ಬೆಂಗಳೂರು: ಎಟಿಎಂಗೆ ತುಂಬಿಸಲು ಸಾಗಿಸ್ತಿದ್ದ 2 ಕೋಟಿ 19 ಲಕ್ಷ ರೂಪಾಯಿಯನ್ನು ಬೆಂಗಳೂರಿನ ಹಲಸೂರು ಕೆರೆಯ ಬಳಿ ಚುನಾವಣಾಧಿಕಾರಿಗಳು ಸೀಜ್ ಮಾಡಿದ್ದಾರೆ.
ವೈಟ್‍ಫೀಲ್ಡ್‍ನಲ್ಲಿ ಹೆಚ್‍ಡಿಎಫ್‍ಸಿ ಮತ್ತು ಐಸಿಐಸಿಐ ಬ್ಯಾಂಕ್‍ನ ಎಟಿಎಂಗಳಿಗೆ ತುಂಬಿಸಬೇಕಿತ್ತು. ರೈಟರ್ಸ್ ಸೇಫ್ ಗಾರ್ಡ್ಸ್ ಅನ್ನೋ ಸಂಸ್ಥೆಗೆ ಸೇರಿದ ಎಟಿಎಂ ಸಾಗಿಸ್ತಿದ್ದ ವಾಹನದ ದಾಖಲಾತಿಗೂ ಸಾಗಿಸ್ತಿದ್ದವರ ಬಳಿಯಿದ್ದ ದಾಖಲಾತಿಗೂ ವ್ಯತ್ಯಾಸ ಕಂಡುಬಂದಿದೆ. ಇದನ್ನೂ ಓದಿ: ಮಂಡ್ಯದ ಮಳವಳ್ಳಿಯಲ್ಲಿ ಮಿಡ್‍ನೈಟ್ ಹೈಡ್ರಾಮಾ – ಬ್ಯಾಂಕ್‍ಗೆ ಸಾಗಿಸ್ತಿದ್ದ 20 ಕೋಟಿ ಹಣ ಸೀಜ್!
Advertisement
Advertisement
ಸ್ಥಳಕ್ಕೆ ಬಂದ ಮ್ಯಾನೇಜರ್ ಮಧುಸೂದನ್ ನೀಡಿದ ದಾಖಲೆಯಿಂದ ಐಟಿ ಅಧಿಕಾರಿಗಳು ಸಮಾಧಾನಗೊಳ್ಳಲಿಲ್ಲ. ಹೆಚ್ಚುವರಿ ದಾಖಲೆ ಸಲ್ಲಿಸುವಂತೆ ಸೂಚಿಸಿದ್ರು. 24 ಎಟಿಎಂಗಳಿಗೆ ಬೇಕಾದಷ್ಟು ದುಡ್ಡು ಐಟಿ ವಶದಲ್ಲಿದೆ. ಇದನ್ನೂ ಓದಿ: ಅರ್ಧ ಕೋಟಿಗಿಂತಲೂ ಅಧಿಕ ನಗದು ಹಣ, 200 ಗ್ರಾಂ ಬಂಗಾರ ವಶ
Advertisement
Advertisement
ಕರ್ನಾಟಕ ಎಲೆಕ್ಷನ್‍ನಲ್ಲಿ ಇಲ್ಲಿಯವರೆಗೆ 4 ಕೋಟಿ 13 ಲಕ್ಷ ರೂಪಾಯಿ ವಶಪಡಿಸಿಕೊಳ್ಳಲಾಗಿದ್ದು, ಅದರಲ್ಲಿ 4 ಕೋಟಿ 3 ಲಕ್ಷ ರೂಪಾಯಿಯಷ್ಟು 2 ಸಾವಿರ ಮತ್ತು ಐನೂರು ರೂಪಾಯಿ ನೋಟೇ ಇದೆ ಅಂತ ಆದಾಯ ತೆರಿಗೆ ಇಲಾಖೆ ಹೇಳಿದೆ. ಎಟಿಎಂಗಳಲ್ಲಿ ಹಣ ಸಿಕ್ತಿಲ್ಲ ಅನ್ನೋವಾಗ ಇಷ್ಟೊಂದು ನೋಟು ಸಿಕ್ಕಿರೋದೇ ಸೋಜಿಗ. ಬೆಂಗಳೂರಲ್ಲಿ 2.47 ಕೋಟಿ ಮತ್ತು ಬಳ್ಳಾರಿಯಲ್ಲಿ 55 ಲಕ್ಷ ರೂಪಾಯಿ ನಗದು ಜಪ್ತಿ ಆಗಿದೆ. ರಾಜ್ಯಾದ್ಯಂತ 1.32 ಕೋಟಿ ರೂಪಾಯಿ ಮೌಲ್ಯದ 4.32 ಕೆ.ಜಿಯಷ್ಟು ಬಂಗಾರ ವಶವಾಗಿದೆ ಎಂದು ಐಟಿ ಇಲಾಖೆ ಹೇಳಿದೆ. ಇದನ್ನೂ ಓದಿ: ಮತದಾರರಿಗೆ ಹಂಚಲು ಸಂಗ್ರಹಿಸಿದ್ದ 7ಕೋಟಿ ರೂ. ಮೌಲ್ಯದ ನಕಲಿ ನೋಟು ಪತ್ತೆ- ಓರ್ವನ ಬಂಧನ