ಹೈದರಾಬಾದ್: ಮಹಿಳೆಯೊಬ್ಬರಿಗೆ ಬರೊಬ್ಬರಿ 3.8 ಲಕ್ಷ ರೂ ಪಾವತಿಸುವಂತೆ ವಿದ್ಯುತ್ ಮಂಡಳಿ ಬಿಲ್ ನೀಡಿದೆ.
ಹೈದರಾಬಾದ್ ನ ಬೊದುಪ್ಪಳದ ಶ್ರೀನಿವಾಸ್ ನಗರದ ನಿವಾಸಿಯಾದ ಡಿ ಸ್ವರೂಪಾ ರವರಿಗೆ ಈ ರೀತಿ ಬಿಲ್ ನೀಡಲಾಗಿದೆ. ಸ್ವರೂಪಾರಿಗೆ ಮೇ 10 ರಿಂದ ಜೂನ್ 9 ರವರೆಗೆ ಒಂದು ತಿಂಗಳ ಬಿಲ್ ನೀಡಲಾಗಿದ್ದು, 3.8 ಲಕ್ಷ ಪಾವತಿಸುವಂತೆ ಹೇಳಿದೆ.
Advertisement
ಡಿ ಸ್ವರೂಪಾ ಗೃಹೋಪಯೋಗಿ ವಿದ್ಯುತ್ ಸಂಪರ್ಕ ಹೊಂದಿದ್ದಾರೆ. ಅವರಿಗೆ 40,059 ಯುನಿಟ್ ವಿದ್ಯುತ್ ಬಳಕೆ ಮಾಡಿದ್ದೀರಿ. ಹಾಗಾಗಿ 3,79,087 ರೂ ಹಾಗೂ ಕಸ್ಟಮರ್ ಸರ್ವಿಸ್ ಚಾರ್ಜ್ 2,403 ರೂ ಇತರೆ ಸೇರಿದಂತೆ ಒಟ್ಟು 3.8 ಲಕ್ಷ ಪಾವತಿಸುವಂತೆ ಬಿಲ್ ನೀಡಿದ್ದಾರೆ. ಅಲ್ಲದೇ ಜೂನ್ 24 ರೊಳಗೆ ಪಾವತಿಸುವಂತೆ ಅಧಿಕಾರಿಗಳು ಹೇಳಿದ್ದಾರೆ.
Advertisement
ಈ ಬಿಲ್ ಮೊತ್ತ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸುದ್ದಿ ಮಾಡುತ್ತಿದ್ದಂದೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೇ ಬಿಲ್ ಮೊತ್ತ ಹೆಚ್ಚಳಕ್ಕೆ ಕಾರಣವನ್ನು ಪತ್ತೆಹಚ್ಚಿ ಡಿ ಸ್ವರೂಪಾ ರವರಿಗೆ ಹೊಸ ಬಿಲ್ ನೀಡಿದ್ದಾರೆ. ಹೊಸ ಬಿಲ್ ಪ್ರಕಾರ ಆ ತಿಂಗಳಲ್ಲಿ ಸ್ವರೂಪಾ 63 ಯುನಿಟ್ ವಿದ್ಯುತ್ ಬಳಕೆ ಮಾಡಿದ್ದು 134 ರೂ ಮಾತ್ರ ಬಿಲ್ ನೀಡಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Advertisement
ತೆಲಂಗಾಣ ವಿದ್ಯುತ್ ಪ್ರಸಾರ ಮಂಡಳಿ ಅಧಿಕಾರಿಯೊಬ್ಬರು ಇದಕ್ಕೆ ಪ್ರತಿಕ್ರಿಯಿಸಿ ವಿದ್ಯುತ್ ಬಿಲ್ ನೀಡುವ ವ್ಯಕ್ತಿಯು ವಿದ್ಯುತ್ ಬಳಕೆಯ ಬಿಲ್ ನೀಡುವಾಗ 4 ಡಿಜಿಟ್‍ಗಳ ಬದಲಾಗಿ 5 ಡಿಜಿಟ್‍ಗಳನ್ನು ಹಾಕಿದ್ದರಿಂದ ಈ ರೀತಿಯಾದ ಬಿಲ್ ಮೊತ್ತ ಹೆಚ್ಚಳಕ್ಕೆ ಕಾರಣವಾಗಿದೆ ಎಂದು ಸ್ಪಸ್ಟನೆ ನೀಡಿದ್ದಾರೆ.
Advertisement
ಈ ರೀತಿಯ ಘಟನೆಗಳು ತುಂಬಾ ಕಡಿಮೆ. ಆದರೆ ತೆಲಂಗಾಣ ವಿದ್ಯುತ್ ಪ್ರಸಾರ ಮಂಡಳಿ ಕಳೆದ ವರ್ಷ ಅಗಸ್ಟ್ ನಲ್ಲಿ ಗ್ರಾಹಕರೊಬ್ಬರಿಗೆ 572 ರೂ ಬಿಲ್ ಬದಲಾಗಿ 1.27 ಲಕ್ಷ ಬಿಲ್ ನೀಡಿತ್ತು. ಅದನ್ನು ಪ್ರಶ್ನಿಸಿದ ಹೈದ್ರಾಬಾದ್ ಜಿಲ್ಲಾ ಗ್ರಾಹಕ ವ್ಯಾಜ್ಯ ಪರಿಹಾರ ವೇದಿಕೆ ವಿದ್ಯತ್ ಮಂಡಳಿ ಗ್ರಾಹನಿಗೆ 1 ಲಕ್ಷ ರೂ ನೀಡುವಂತೆ ಆದೇಶಿಸಿತ್ತು.