– ಮನೆಯವರಿಂದಲೇ ಚಹಾ ಮಾಡಿಸಿ ಕುಡಿದು ಎಸ್ಕೇಪ್ ಆದ ಖತರ್ನಾಕ್ ದರೋಡೆಕೋರರು
ಚಿತ್ರದುರ್ಗ: ಹೋಟೆಲ್ ಉದ್ಯಮಿಯೊಬ್ಬರ (Businessman) ಮಗ ಹಾಗೂ ಅಳಿಯನನ್ನು ಒತ್ತೆಯಾಳಾಗಿಟ್ಟುಕೊಂಡು ಹಾಡ ಹಗಲಲ್ಲೇ ಪಿಸ್ತೂಲ್ ಮತ್ತು ಮಾರಕಾಸ್ತ್ರ ತೋರಿಸಿ 50 ಲಕ್ಷ ರೂ. ದೋಚಿರುವ ಘಟನೆ ಚಿತ್ರದುರ್ಗದಲ್ಲಿ (Chitradurga) ನಡೆದಿದೆ.
ಚಿತ್ರದುರ್ಗದ ಬ್ಯಾಂಕ್ ಕಾಲೋನಿಯ ಉದ್ಯಮಿ ನಜೀರ್ ಅಹಮ್ಮದ್ ಎಂಬುವವರ ಮನೆಗೆ ಶನಿವಾರ ಬೆಳಿಗ್ಗೆ 9.20 ಕ್ಕೆ ಮೂವರು ದರೋಡೆಕೋರರು ನುಗ್ಗಿದ್ದಾರೆ. ನಜೀರ್ ಅವರ ಮಗ ಸಮೀರ್ ಹಾಗೂ ಅಳಿಯ ಶಹನಾಜ್ ಅವರಿಗೆ ಪಿಸ್ತೂಲ್ ತೋರಿಸಿ ಒತ್ತೆಯಾಳಾಗಿಟ್ಟುಕೊಂಡಿದ್ದಾರೆ. ಬಳಿಕ 50 ಲಕ್ಷ ರೂ. ನಗದು, 120 ಗ್ರಾಂ ಚಿನ್ನ ಮತ್ತು ಮೊಬೈಲ್‍ಗಳನ್ನು ದೋಚಿ ಪರಾರಿಯಾಗಿದ್ದಾರೆ. ಇದನ್ನೂ ಓದಿ: ಅಮರನಾಥ ಯಾತ್ರೆ ಕೈಗೊಂಡಿದ್ದ ಮಾಗಡಿಯ 5 ಮಂದಿ ಸೇಫ್
ದರೋಡೆ ವೇಳೆ ಮನೆಯ ಸದಸ್ಯರನ್ನೆಲ್ಲ ತಂತಿಯಿಂದ ಕಟ್ಟಲಾಗಿತ್ತು. ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಅವರಿಂದಲೇ ಚಹಾ ಮಾಡಿಸಿಕೊಂಡು ಕುಡಿದು ಹೋಗಿದ್ದಾರೆ. ನಜೀರ್ ಅವರನ್ನು ಉಸಿರುಗಟ್ಟಿಸಿ ಕೊಲ್ಲಲು ಯತ್ನಿಸಿದ್ದಾರೆ. ಈ ವೇಳೆ ಏನಾದರೂ ಉಪಾಯ ಮಾಡಿದರೆ ಜೀವ ತೆಗೆಯುವ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಬಡಾವಣೆ ಪೊಲೀಸ್ (Police) ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೂರ್ವ ವಲಯ ಐಜಿ ತ್ಯಾಗರಾಜ್ ಹಾಗೂ ಚಿತ್ರದುರ್ಗ ಎಸ್ಪಿ ಪರಶುರಾಮ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿತ್ರದುರ್ಗ ಬಡಾವಣೆ ಠಾಣೆ ಸಿಪಿಐ ನಯೂಮ್ ಹಾಗೂ ನಗರ ಠಾಣೆ ಸಿಪಿಐ ತಿಪ್ಪೇಸ್ವಾಮಿ ನೇತೃತ್ವದ ತಂಡ ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಜೀರ್ ಅವರ ಮನೆಯ ಸುತ್ತಲೂ ಪೊಲೀಸ್ ಅಧಿಕಾರಿಗಳ ಕುಟುಂಬಗಳು ವಾಸವಾಗಿವೆ. ಆದರೆ ಯಾರಿಗೂ ಸ್ವಲ್ಪವೂ ಅನುಮಾನ ಬಾರದಂತೆ ಕಿರಾತಕರು ದರೋಡೆ ನಡೆಸಿದ್ದಾರೆ. ಈ ಘಟನೆಯಿಂದ ಕೋಟೆನಾಡಿನ ಜನರಲ್ಲಿ ಆತಂಕ ಮನೆ ಮಾಡಿದೆ. ಇದನ್ನೂ ಓದಿ: ಸ್ಕೂಟಿ, ಬೈಕ್‍ಗೆ ಟೆಂಪೋ ಡಿಕ್ಕಿ- ದಂಪತಿ ಸ್ಥಳದಲ್ಲೇ ಸಾವು
Web Stories