ಕಾಲಿವುಡ್ ಲೇಡಿ ಸೂಪರ್ ಸ್ಟಾರ್ ನಯನತಾರಾ (Nayanatara) ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ನಟನೆಗೆ ಬ್ರೇಕ್ ಹಾಕಿ, ಕೂಲ್ ಅಗಿ ಲೈಫ್ ಎಂಜಾಯ್ ಮಾಡುತ್ತಿದ್ದಾರೆ. ಸರೋಗಸಿ ಮೂಲಕ ಅವಳಿ ಗಂಡು ಮಕ್ಕಳನ್ನು ಬರ ಮಾಡಿಕೊಂಡಿರುವ ನಯನತಾರ ಬಗ್ಗೆ ವಿಘ್ನೇಶ್ ತಾಯಿ ಮೀನಾ ಕುಮಾರಿ (Meena Kumari) ಖಾಸಗಿ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸೊಸೆ ನಯನತಾರಾ ಬಗ್ಗೆ ಅಚ್ಚರಿಯ ವಿಚಾರವೊಂದನ್ನ ರಿವೀಲ್ ಮಾಡಿದ್ದಾರೆ.
ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ವಿಘ್ನೇಶ್ ತಾಯಿ ಮೀನಾ ಕುಮಾರಿ, ನನ್ನ ಈ ಪ್ರಪಂಚದಲ್ಲಿ ನಾನು ಕಂಡಿರುವ ಅತಿ ಹೆಚ್ಚು ಕಾಳಜಿ ಮತ್ತು ಪ್ರೀತಿ ಕೊಡುವ ವ್ಯಕ್ತಿ ಅಂದ್ರೆ ನಯನತಾರ ಯಾರು ಏನೇ ಕಷ್ಟ ಅಂದರು ಸಹಾಯ ಮಾಡಲು ಯಾವಾಗಲೂ ಮುಂದಿರುತ್ತಾರೆ ಎಂದು ಸೊಸೆಯನ್ನ ಹಾಡಿ ಹೊಗಳಿದ್ದಾರೆ. ಇದನ್ನೂ ಓದಿ: ಯಶ್ ಮುಂದಿನ ಚಿತ್ರಕ್ಕೆ ಅವರ ಮಗಳೇ ನಿರ್ಮಾಪಕಿ: ಐರಾ ಹೆಸರಲ್ಲಿ ಪ್ರೊಡಕ್ಷನ್ ಹೌಸ್
ನನ್ನ ಮಗ ವಿಘ್ನೇಶ್ ನಿರ್ದೇಶಕ, ಸೊಸೆ ದೊಡ್ಡ ಸ್ಟಾರ್ ನಟಿ. ಇಬ್ಬರು ತುಂಬಾ ಕಷ್ಟ ಪಟ್ಟು ಶ್ರಮಪಟ್ಟು ಜೀವನ ನಡೆಸುತ್ತಾರೆ. ಮನೆಯಲ್ಲಿ ಒಟ್ಟು 8 ಸಹಾಯಕರು ಇದ್ದಾರೆ 4 ಗಂಡಸರು 4 ಹೆಂಗಸರು ಇದ್ದಾರೆ. ಒಂದು ಸಲ ಮನೆ ಕೆಲಸ ಮಾಡುವ ಮಹಿಳೆ 4 ಲಕ್ಷ ರೂಪಾಯಿ ಸಾಲ ಇದೆ ತೀರಿಸಲು ಆಗುತ್ತಿಲ್ಲ ಎಂದು ದುಃಖ ಹೇಳಿಕೊಂಡಾಗ ಯೋಚಿಸದೇ ಕೆಲವೇ ನಿಮಿಷಗಳಲ್ಲಿ 4 ಲಕ್ಷ ತಂದು ಕೈಗೆ ಕೊಟ್ಟು ಸಾಲ ತೀರಿಸಿಕೋ ಎಂದು ಹೇಳುತ್ತಾಳೆ. ಇದು ನಯನತಾರಾ ಬಗ್ಗೆ ಯಾರಿಗೂ ಗೊತ್ತಿರದ ವಿಷಯ ಎಂದು ಸೊಸೆಯ ಬಗ್ಗೆ ಹೆಮ್ಮೆಯಿಂದ ವಿಘ್ನೇಶ್ ತಾಯಿ ಮಾತನಾಡಿದ್ದಾರೆ.
ತುಂಬಾ ನಂಬಿಕೆ ಇಟ್ಟು ಆ ಮನೆಯಲ್ಲಿ ಕೆಲಸ ಮಾಡಿದ್ದರೆ, ಮಾಲೀಕರು ಕೂಡ ಚೆನ್ನಾಗಿ ನೋಡಿಕೊಳ್ಳುತ್ತಾರೆ. ಅದೇ ರೀತಿ ಅವರು ನಮ್ಮ ಮನೆಯನ್ನು ಕಾಪಾಡುತ್ತಾರೆ ಎಂದಿದ್ದಾರೆ ಮೀನಾ ಕುಮಾರಿ.