– ಡಿವೋರ್ಸ್ ಆಗಿದ್ದ ಮಹಿಳಾ ಎಂಜಿನಿಯರ್ ದರ್ಬಾರ್ ನೋಡಿ ಪೊಲೀಸರೇ ಶಾಕ್!
ಭೋಪಾಲ್: ತಿಂಗಳಿಗೆ ಕೇವಲ 30,000 ರೂ. ಸಂಬಳ ಪಡೆಯುತ್ತಿದ್ದ ಮಹಿಳಾ ಸಹಾಯಕ ಎಂಜಿನಿಯರ್ (Woman Assistant Engineer) ಮನೆ ಮೇಲೆ ದಾಳಿ ನಡೆಸಿದ್ದ ಲೋಕಾಯುಕ್ತ ಪೊಲೀಸರಿಗೆ (Lokayukta Police) ಶಾಕ್ ಆಗಿದೆ.
ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಪ್ರದೇಶದ (Madhya Pradesh) ಲೋಕಾಯುಕ್ತ ಪೊಲೀಸರು ಭೋಪಾಲ್‌ನ ಮಹಿಳಾ ಸಹಾಯಕ ಎಂಜಿನಿಯರ್ ಮನೆ ಮೇಲೆ ದಾಳಿ ನಡೆಸಿದರು. ಆಕೆಯ ಬಳಿ ಇದ್ದ 30 ಲಕ್ಷ ರೂಪಾಯಿ ಬೆಲೆ ಬಾಳುವ ಟಿವಿ ಸೆಟ್, ಹಲವು ವಿದೇಶಿ ತಳಿಯ ನಾಯಿಗಳು ಮತ್ತು 10 ಐಷಾರಾಮಿ ಕಾರುಗಳು ಸೇರಿದಂತೆ ವಿವಿಧ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ದಿ ಕೇರಳ ಸ್ಟೋರಿ ನಿಷೇಧ – ಮಮತಾ, ಸ್ಟಾಲಿನ್ ಸರ್ಕಾರಕ್ಕೆ ಸುಪ್ರೀಂ ನೋಟಿಸ್
ಎಂಜಿನಿಯರ್ ಹೇಮಾ ಮೀನಾ, ಮಧ್ಯಪ್ರದೇಶ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ (ಎಂಪಿಪಿಎಚ್‌ಸಿ)ನೊಂದಿಗೆ ಒಪ್ಪಂದದ ಮೇರೆಗೆ ಪ್ರಭಾರಿ ಸಹಾಯಕ ಎಂಜಿನಿಯರ್ ಆಗಿದ್ದು, ತಿಂಗಳಿಗೆ 30,000 ರೂ. ಸಂಬಳ ಪಡೆಯುತ್ತಿದ್ದರು. ಇಷ್ಟು ಸಂಬಳ ಪಡೆಯುತ್ತಿದ್ದ ಆಕೆ ಮನೆಯಲ್ಲಿ ಕೋಟ್ಯಂತರ ಮೌಲ್ಯದ ಆಸ್ತಿ ಕಂಡು ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
2020 ರಲ್ಲಿ ಹೇಮಾ ಮೀನಾ ವಿರುದ್ಧ ಅಕ್ರಮ ಆಸ್ತಿ ಹೊಂದಿರುವ ಆರೋಪದ ಮೇಲೆ ದೂರು ಸ್ವೀಕರಿಸಲಾಗಿದೆ. ದೂರು ಸ್ವೀಕರಿಸಿದ ನಂತರ ತನಿಖೆ ಆರಂಭಿಸಲಾಗಿದ್ದು, ಗುರುವಾರ ದಾಳಿ ನಡೆಸಲಾಗಿದೆ ಎಂದು ಲೋಕಾಯುಕ್ತ ಡಿಎಸ್ಪಿ ಸಂಜಯ್ ಶುಕ್ಲಾ ತಿಳಿಸಿದ್ದಾರೆ. ಇದನ್ನೂ ಓದಿ: ಬ್ರಿಜ್ ಭೂಷಣ್ ವಿರುದ್ಧದ ಕಿರುಕುಳ ಆರೋಪ – ತನಿಖೆಗೆ ಎಸ್‍ಐಟಿ ರಚನೆ
ಹೇಮಾ ಮೀನಾ ಭೋಪಾಲ್ ಬಳಿಯ ಬಿಲ್ಖಿರಿಯಾದಲ್ಲಿ ನಿರ್ಮಿಸಲಾದ 40 ಕೋಣೆಗಳ ಬಂಗಲೆಯಲ್ಲಿ ವಾಸಿಸುತ್ತಿದ್ದಾರೆ. ಇದರ ಬೆಲೆ 1 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ. ಇದಲ್ಲದೇ ಆಕೆಯ ಫಾರ್ಮ್ ಹೌಸ್‌ನಲ್ಲಿ ಪಿಟ್ ಬುಲ್, ಡೋಬರ್ ಮನ್ ಸೇರಿದಂತೆ 50ಕ್ಕೂ ಹೆಚ್ಚು ವಿದೇಶಿ ತಳಿಯ ನಾಯಿಗಳು ಪತ್ತೆಯಾಗಿದ್ದು, ಇವುಗಳ ಬೆಲೆ ಲಕ್ಷ ಲಕ್ಷ. ಅಲ್ಲದೇ ವಿವಿಧ ತಳಿಯ ಸುಮಾರು 60, 70 ಹಸುಗಳು ಸಹ ಪತ್ತೆಯಾಗಿವೆ.
ದಾಳಿ ವೇಳೆ ಆಕೆಯ ನಿವಾಸದಲ್ಲಿ 2.50 ಲಕ್ಷ ರೂ. ಮೌಲ್ಯದ ರೊಟ್ಟಿ ತಯಾರಿಸುವ ಯಂತ್ರ ಕೂಡ ಪತ್ತೆಯಾಗಿದೆ. ನಾಯಿಗಳಿಗೆ ಆಹಾರಕ್ಕಾಗಿ ರೊಟ್ಟಿ ತಯಾರಿಸಲು ಯಂತ್ರವನ್ನು ಬಳಸಲಾಗುತ್ತಿತ್ತು ಎಂಬುದು ತಿಳಿದು ಬಂದಿದೆ. ಇದನ್ನೂ ಓದಿ: ಹುಟ್ಟಿದ ಕೆಲ ಗಂಟೆಗಳಲ್ಲೇ ಶಿಶುವನ್ನು ಕತ್ತು ಹಿಸುಕಿ ಕೊಂದ ಪಾಪಿಗಳು!
ಹೇಮಾ ಮೀನಾ ಅವರ ಬಂಗಲೆ ಐಷಾರಾಮಿ ವಸ್ತುಗಳಿಂದ ತುಂಬಿತ್ತು. ಆಕೆಯ ಕೊಠಡಿಯಿಂದ 30 ಲಕ್ಷ ರೂ. ಮೌಲ್ಯದ ಸ್ಮಾರ್ಟ್ ಟಿವಿ ಸೆಟ್ ಪತ್ತೆಯಾಗಿದೆ. ಆದರೆ ಟಿವಿ ಬಳಕೆಯಲ್ಲಿಲ್ಲ. ಅದನ್ನು ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಲಾಗಿತ್ತು. ಟಿವಿ ಹೊರತುಪಡಿಸಿ, ಎರಡು ಟ್ರಕ್‌ಗಳು, ಒಂದು ಟ್ಯಾಂಕರ್ ಮತ್ತು ಒಂದು ಮಹೀಂದ್ರ ಥಾರ್ ಸೇರಿದಂತೆ 10 ಐಷಾರಾಮಿ ವಾಹನಗಳನ್ನು ಸಹ ಎಂಜಿನಿಯರ್ ಹೊಂದಿದ್ದರು. ಅವೆಲ್ಲವನ್ನೂ ವಶಕ್ಕೆ ಪಡೆಯಲಾಗಿದೆ.
ಮದುವೆಯಾಗಿ ವಿಚ್ಛೇದನ ಪಡೆದಿರುವ ಹೇಮಾ ಮೀನಾ ಮಧ್ಯಪ್ರದೇಶದ ರೈಸನ್ ಜಿಲ್ಲೆಯ ಚಪ್ನಾ ಗ್ರಾಮದ ನಿವಾಸಿಯಾಗಿದ್ದಾರೆ. ಆಕೆಗೆ 2011 ರಲ್ಲಿ ಗುತ್ತಿಗೆಯ ಕೆಲಸ ಸಿಕ್ಕಿತು. ಪ್ರಸ್ತುತ ಅವರು MPPHC ಯ ಸಹಾಯಕ ಇಂಜಿನಿಯರ್ ಆಗಿ ನೇಮಕಗೊಂಡಿದ್ದಾರೆ.