ರಾಯಚೂರು: ಜಿಲ್ಲೆಯಲ್ಲಿ ನಕಲಿ ಕರೆನ್ಸಿ ನೋಟುಗಳ (Fake Currency Note) ಹಾವಳಿ ಹೆಚ್ಚಾಗುತ್ತಿದೆ. ಅಸಲಿ ನೋಟುಗಳ ಜೊತೆಗೆ ಆಗಾಗ ನಕಲಿ ನೋಟುಗಳು ಬರುತ್ತಿವೆ. ನಕಲಿ ನೋಟುಗಳ ಹಾವಳಿಗೆ ಸಣ್ಣ ವ್ಯಾಪಾರಿಗಳು ಸುಸ್ತಾಗಿದ್ದಾರೆ. 200 ರೂಪಾಯಿ ಮುಖಬೆಲೆಯ ಕಳ್ಳ ನೋಟುಗಳ ಚಲಾವಣೆ ನಡೆಯುತ್ತಿದೆ.
ವ್ಯಾಪಾರಿಗಳು ಹಣ ಪಾವತಿಸಲು ಬ್ಯಾಂಕ್ಗೆ (Bank) ಹೋದಾಗ ನಕಲಿ ನೋಟುಗಳು ಪತ್ತೆಯಾಗುತ್ತಿವೆ. ಒಂದೊಂದು ಕಟ್ಟಿನಲ್ಲಿ ಒಂದು, ಎರಡು ನಕಲಿ ನೋಟುಗಳು ಪತ್ತೆಯಾಗುತ್ತಿದ್ದು, ಸಣ್ಣ ವ್ಯಾಪಾರಿಗಳಿಗೆ ನಕಲಿ ನೋಟುಗಳಿಂದ ನಷ್ಟ ಭೀತಿ ಎದುರಾಗಿದೆ.
Advertisement
Advertisement
200 ರೂಪಾಯಿ ನೋಟುಗಳ ಕಲರ್ ಝೆರಾಕ್ಸ್ ದಂಧೆ ನಡೆಯುತ್ತಿರುವ ಅನುಮಾನ ವ್ಯಕ್ತವಾಗಿದೆ. ನಕಲಿ ನೋಟುಗಳನ್ನ ಕಲರ್ ಝೆರಾಕ್ಸ್ ಮೂಲಕ ತಯಾರಿಸಿ ಅಡ್ಡದಾರಿಯಲ್ಲಿ ಸಣ್ಣ ಪ್ರಮಾಣದಲ್ಲೇ ಚಲಾವಣೆ ನಡೆಸುತ್ತಿರುವ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ದೀಪಾವಳಿಗೆ ಕರೆಂಟ್ ಕಳ್ಳತನ – ಬೆಸ್ಕಾಂ ನೋಟಿಸ್ ನೀಡಲಿ, ದಂಡ ಕಟ್ಟುತ್ತೇನೆ ಎಂದ ಹೆಚ್ಡಿಕೆ
Advertisement
ನಕಲಿ ನೋಟುಗಳನ್ನು ಸ್ವಲ್ಪ ಸೂಕ್ಷ್ಮವಾಗಿ ಗಮನಿಸಿದರೆ ಅದರ ಅಸಲಿಯತ್ತು ಬಯಲಾಗುತ್ತದೆ. ಆದರೆ ಅವಸರಲ್ಲಿ ಹಣ ಪಡೆಯುವಾಗ ಅಸಲಿ ಜೊತೆ ನಕಲಿ ನೋಟು ಇರುವುದು ಗೊತ್ತಾಗುವುದಿಲ್ಲ. ವ್ಯಾಪಾರಿಗಳ ಕೈಗೆ ಸುಲಭವಾಗಿ ನಕಲಿ ನೋಟು ಸೇರುತ್ತಿದ್ದು, ಸ್ವಲ್ಪ ದಿನದಲ್ಲೇ ನಕಲಿ ನೋಟು ಮುದ್ದೆಯಾಗುತ್ತದೆ.
Advertisement
ರಾಯಚೂರು ಜಿಲ್ಲೆಯಲ್ಲಿ ಈ ಹಿಂದೆ 500 ರೂ. ಮುಖಬೆಲೆಯ ಖೋಟಾ ನೋಟುಗಳು ಪತ್ತೆಯಾಗಿದ್ದವು. ಈಗ 200 ರೂಪಾಯಿ ಮುಖಬೆಲೆಯ ನಕಲಿ ನೋಟುಗಳು ಓಡಾಡುತ್ತಿವೆ. ಕೂಡಲೇ ಇದಕ್ಕೆ ಪೊಲೀಸ್ ಇಲಾಖೆ ಕಡಿವಾಣ ಹಾಕಬೇಕಿದೆ.