ನವದೆಹಲಿ: ರೈಲು ನಿಲ್ದಾಣದಲ್ಲಿ ಸುಮಾರು 21 ಲಕ್ಷ ರೂ. ಮೌಲ್ಯದ ಜಾನುವಾರುಗಳಿಗೆ ನೀಡಲಾಗುವ ಆಕ್ಸಿಟೋಸಿನ್ ಚುಚ್ಚು ಮದ್ದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಔಷಧ ನಿಯಂತ್ರಣ ಇಲಾಖೆ ತಿಳಿಸಿದೆ.
ಹಾಲಿನ ಉತ್ಪಾದನೆಯನ್ನು ಹೆಚ್ಚಿಸಲು ಜಾನುವಾರುಗಳಿಗೆ ಆಕ್ಸಿಟೋಸಿನ್ ಚುಚ್ಚುಮದ್ದು ನೀಡಲಾಗುತ್ತದೆ. ಈ ಔಷಧ ದನಕರುಗಳು ಹಾಗೂ ಅವುಗಳ ಹಾಲು ಕುಡಿಯುವವರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ತಿಳಿದುಬಂದಿದೆ.
Advertisement
ಬಿಹಾರದ ಗಯಾದಿಂದ ಪಶುವೈದ್ಯಕೀಯ ಆಕ್ಸಿಟೋಸಿನ್ ಚುಚ್ಚುಮದ್ದನ್ನು ನವದೆಹಲಿ ರೈಲು ನಿಲ್ದಾಣಕ್ಕೆ ತಲುಪಿಸಿರುವ ಬಗ್ಗೆ ದೆಹಲಿ ಅಧಿಕಾರಿಗಳು ಮಾಹಿತಿ ಪಡೆದಿದ್ದರು. ಬಳಿಕ ರೈಲು ನಿಲ್ದಾಣದ ಪಾರ್ಸೆಲ್ ಗೋಡೌನ್‌ನಲ್ಲಿ ಅದನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗ ಜಗತ್ತು ಬಲಿಷ್ಠ ಭಾರತವನ್ನು ನೋಡಲು ಬಯಸುತ್ತದೆ: ಮೋದಿ
Advertisement
Advertisement
ಜನವರಿ 31 ರಂದು ರೈಲು ನಿಲ್ದಾಣದ ಆವರಣದಲ್ಲಿ ಪರಿಶೀಲನೆಗೆ ಡ್ರಗ್ಸ್ ಇನ್‌ಸ್ಪೆಕ್ಟರ್‌ಗಳ ತಂಡವನ್ನು ನಿಯೋಜಿಸಲಾಗಿತ್ತು. ಸಿಟಿ ಸ್ಟೇಷನ್‌ನ ಅಜ್ಮೇರಿ ಗೇಟ್ ಬದಿಯಲ್ಲಿರುವ ಪಾರ್ಸೆಲ್ ಗೋಡೌನ್‌ನ ಆವರಣವನ್ನು ಪರಿಶೀಲಿಸಿದಾಗ ಆಕ್ಸಿಟೋಸಿನ್ ಚುಚ್ಚುಮದ್ದಿನ ದಾಸ್ತಾನು ಮಾಡಿರುವುದು ಕಂಡುಬಂದಿದೆ. ಅದರಲ್ಲಿ ಸುಮಾರು 2 ಲಕ್ಷ ಚುಚ್ಚುಮದ್ದಿನ ವಯಲ್ ಇದ್ದವು ಎಂದು ತಿಳಿಸಿದ್ದಾರೆ.
Advertisement
ಇಷ್ಟು ದೊಡ್ಡ ಮಟ್ಟದ ದಾಸ್ತಾನಿನ ಬಗ್ಗೆ ಪಾರ್ಸೆಲ್ ಮೇಲ್ವಿಚಾರಕನನ್ನು ಪ್ರಶ್ನಿಸಿದಾಗ ಅದನ್ನು ಇಬ್ಬರಿಗೆ ತಲುಪಿಸುವ ಆದೇಶ ಬಂದಿರುವುದಾಗಿ ತಿಳಿಸಿದ್ದಾರೆ. ಈ ಔಷಧಗಳು ಅನುಮಾನಾಸ್ಪದ ಗುಣಮಟ್ಟದ್ದು ಎಂದು ಶಂಕಿಸಿದ್ದು, ಅವುಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನ ಕೊಂದು ಬ್ಯಾಗ್‍ನಲ್ಲಿ ತುಂಬಿದ್ರು
ಔಷಧವನ್ನು ವಶಪಡಿಸಿಕೊಂಡ ಬಗ್ಗೆ ಸಂಬಂಧಪಟ್ಟ ನ್ಯಾಯಾಲಯಕ್ಕೆ ತಿಳಿಸಲಾಗಿದೆ. ಈ ಔಷಧದ ಪೂರೈಕೆಯ ಮೂಲದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು.