ಬೆಂಗಳೂರು: ಬೃಹತ್ ಮತ್ತು ಕೈಗಾರಿಕೆ ಹಾಗೂ ಮೂಲ ಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ (M.B.Patil) ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ 141 ನೇ ರಾಜ್ಯ ಮಟ್ಟದ ಏಕಗವಾಕ್ಷಿ ಅನುಮೋದನಾ ಸಮಿತಿ ಸಭೆಯಲ್ಲಿ ಒಟ್ಟು 3,607.19 ಕೋಟಿ ರೂ. ಬಂಡವಾಳ ಹೂಡಿಕೆಯ 62 ಯೋಜನೆಗಳಿಗೆ ಅನುಮೋದನೆ ನೀಡಲಾಗಿದ್ದು, ಇವುಗಳಿಂದ 10,755 ಜನರಿಗೆ ಉದ್ಯೋಗ ಅವಕಾಶ ದೊರೆಯಲಿದೆ.
50 ಕೋಟಿ ರೂ.ಗೂ ಹೆಚ್ಚಿನ ಬಂಡವಾಳ ಹೂಡಿಕೆಯ 8 ಪ್ರಮುಖ ಬೃಹತ್ ಮತ್ತು ಮಧ್ಯಮ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಇವುಗಳಿಂದ ರಾಜ್ಯದಲ್ಲಿ 2,088.44 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆಯಾಗಲಿದೆ. ಇವುಗಳಿಂದ 6,360 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಇದನ್ನೂ ಓದಿ: ಗಸ್ತು ವೇಳೆ ಹಫ್ತಾ ಪಡೆಯೋದು ಬಿಟ್ಟಿದ್ದರೆ ಕಂದಮ್ಮಗಳ ಮಾರಣಹೋಮ ತಪ್ಪುತಿತ್ತು: ಯತ್ನಾಳ್ ಕಿಡಿ
Advertisement
Advertisement
15 ಕೋಟಿಯಿಂದ 50 ಕೋಟಿ ರೂ. ಮೊತ್ತದ ಒಳಗಿನ ಬಂಡವಾಳ ಹೂಡಿಕೆಯ 51 ಹೊಸ ಯೋಜನೆಗಳಿಗೆ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಇವುಗಳಿಂದ 941.40 ಕೋಟಿ ರೂ. ಬಂಡವಾಳ ಹೂಡಿಕೆಯಾಗಲಿದೆ. ಅಂದಾಜು 4,395 ಜನರಿಗೆ ಉದ್ಯೋಗಗಳು ಲಭ್ಯವಾಗಲಿವೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 3 ಯೋಜನೆಗಳಿಗೆ ಸಭೆಯು ಅನುಮೋದಿಸಿದ್ದು ಇದರಿಂದ 577.35 ಕೋಟಿ ರೂ. ಬಂಡವಾಳ ಹೂಡಿಕೆ ಆಗಲಿದೆ.
Advertisement
ಸಭೆಯಲ್ಲಿ ಸರ್ಕಾರದ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಎಸ್.ಸೆಲ್ವಕುಮಾರ್, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಆಯುಕ್ತ ಗುಂಜನ್ ಕೃಷ್ಣ, ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಧಾನ ಕಾರ್ಯದರ್ಶಿ ರವಿ ಬಿ.ಪಿ., ಕೆಐಎಡಿಬಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಎಂ.ಮಹೇಶ್, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ತಾಂತ್ರಿಕ ನಿರ್ದೇಶಕ ಆರ್.ರಮೇಶ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ಹಾಗೂ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಹಾಜರಿದ್ದರು. ಇದನ್ನೂ ಓದಿ: ಹಸುಗೂಸುಗಳ ಮಾರಾಟ ದಂಧೆ- ಕೊಂಡವರು, ಮಾರಾಟ ಮಾಡಿದವರ ಪತ್ತೆಗೆ ಸಿಸಿಬಿ ಶೋಧ
Advertisement
ಅನುಮೋದನೆ ನೀಡಿರುವ ಪ್ರಮುಖ ಪ್ರಸ್ತಾವನೆಗಳು ಹೀಗಿವೆ
ಸಂಸ್ಥೆ: ಟೆಕ್ಸ್ ಕಾನ್ ಸ್ಟೀಲ್ಸ್ ಲಿಮಿಟೆಡ್
ಸ್ಥಳ: ರಾಯಚೂರು
ಹೂಡಿಕೆ: 480 ಕೋಟಿ ರೂ.
ಉದ್ಯೋಗ: 200
ಸಂಸ್ಥೆ: ಹುಂಡ್ರಿ ಷುಗರ್ಸ್ ಅಂಡ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಧಾರವಾಡ ಜಿಲ್ಲೆ
ಹೂಡಿಕೆ: 476.54 ಕೋಟಿ ರೂ.
ಉದ್ಯೋಗ: 300
ಸಂಸ್ಥೆ: ಬ್ರೆನ್ ಲೈಫ್ ಸೈನ್ಸಸ್ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: 230.56 ಕೋಟಿ ರೂ.
ಉದ್ಯೋಗ: 1,750
ಸಂಸ್ಥೆ: ಅಲ್ಟೈನ್ ಎಥೆನಾಲ್ ಪೈವೇಟ್ ಲಿಮಿಟೆಡ್
ಸ್ಥಳ: ಗದಗ ಜಿಲ್ಲೆ
ಹೂಡಿಕೆ: 229.19 ಕೋಟಿ
ಉದ್ಯೋಗ: 107
ಸಂಸ್ಥೆ: ವಿರೂಪಾಕ್ಷ ಲ್ಯಾಬೊರೇಟರೀಸ್ ಪೈವೇಟ್ ಲಿಮಿಟೆಡ್
ಸ್ಥಳ: ಯಾದಗಿರಿ ಜಿಲ್ಲೆ
ಹೂಡಿಕೆ: 212.55 ಕೋಟಿ ರೂ.
ಉದ್ಯೋಗ: 790
ಸಂಸ್ಥೆ: ಕ್ವಾಲ್ ಕಾಂ ಇಂಡಿಯಾ ಪೈವೇಟ್ ಲಿಮಿಟೆಡ್
ಸ್ಥಳ: ಬೆಂಗಳೂರು
ಹೂಡಿಕೆ: 175 ಕೋಟಿ ರೂ.
ಉದ್ಯೋಗ: 1,553
ಸಂಸ್ಥೆ: ಎಲ್.ಆರ್.ಬಿ ವುಡ್ ಇಂಡಸ್ಟ್ರಿ (ಇಂಡಿಯಾ)
ಸ್ಥಳ: ಚಾಮರಾಜನಗರ ಜಿಲ್ಲೆ
ಹೂಡಿಕೆ: 102.50 ಕೋಟಿ ರೂ.
ಉದ್ಯೋಗ: 160
ಸಂಸ್ಥೆ: ಮಾತಾ ಇಂಡಸ್ಟ್ರೀಸ್
ಸ್ಥಳ: ಬೆಂಗಳೂರು ನಗರ ಜಿಲ್ಲೆ
ಹೂಡಿಕೆ: 102.10 ಕೋಟಿ ರೂ.
ಉದ್ಯೋಗ: 1,500