ಚೆನ್ನೈ: ವ್ಯಕ್ತಿಯೊಬ್ಬನ ಬ್ಯಾಂಕ್ ಲಾಕರ್‌ನಲ್ಲಿದ್ದ 500 ಕೋಟಿ ರೂ. ಮೌಲ್ಯದ ಶಿವಲಿಂಗವನ್ನು ಪೊಲೀಸರು ವಶಪಡಿಸಿಕೊಂಡಿರುವ ಘಟನೆ ತಮಿಳುನಾಡಿನ ತಂಜಾವೂರಿನಲ್ಲಿ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್.ಎಸ್. ಅರುಣ ಭಾಸ್ಕರ್‌ರನ್ನು ವಿಚಾರಣೆ ನಡೆಸಲಾಗುತ್ತಿದೆ. ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಲ್ಲಿರುವ ಬ್ಯಾಂಕ್ ಲಾಕರ್‌ನಲ್ಲಿ ಪಚ್ಚೆ ಹಾಗೂ ಹರಳುಯುಕ್ತ ಶಿವಲಿಂಗ ದೊರೆತಿದೆ.
Advertisement
Advertisement
ದೇಗುಲಗಳ ಹಳೆಯ ವಿಗ್ರಹಗಳನ್ನು ಕದ್ದು, ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ದೊರೆತ್ತಿತ್ತು. ಅದರ ಆಧಾರದ ಮೇಲೆ ಹೆಚ್ಚುವರಿ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ರಾಜಾರಾಮ್ ಮತ್ತು ಅಧಿಕಾರಿಗಳು ನಗರದ ಮನೆಯೊಂದರ ಮೇಲೆ ದಾಳಿ ನಡೆಸಿದ್ದರು. ಇದನ್ನೂ ಓದಿ: 8 ಲಕ್ಷಕ್ಕೆ ಹೆಣ್ಣು ಮಕ್ಕಳನ್ನು ಮಾರಾಟ ಮಾಡಿದ ತಂದೆ ಅರೆಸ್ಟ್
Advertisement
ಈ ಸಂದರ್ಭದಲ್ಲಿ ಅರುಣ ಭಾಸ್ಕರ್ ತಂದೆ ಎನ್.ಎ.ಸಾಮಿಯ್ಯಪ್ಪನ್ ಹೆಸರಿನಲ್ಲಿ ಬ್ಯಾಂಕ್ ಲಾಕರ್‌ನಲ್ಲಿ 500 ಕೋಟಿ ರೂ. ಮೌಲ್ಯದ ಶಿವಲಿಂಗ ಇರುವ ಮಾಹಿತಿ ದೊರೆತಿದೆ. ಶಿವಲಿಂಗಕ್ಕೆ ಯಾವುದೇ ಅಧಿಕೃತ ದಾಖಲೆ ಇಲ್ಲದ ಕಾರಣ ಲಿಂಗವನ್ನು ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ವಸಿಷ್ಠರೂ ಅಲ್ಲ, ವಿಶ್ವಾಮಿತ್ರನೂ ಅಲ್ಲ: ಸಿ.ಟಿ.ರವಿ
Advertisement
ಶಿವಲಿಂಗವು 8 ಸೆ.ಮೀ. ಉದ್ದ, 500 ಗ್ರಾಂ ಭಾರವಿದೆ. ತಿರುವರೂರ್ ಜಿಲ್ಲೆಯ ತಿರುಕ್ಕುವಲೈ ಎಂಬಲ್ಲಿರುವ ಶಿವಲಿಂಗವೊಂದು ಕಳವಾಗಿತ್ತು. ಪತ್ತೆಯಾಗಿರುವ ಶಿವಲಿಂಗ ಆ ದೇಗುಲದ್ದೇ ಎಂದು ಪೊಲೀಸರು ಶಂಕಿಸಿದ್ದಾರೆ.