ಮುಂಬೈ: ಮಹಿಳೆಯರ ಮೇಲಿನ ದಾಳಿ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಹಿಳೆಯರ ಸುರಕ್ಷತೆಯ ದೃಷ್ಟಿಯಿಂದ ಮಹಾರಾಷ್ಟ್ರ ಸರ್ಕಾರ ಡ್ರೋನ್ ಖರೀದಿಗೆ ಮುಂದಾಗಿದೆ.
ನಗರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಗಳು ದಿನೇದಿನೇ ಹೆಚ್ಚುತ್ತಿರುವುದು ಆತಂಕಕಾರಿ ವಿಷಯಯಾಗಿದೆ. ಈ ದಾಳಿಗಳನ್ನು ತಡೆಯಲು ಮಹಾರಾಷ್ಟ್ರ ಸರ್ಕಾರವು ಸುಮಾರು 250 ಕೋಟಿ ರೂಪಾಯಿ ವೆಚ್ಚದಲ್ಲಿ ಡ್ರೋನ್‍ಗಳನ್ನು ಖರೀದಿಸಿ ಪ್ರಮುಖ ನಗರಗಳಲ್ಲಿ ನಿಗಾವಹಿಸಲು ತೀರ್ಮಾನಿಸಿದೆ ಎಂದು ಮುಂಬೈನ ಪೊಲೀಸ್ ಕಮೀಷನರ್ ದೀಪಕ್ ದೇವರಾಜ್ ಹೇಳಿದ್ದಾರೆ.
Advertisement
ಈ ಡ್ರೋನ್‍ಗಳು ಸುಧಾರಿತ ತಂತ್ರಜ್ಞಾನವನ್ನು ಹೊಂದಿದ್ದು, ಮೊಬೈಲ್ ಆ್ಯಪ್‍ನ ಮುಖಾಂತರ ಸುಲಭವಾಗಿ ಬಳಸಬಹುದಾಗಿದೆ. ಮಹಿಳೆಯರು ತಮ್ಮ ಮೊಬೈಲ್‍ನಲ್ಲಿ ಈ ಆ್ಯಪ್ ಇನ್‍ಸ್ಟಾಲ್ ಮಾಡಿಕೊಂಡು ತುರ್ತು ಸಂದರ್ಭಗಳಲ್ಲಿ ಇದರಲ್ಲಿನ ಪ್ಯಾನಿಕ್ ಬಟನ್ ಒತ್ತಿದರೆ, ತಕ್ಷಣವೇ ನೀವಿರುವ ಸ್ಥಳಕ್ಕೆ ಡ್ರೋನ್‍ಗಳು ಆಗಮಿಸುತ್ತವೆ. ಸ್ಥಳದ ಸಂಪೂರ್ಣ ವಿಡಿಯೋವನ್ನು ಕಂಟ್ರೋಲ್ ರೂಂಗೆ ರವಾನಿಸಿ ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡುತ್ತವೆ. ಕೂಡಲೇ ಪೊಲೀಸರು ಸ್ಥಳಕ್ಕೆ ಆಗಮಿಸಿ ದೌರ್ಜನ್ಯಗಳನ್ನು ತಡೆಯಲು ಸಹಾಯಕವಾಗುತ್ತದೆ ಎಂದು ಅವರು ವಿವರಿಸಿದರು.
Advertisement
ನಗರದಲ್ಲಿ ನಡೆಯುವ ಗಣೇಶ ಮಹೋತ್ಸವ, ರ್ಯಾಲಿ ಹಾಗೂ ಇನ್ನಿತರೆ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಈ ಡ್ರೋನ್‍ಗಳನ್ನು ಈಗ ಬಳಸಲಾಗುತ್ತಿದೆ. ಈ ಡ್ರೋನ್ ಗಳು ನಗರಗಳಲ್ಲಿ ನಡೆಯುವ ಅಪರಾಧಗಳನ್ನು ತಡೆಗಟ್ಟಿ ಉತ್ತಮ ಭದ್ರತೆ ಕಲ್ಪಿಸಲು ಸಹಾಯಕವಾಗುತ್ತದೆ ಎಂದು ದೀಪಕ್ ದೇವರಾಜ್ ತಿಳಿಸಿದರು.