– ಕಳೆದ ಸಾಲಿನಲ್ಲಿ ಗ್ಯಾರಂಟಿಗೆ ಸರ್ಕಾರ ಮೀಸಲಿಟ್ಟಿದ್ದೆಷ್ಟು? ಖರ್ಚಾಗಿರೋದೆಷ್ಟು?
ಬೆಂಗಳೂರು: 2024-25 ಸಾಲಿಗೆ ಕಾಂಗ್ರೆಸ್ (Congress) ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ (Guarantee Schemes) 52,009 ಕೋಟಿ ರೂ. ಹಣವನ್ನು ಮೀಸಲಿಡಲಾಗಿದೆ.
Advertisement
ಯಾವುದಕ್ಕೆ ಎಷ್ಟು ಹಣ ಮೀಸಲು?
ಗೃಹಜ್ಯೋತಿ – 9,657 ಕೋಟಿ ರೂ.
ಅನ್ನಭಾಗ್ಯ – 8,079 ಕೋಟಿ
ಶಕ್ತಿ – 5,015 ಕೋಟಿ
ಯುವನಿಧಿ – 650 ಕೋಟಿ
ಗೃಹಲಕ್ಷ್ಮಿ – 28,608 ಕೋಟಿ ರೂ.
Advertisement
Advertisement
2023-24ರಲ್ಲಿ ಗ್ಯಾರಂಟಿ ಯೋಜನೆ ಕಾರ್ಯ ಸಾಧನೆಯ ವಿವರವನ್ನೂ ಸರ್ಕಾರ ಹಂಚಿಕೊಂಡಿದೆ. ಈ ಅವಧಿಯಲ್ಲಿ ಗ್ಯಾರಂಟಿ ಯೋಜನೆಗಳಿಗೆ ನಿಗದಿ ಮಾಡಿದ್ದು, 35,410 ಕೋಟಿ ರೂ. ಇದನ್ನೂ ಓದಿ: Karnataka Budget 2024: ಸರ್ಕಾರಕ್ಕೆ 1 ರೂಪಾಯಿ ಬಂದಿದ್ದು ಎಲ್ಲಿಂದ? 1 ರೂ. ಹೋಗಿದ್ದು ಎಲ್ಲಿಗೆ?
Advertisement
ಗೃಹಲಕ್ಷ್ಮಿ – 8,181 ಕೋಟಿ ರೂ. ಖರ್ಚು (ನಿಗದಿ ಮಾಡಿದ್ದು – 17,500 ಕೋಟಿ ರೂ.)
ಅನ್ನಭಾಗ್ಯ – 2,900.12 ಕೋಟಿ ಖರ್ಚು (10,000 ಕೋಟಿ ಮೀಸಲು) (ಅಕ್ಕಿ ಕೊಡೋಕೆ ಪ್ಲ್ಯಾನ್ ಇತ್ತು. ಹೀಗಾಗಿ ಹಣ ನಿಗದಿ ಮಾಡಿರಲಿಲ್ಲ).
ಗೃಹಜ್ಯೋತಿ – 2,900 ಕೋಟಿ (ನಿಗದಿ – 13,910 ಕೋಟಿ)
ಶಕ್ತಿ- 2,800 ಕೋಟಿ ಖರ್ಚು (ನಿಗದಿ – 2,800 ಕೋಟಿ)
ಯುವನಿಧಿ – 250 ಕೋಟಿ ನಿಗದಿ (ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಾರಂಭ ಆಗಿದೆ).
ಗೃಹಜ್ಯೋತಿ ಗ್ಯಾರಂಟಿ ಯೋಜನೆಗೆ ಆಗಸ್ಟ್ ತಿಂಗಳಲ್ಲಿ ಚಾಲನೆ ಸಿಕ್ಕಿತ್ತು. ಎಲ್ಲಾ ಎಸ್ಕಾಂಗಳಿಗೆ ಪ್ರತಿ ತಿಂಗಳು 500-700 ಕೋಟಿ ರೂ. ಸರ್ಕಾರ ಮುಂಗಡ ಹಣ ಬಿಡುಗಡೆ ಮಾಡುತ್ತಿತ್ತು. ಸೆಪ್ಟೆಂಬರ್‌ನಿಂದ ಡಿಸೆಂಬರ್/ಜನವರಿ ವರೆಗೆ (4 ತಿಂಗಳು) 2,900 ಕೋಟಿ ರೂ. ಈವರೆಗೂ ಸರ್ಕಾರ ಇಂಧನ ಇಲಾಖೆಗೆ ಹಣ ಬಿಡುಗಡೆ ಮಾಡಿದೆ.
ಅನ್ನಭಾಗ್ಯ ಯೋಜನೆಗೆ ಸರ್ಕಾರ 5ಕೆಜಿ ಅಕ್ಕಿಗೆ ಮೊದಲು ಹಣ ಕೊಡುವ ನಿರ್ಧಾರ ಮಾಡಿರಲಿಲ್ಲ. ಹೀಗಾಗಿ ಹಣ ಎಷ್ಟು ಅಂತ ನಿಗದಿಯಾಗಿರಲಿಲ್ಲ. ಸುಮಾರು 10 ಸಾವಿರ ಕೋಟಿ ಅನ್ನಭಾಗ್ಯಕ್ಕೆ ಮೀಸಲು ಅಂತ ಮೊದಲು ಹೇಳಲಾಗಿತ್ತು. ಡಿಸೆಂಬರ್-ಜನವರಿ ವರೆಗೆ 2,900.12 ಕೋಟಿ ರೂ. ಹಣವನ್ನು ಸರ್ಕಾರ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಗ್ರಾಮೀಣ ಪತ್ರಕರ್ತರ ಕನಸು ನನಸು- ಬಜೆಟ್‍ನಲ್ಲಿ ಉಚಿತ ಬಸ್ ಪಾಸ್ ಘೋಷಣೆ