ಬೆಂಗಳೂರು: ಕೊಲೆ ಆರೋಪಿಯಾಗಿ ಜೈಲು ಸೇರಿರುವ ನಟ ದರ್ಶನ್ (Darshan) ಮನೆಯಲ್ಲಿ ಬರೋಬ್ಬರಿ 3 ಲಕ್ಷ ರೂ. ನಗದು ಕಳ್ಳತನವಾಗಿದೆ.
ಪತ್ನಿ ವಿಜಯಲಕ್ಷ್ಮಿ ದರ್ಶನ್ (Vijayalakshmi Darshan) ವಾಸವಿರುವ ಹೊಸಕೆರೆಹಳ್ಳಿಯ ಪ್ರೆಸ್ಟಿಜ್ ಅಪಾರ್ಟ್ಮೆಂಟ್‌ನ ಫ್ಲಾಟ್‌ನಲ್ಲಿ ಕಳ್ಳತನವಾಗಿದೆ. ಖತರ್ನಾಕ್ ಕಳ್ಳರು ಬೆಡ್‌ರೂಮ್‌ನಲ್ಲಿದ್ದ ಮೂರು ಲಕ್ಷ ನಗದು ಹಣವನ್ನ ಕದ್ದೊಯ್ದಿದ್ದಾರೆ (Money Theft). ಇದನ್ನೂ ಓದಿ: ಬೆಂಗಳೂರು | ಟ್ರಕ್ ಡಿಕ್ಕಿಯಾದ ರಭಸಕ್ಕೆ ಎರಡು ತುಂಡಾದ ಆಟೋ – ಇಬ್ಬರು ಸಾವು, ಮತ್ತಿಬ್ಬರ ಸ್ಥಿತಿ ಗಂಭೀರ
ಕಳ್ಳತನ ಸಂಬಂಧ ಮ್ಯಾನೇಜರ್ ನಾಗರಾಜ್ ಮೂಲಕ ವಿಜಯಲಕ್ಷ್ಮಿ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸೆ.4ರಿಂದ ಸೆ.8ರ ನಡುವೆ ಹಣ ಕಳ್ಳತನವಾಗಿದ್ದು, ಮನೆಗೆಲಸದವರ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಹಾಸನ ಗಣೇಶ ಮೆರವಣಿಗೆ ವೇಳೆ ದುರಂತ – ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ ವಿದ್ಯಾರ್ಥಿ ದುರ್ಮರಣ