ಬೆಂಗಳೂರು: ನೋಟ್ ಬ್ಯಾನ್ ಆದ ಬಳಿಕ ಕೋಟಿ ಕೋಟಿ ಹಣ ಮಾಡಿಕೊಂಡಿದ್ದ ಕಪ್ಪು ಕುಳಗಳನ್ನು ಸದ್ದಿಲ್ಲದೆ ಐಟಿ ಅಧಿಕಾರಿಗಳು ಹಿಡಿದ ಬಳಿಕ ಬ್ಲ್ಯಾಕ್ ಆಂಡ್ ವೈಟ್ ಮನಿ ದಂಧೆ ತಣ್ಣಗೆ ಆಗಿತ್ತು. ಆದರೆ ಈಗ ಮತ್ತೆ ಈ ದಂಧೆ ಶುರುವಾಗಿದ್ದು ಈಗ ಬರೋಬ್ಬರಿ ಐದು ಕೋಟಿ ರೂ. ಮೌಲ್ಯದ ಹಳೆ ನೋಟು ಸಿಕ್ಕಿದೆ.
ಕಳೆದ ಒಂದು ವಾರದಿಂದ 10 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿದ್ದು ಈಗ ಮತ್ತೆ 5 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳನ್ನು ವಶ ಪಡಿಸಿಕೊಂಡು ನಾಲ್ವರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
Advertisement
ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಮತ್ತು ನಂಜುಂಡ ಬಂಧಿತ ಆರೋಪಿಗಳು. ಬಂಧಿತ ಆರೋಪಿಗಳ ಪೈಕಿ ನಂಜುಂಡ ವೆಸ್ಟ್ ಆಫ್ ಕಾರ್ಡ್ ರೋಡ್‍ನ ಬಳಿಯ ಶಿವಾಲಿ ಲಾಡ್ಜ್ ಒಂದರಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾನೆ. ಈತನೊಬ್ಬನಿಂದಲೇ 3 ಕೋಟಿ ರೂ. ಮೌಲ್ಯದ ಹಳೆಯ ನೋಟುಗಳು ಸಿಕ್ಕಿವೆ.
Advertisement
ಅಂಬ್ರೋಸ್, ಆರೀಫ್ ಪಾಷ, ಫೇಲಿಕ್ಸ್ ಬೇರೊಂದು ಗ್ಯಾಂಗ್‍ನಲ್ಲಿ ಹಣ ಬದಲಾವಣೆ ಮಾಡಲು ಹೋಗಿ ಸಿಕ್ಕಿಬಿದ್ದಿದ್ದಾರೆ. ಈ ಗ್ಯಾಂಗ್‍ನಲ್ಲಿ 2 ಕೋಟಿ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ. ತನಿಖೆ ಮುಂದುವರೆಯುತ್ತಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಜನರ ಬಂಧನವಾಗುವ ಸಾಧ್ಯತೆಯಿದೆ.
Advertisement
ಇದನ್ನೂ ಓದಿ: ನಿಷೇಧವಾಗಿದ್ದ ನೋಟುಗಳು ನಿಮ್ಮಲ್ಲಿದ್ದರೆ ದಂಡ ಕಟ್ಟಲು ರೆಡಿಯಾಗಿ! ದಂಡ ಎಷ್ಟು?