ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

Public TV
1 Min Read
crypto Currency

ಬೆಂಗಳೂರು: ಖಾಸಗಿ ಕಂಪನಿಯೊಂದರ ಸರ್ವರ್ ಹ್ಯಾಕ್ ಮಾಡಿ 3.78 ಕೋಟಿ ರೂ. ಹೆಚ್ಚಿನ ಹಣವನ್ನ ಸೈಬರ್ ಕಳ್ಳತನ ಮಾಡಿರುವ ಘಟನೆ ವೈಟ್‌ಫೀಲ್ಡ್‌ನಲ್ಲಿ (Whitw Field) ನಡೆದಿದೆ.

ಅದೇ ಕಂಪನಿಯ ನೌಕರ ರಾಹುಲ್ ಬಂಧಿತ ಆರೋಪಿ. ಈ ಕಂಪನಿ ಕ್ರಿಪ್ಟೋ ಕರೆನ್ಸಿಯನ್ನು ಎಕ್ಸ್ಚೇಂಜ್ ಮಾಡುವ ಫ್ಲಾಟ್‌ಫಾರಂ ಆಗಿದೆ.ಇದನ್ನೂ ಓದಿ: Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

ಪೊಲೀಸರ ಮಾಹಿತಿ ಪ್ರಕಾರ, ಇಂದು (ಜು.30) ಬೆಳಗಿನ ಜಾವ 2:37ರ ಸುಮಾರಿಗೆ ಕಂಪನಿಯ ವ್ಯಾಲೆಟ್‌ನಿಂದ ಇನ್ನೊಂದು ವ್ಯಾಲೆಟ್‌ಗೆ 1 USDT  ವರ್ಗಾವಣೆಯಾಗಿದೆ. ನಂತರ 9:40ರ ಸುಮಾರಿಗೆ ಮತ್ತೆ ಸರ್ವರ್‌ಗೆ ಎಂಟ್ರಿಯಾಗಿ 44 ಮಿಲಿಯನ್ USDT (ಅಂದರೆ ಬರೋಬ್ಬರಿ 378 ಕೋಟಿ ರೂ.) ವರ್ಗಾವಣೆಯಾಗಿದೆ.

ಬಳಿಕ ಪೊಲೀಸರು ಆಂತರಿಕ ತನಿಖೆ ನಡೆಸಿದಾಗ, ಬಂಧಿತ ಆರೋಪಿಯು ತನ್ನ ಕಂಪನಿ ನೀಡಿದ ಲ್ಯಾಪ್‌ಟಾಪ್‌ನಲ್ಲಿ ಪಾರ್ಟ್ಟೈಮ್ ಕೆಲಸ ಮಾಡಿ 15 ಲಕ್ಷ ರೂ. ಹಣ ಪಡೆದಿರುವುದಾಗಿ ಬೆಳಕಿಗೆ ಬಂದಿದೆ. ಆತ ಕಂಪನಿಯ ಲ್ಯಾಪ್‌ಟಾಪ್ ಬಳಸಿ ಕೆಲಸ ಮಾಡುವ ವೇಳೆ ಹ್ಯಾಕ್ ಮಾಡಲಾಗಿದೆ. ಜೊತೆಗೆ ಆತನ ಲ್ಯಾಪ್ ಟಾಪ್ ಹ್ಯಾಕ್ ಮಾಡಿ ಸರ್ವರ್‌ಗೆ ಎಂಟ್ರಿಯಾಗಿದ್ದಾರೆ. ಬಳಿಕ ಒಟ್ಟು 44 ಮಿಲಿಯನ್ ಡಾಲರ್ ವಂಚನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಭಾರತದಲ್ಲೇ ಪ್ರತಿಷ್ಠಿತ ಕ್ರಿಪ್ಟೋ ಕರೆನ್ಸಿ ಕಂಪನಿಯಾಗಿರುವ ನೆಬಿಲೊ ಟೆಕ್ನಾಲಜೀಸ್ ಸದ್ಯ ಈ ಸಂಬಂಧ ವೈಟ್‌ಫೀಲ್ಡ್ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಕರ್ನಾಟಕದಲ್ಲಿ ನಡೆದಿರುವ ಅತಿದೊಡ್ಡ ಸೈಬರ್ ವಂಚನೆಯಾಗಿದ್ದು, ಪೊಲೀಸರು ಇತರ ಆರೋಪಿಗಳಿಗಾಗಿ ಹುಡುಕಾಟ ನಡೆಸ್ತಿದ್ದಾರೆ.ಇದನ್ನೂ ಓದಿ: ನಾರಾಯಣಪುರ ಜಲಾಶಯದಿಂದ 1.45 ಲಕ್ಷ ಕ್ಯೂಸೆಕ್ ನೀರು ಬಿಡುಗಡೆ – ಜಿಲ್ಲಾಡಳಿತದಿಂದ ಮುನ್ನೆಚ್ಚರಿಕೆ

Share This Article