ಬಾಗಲಕೋಟೆ: ರೈತರ (Farmers Protest) ನಿರಂತರ ಹೋರಾಟದ ಫಲವಾಗಿ ಸರ್ಕಾರ 1 ಟನ್ ಕಬ್ಬಿಗೆ 3,300 ರೂ. ದರವನ್ನು ನಿಗದಿ ಪಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ಮುಧೋಳ ಭಾಗದ ರೈತರು ಒಪ್ಪಿಗೆ ನೀಡದೇ ಪ್ರತಿಭಟನೆ ಮುಂದುವರೆಸಿದ್ದಾರೆ. ಪ್ರತೀ ಟನ್ ಕಬ್ಬಿಗೆ ಸೂಕ್ತ ಬೆಲೆ ಬೇಕೇ ಬೇಕು ಎಂದು ಆಗ್ರಹಿಸುತ್ತಿದ್ದಾರೆ.
ಮುಧೋಳ (Mudhol) ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಸೇರಿದ ರೈತರು ಧರಣಿ ನಡೆಸುತ್ತಿದ್ದಾರೆ. ನಮಗೆ ಈ ಬೆಲೆ ಇಷ್ಟವಿಲ್ಲ, ಇದು ಸಾಕುವುದಿಲ್ಲ. ಸರ್ಕಾರ ರಿಕವರಿ ಆಧಾರದ ಮೇಲೆ ನಿಗದಿ ಮಾಡಿರುವ ಬೆಲೆ ನಮಗೆ ಬೇಡ. ರಿಕವರಿಯಲ್ಲೇ ರೈತರಿಗೆ ಮಹಾ ಮೋಸ ನಡೆಯುತ್ತಿದೆ . ಹೀಗಾಗಿ ನಮಗೆ ಪ್ರತಿ ಟನ್ ಕಬ್ಬಿಗೆ 3,500 ರೂ. ಬೆಲೆ ಕೊಡಲೇಬೇಕು ಎಂದು ಸರ್ಕಾರದ ಕ್ರಮವನ್ನು ವಿರೋಧಿಸಿದ್ದಾರೆ. ನಮ್ಮ ಬೇಡಿಕೆ ಈಡೇರುವವರೆಗೂ ಹೋರಾಟ ಮುಂದುವರಿಯುತ್ತದೆ ಎಂದು ಶಪಥ ಮಾಡಿದ್ದಾರೆ. ಇದನ್ನೂ ಓದಿ: ಪ್ರತಿ ಟನ್ ಕಬ್ಬಿಗೆ ಸರ್ಕಾರದಿಂದ 3,300 ರೂ. ದರ ನಿಗದಿ
ನಾವು ಕೇಳಿದ್ದು 3,500 ರೂ. ಸರ್ಕಾರ ಘೋಷಣೆ ಮಾಡಿದ್ದು 3,300 ರೂ. ಅದರಲ್ಲೂ ಸರ್ಕಾರದಿಂದ 50-50 ಘೋಷಣೆ ಮಾಡಿದೆ. ಇದು ಭಿಕ್ಷೆಯೇ? ಎಂದು ಗರಂ ಆದ ರೈತರು ಇದನ್ನು ನಾವು ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ. ಹೋರಾಟ ಕೈ ಬಿಡೋದಿಲ್ಲ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಸರ್ಕಾರ ನಿಗದಿಪಡಿಸಿದ್ದಕ್ಕಿಂತ 50 ರೂ. ಜಾಸ್ತಿ ಕೊಡ್ತೀವಿ – ಕಬ್ಬು ಬೆಳೆಗಾರರಿಗೆ ವೆಂಕಟೇಶ್ವರ ಸಕ್ಕರೆ ಕಾರ್ಖಾನೆ ಸಿಹಿಸುದ್ದಿ

