– ಬೆಂಗಳೂರಲ್ಲಿ 1.20 ಲಕ್ಷ ರೂ. ಮೌಲ್ಯದ ಡ್ರಗ್ಸ್ ಸಿಕ್ಕಿದೆ ಎಂದ ಗೃಹ ಸಚಿವ
ಬೆಂಗಳೂರು: ನಗರದಲ್ಲಿ 56 ಕೋಟಿ ರೂ. ಮೌಲ್ಯದ ಡ್ರಗ್ಸ್ (Drugs) ಸಿಕ್ಕಿದೆ ಎಂಬ ಮಾಹಿತಿ ಸುಳ್ಳು. ಮಹಾರಾಷ್ಟ್ರ ಪೊಲೀಸರು ಸುಳ್ಳು ಹೇಳಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ (G.Parameshwara) ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಮೇಶ್ವರ್, ಡ್ರಗ್ಸ್ ವಿಚಾರದಲ್ಲಿ ಕಳೆದ ಮೂರು ತಿಂಗಳಿಂದ ಕಾರ್ಯಾಚರಣೆ ಮಾಡಲಾಗಿದೆ. 165 ಕೋಟಿ ಮೌಲ್ಯದ ಡ್ರಗ್ಸ್ ಸೀಜ್ ಮಾಡಲಾಗಿದೆ. ಮಹಾರಾಷ್ಟ್ರ ಪೊಲೀಸರು ಆರೋಪಿಯೊಬ್ಬನ ಮಾಹಿತಿ ಆಧಾರದ ಮೇಲೆ ಇವತ್ತು ಬೆಂಗಳೂರಿನಲ್ಲಿ ಕಾರ್ಯಾಚರಣೆ ಮಾಡಿದ್ದಾರೆ. ನಮ್ಮವರು ಸೇರಿ ಕಾರ್ಯಾಚರಣೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹೊಸ ವರ್ಷಾಚರಣೆ ಹೊಸ್ತಿಲಲ್ಲೇ ಭರ್ಜರಿ ಬೇಟೆ; ಬೆಂಗಳೂರಲ್ಲಿ 55.88 ಕೋಟಿ ಮೌಲ್ಯದ ಡ್ರಗ್ಸ್ ಸೀಜ್
58 ಕೋಟಿ ಡ್ರಗ್ಸ್ ಮಾಹಿತಿ ಸುಳ್ಳು. ಮಹಾರಾಷ್ಟ್ರ ಪೊಲೀಸರು ಸುಳ್ಳು ಮಾಹಿತಿ ಕೊಟ್ಟಿದ್ದಾರೆ. 1.20 ಲಕ್ಷ ಮೌಲ್ಯದ ಡ್ರಗ್ಸ್ ಸಿಕ್ಕಿದೆ. 5 ಕೆ.ಜಿ ಡ್ರಗ್ಸ್ ಸಿಕ್ಕಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಹೊಸ ವರ್ಷಕ್ಕೆ ಬಂದು ಸ್ಟಾಕ್ ಮಾಡಿಕೊಂಡಿದ್ದಾರೆ. ಅದು ಸ್ವಾಭಾವಿಕ ಎಂದಿದ್ದಾರೆ.
ಹೊಸ ವರ್ಷಾಚರಣೆಗೆ ಕ್ರಮಗಳ ಕುರಿತು ಮಾತನಾಡಿ, ಜೈಲಿನ ಆಕ್ಟಿವಿಟಿಸ್ ಏನು ಎಂದು ಮಾಹಿತಿ ಕಲೆ ಹಾಕಲಾಗಿದೆ. ಕಠಿಣ ಸೂಚನೆ ಕೊಡಲಾಗಿದೆ. ಸೆಲೆಬ್ರೆಟ್ ರೆಸ್ಪಾನ್ಸಿಬಲಿಟಿ ಎಂದು ಸ್ಲೋಗನ್ ಮಾಡಲಾಗಿದೆ ಎಂದು ಕಿವಿ ಮಾತು ಹೇಳಲಾಗುತ್ತಿದೆ. ಅದ್ದೂರಿ ಹೊಸ ವರ್ಷ ಬರಮಾಡಿಕೊಳ್ಳೋಣ ಎಚ್ಚರದಿಂದ. ಪೊಲೀಸರ ಸಹಕಾರ ಇರುತ್ತೆ. ಮಕ್ಕಳ ಜೊತೆ ಸಂಪರ್ಕದಲ್ಲಿ ಇರಬೇಕು. ಸೇಫ್ಟಿ ಕಾಪಾಡಿಕೊಳ್ಳಲು ಜನರ ಸಹಕಾರ ಇರಬೇಕು ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: ಪ್ಯಾರಾಗ್ಲೈಡರ್ ಟೇಕಾಫ್ ಆದ ಕೆಲಹೊತ್ತಲ್ಲೇ ಅಪಘಾತ; ಪೈಲಟ್ ಸಾವು, ಪ್ರವಾಸಿಗನಿಗೆ ಗಾಯ
ಡ್ರಗ್ಸ್ ವಿರುದ್ಧ ವಾರ್ ಡಿಕ್ಲೇರ್ ಮಾಡಲಾಗಿದೆ. ಪೊಲೀಸರು ವಿರುದ್ಧ ಕ್ರಮ ಆಗುತ್ತೆ. ಬೆಂಗಳೂರು ಸಿಟಿಯಲ್ಲಿ ಇಂತಹ ಘಟನೆ ಆಗಬಾರದು. ಅವರ ಮೇಲೆ ಕ್ರಮ ತಗೆದುಕೊಳ್ಳಲಾಗುತ್ತದೆ. ಡಿಸಿಪಿ ಹಾಗೂ ಸಂಬAಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.


