200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ

Advertisements

ಮುಂಬೈ: ಸುಕೇಶ್ ಚಂದ್ರಶೇಖರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಾಯದಿಂದ ಸಮನ್ಸ್ ಪಡೆದಿದ್ದ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರಿಗೆ ದೇಶ ತೊರೆಯದಂತೆ ವಲಸೆ ಅಧಿಕಾರಿಗಳು ಭಾನುವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ತಡೆದಿದ್ದಾರೆ.

Advertisements

ಕಾರ್ಯಕ್ರಮವೊಂದಕ್ಕೆ ದುಬೈಗೆ ತೆರಳುತ್ತಿದ್ದ ವೇಳೆ ಜಾಕ್ವೆಲಿನ್ ಅವರನ್ನು ತಡೆದು ಅಧಿಕಾರಿಗಳು ಬಂಧಿಸಿ, ಸಂಪೂರ್ಣ ವಿಚಾರಣೆ ನಡೆಸಿದ ಬಳಿಕ ಅವರನ್ನು ಬಿಟ್ಟಿದ್ದಾರೆ. ಅಲ್ಲದೇ ಮತ್ತೆ ಕರೆದಾಗ ವಿಚಾರಣೆಗೆ ಹಾಜರಾಗುವಂತೆ ದೆಹಲಿ ತನಿಖಾ ಸಂಸ್ಥೆ ತಿಳಿಸಿದೆ. 200 ಕೋಟಿ ಸುಲಿಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಜಾಕ್ವೆಲಿನ್ ವಿರುದ್ಧ ಇಡಿ ಹೊಸ ಲುಕ್ ಔಟ್ ನೋಟಿಸ್ ಜಾರಿ ಮಾಡಿದೆ. ಇದನ್ನೂ ಓದಿ: ಜಾಕ್ವೆಲಿನ್‌ಗೆ ಕಿಸ್ ಮಾಡುತ್ತಿರುವ ಸುಕೇಶ್ ಚಂದ್ರಶೇಖರ್ – ರೋಮ್ಯಾಂಟಿಕ್ ಫೋಟೋ ವೈರಲ್

Advertisements

ಇತ್ತೀಚೆಗಷ್ಟೇ ಜಾಕ್ವೆಲಿನ್ ಫರ್ನಾಂಡಿಸ್, ಸುಕೇಶ್ ಚಂದ್ರಶೇಖರ್ ಜೊತೆಗಿರುವ ರೋಮ್ಯಾಂಟಿಕ್ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ಫೋಟೋ ಹಲವಾರು ಅನುಮಾನಗಳಿಗೆ ಕಾರಣವಾಯಿತು. 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಆರೋಪಿ ಸುಕೇಶ್ ಚಂದ್ರಶೇಖರ್ ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯಕ್ಕೆ ತನಿಖಾ ಸಂಸ್ಥೆ ಚಾರ್ಜ್ ಶೀಟ್ ಸಲ್ಲಿಸಿದೆ. ಇದನ್ನೂ ಓದಿ: 7 ಬಿಳಿ ಕುದುರೆಗಳ ಜೊತೆ ಮಂಟಪಕ್ಕೆ ವಿಕ್ಕಿ ಕೊಡಲಿದ್ದಾರೆ ರಾಯಲ್ ಎಂಟ್ರಿ

Advertisements

ಸುಕೇಶ್ ಚಂದ್ರಶೇಖರ್, ಉದ್ಯಮಿಗಳು, ರಾಜಕಾರಣಿಗಳು ಮತ್ತು ಸೆಲೆಬ್ರಿಟಿಗಳಿಗೆ ಬೆದರಿಕೆ ಹಾಕಿ ನೂರಾರು ಕೋಟಿ ಹಣ ಸುಲಿಗೆ ಮಾಡುತ್ತಿದ್ದ. ಅಲ್ಲದೇ ತಿಹಾರ್ ಜೈಲಿನಲ್ಲಿಯೇ ಇದ್ದುಕೊಂಡು ಉದ್ಯಮಿಯೊಬ್ಬರ ಪತ್ನಿಯಿಂದ 200 ಕೋಟಿ ಸುಲಿಗೆ ಹಣ ಸುಲಿಗೆ ಮಾಡಿರುವ ಆರೋಪ ಕೂಡ ಈತನ ಮೇಲಿದೆ. ಇನ್ನೂ ಸುಕೇಶ್ ಚಂದ್ರಶೇಖರ್ ಜೊತೆ ಜಾಕ್ವೆಲಿನ್ ಫರ್ನಾಂಡಿಸ್ ಹಣಕಾಸಿನ ವಹಿವಾಟುಗಳನ್ನು ನಡೆಸಿರುವ ಪುರಾವೆಗಳನ್ನು ತನಿಖಾ ಸಂಸ್ಥೆ ಬಹಿರಂಗಪಡಿಸಿದೆ.

Advertisements
Exit mobile version