧೀರಜ್ ಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದರು. ಆಗ ಧೀರಜ್, ನಯವಾಗಿಯೇ ಉತ್ತರಗಳನ್ನು ನೀಡುವ ಮೂಲಕ ಅವರನ್ನು ತೃಪ್ತಿಪಡಿಸಿ ಕಳುಹಿಸಿದ್ದನು.
ಧೀರಜ್ ಇನ್ನೂ ಮದುವೆಯಾಗಿಲ್ಲ. ಯಾಕೆಂದರೆ ಒಂದು ವೇಳೆ ಮದುವೆಯಾದರೆ ಆ ಹೆಣ್ಣು ಹಣಕ್ಕೆ ಮರುಳಾಗುತ್ತಾಳೆ ಅಥವಾ ತನ್ನ ಹಣದೊಂದಿಗೆ ಎಸ್ಕೇಪ್ ಆಗಬಹುದು ಎಂದು ಧೀರಜ್ ಅಂದುಕೊಂಡಿದ್ದಾನೆ. ಹೀಗಾಗಿ ಅವನು ಇನ್ನೂ ಮದುವೆ ಯೋಚನೆ ಮಾಡಿಲ್ಲ. ಅಲ್ಲದೆ ಆತ ಪ್ರತೀ ವರ್ಷನೂ ತೆರಿಗೆ ಕಟ್ಟುತ್ತಿದ್ದಾನೆ ಎಂದು ಸ್ನೇಹಿತ ಹೇಳಿದ್ದಾನೆ.