ಬೆಂಗಳೂರು: ರೌಡಿ ನಾಗನ ಬರೋಬ್ಬರಿ 17 ಕೋಟಿ ರೂ. ಹಳೆ ನೋಟುಗಳನ್ನು ಹೆಣ್ಣೂರು ಪೊಲೀಸರು ಪ್ರತಿದಿನ ಕಾಯುತ್ತಿದ್ದಾರೆ.
ಕಬ್ಬಿಣದ ಸರಳುಗಳಿಂದ ಫುಲ್ ಸೆಕ್ಯುರಿಟಿಯಿಂದ ಲಾಕ್ ಮಾಡಿ ಸೀಲ್ ಮಾಡಿರುವ ಹಣದ ಪೆಟ್ಟಿಗೆಗಳನ್ನು ಪೊಲೀಸರು ಕಾವಲು ಕಾಯುತ್ತಿದ್ದಾರೆ. ರೌಡಿ ನಾಗನ ಶ್ರೀರಾಮಪುರದ ಮನೆ ಮೇಲೆ ದಾಳಿ ಮಾಡಿದಾಗ ಪೊಲೀಸರು ಮಂಚದ ಕೆಳಗೆ, ಪೆಟ್ಟಿಗೆ, ಕಬೋರ್ಡ್ ಹೀಗೆ ಎಲ್ಲಿ ನೋಡಿದರೂ ಹಳೆಯ ನೋಟುಗಳನ್ನ ಪತ್ತೆ ಮಾಡಿದ್ದರು.
Advertisement
Advertisement
ಹೆಣ್ಣೂರು ಪೊಲೀಸರು ಬರೋಬ್ಬರಿ 17 ಕೋಟಿ ರೂ. ಹಳೆ ನೋಟನ್ನ ನಾಗನ ಮನೆಯಲ್ಲಿ ವಶಪಡಿಸಿಕೊಂಡಿದ್ದರು. ಬಳಿಕ ಸೀಜ್ ಆದ ಹಣವನ್ನ ಬೆಂಗಳೂರಿನ ಆರ್ ಬಿಐ ಪ್ರಾದೇಶಿಕ ಕಚೇರಿಗೆ ಒಪ್ಪಿಸಲಾಗುತ್ತೆ ಎಂದು ಪೊಲೀಸರು ಹೇಳಿದ್ದರು. ಆದರೆ ಇದುವರೆಗೂ 17 ಕೋಟಿ ರೂ. ಹಳೆಯ ನೋಟುಗಳನ್ನು ಆರ್ ಬಿಐ ವಶಪಡಿಸಿಕೊಂಡಿಲ್ಲ.
Advertisement
ಬ್ಯಾಂಕ್ ನೋಟ್ ಸೆಷೆಸನ್ ಆಫ್ ಲಯಾಬಿಲಿಟೀಸ್ ಆರ್ಡಿನೆನ್ಸ್ ಆಕ್ಟ್ ಪ್ರಕಾರ ಸೀಜ್ ಮಾಡಿದ ಹಣವನ್ನ ಆರ್‍ಬಿಐ ಸ್ವೀಕಾರ ಮಾಡುವಂತಿಲ್ಲ. ಕೇಂದ್ರ ಹಣಕಾಸು ಇಲಾಖೆ ಸೀಜ್ ಮಾಡಿರುವ ಹಳೆಯ ನೋಟುಗಳನ್ನ ಸ್ವೀಕಾರ ಮಾಡಬಹುದು ಅಂತಾ ಕಾಯ್ದೆ ಮಾಡಬೇಕು. ಆನಂತರವಷ್ಟೇ ನೋಟುಗಳನ್ನ ಸ್ವೀಕಾರ ಮಾಡಲು ಸಾಧ್ಯ ಅಂತ ಆರ್‍ಬಿಐ ಅಧಿಕಾರಿಗಳು ಹೇಳುತ್ತಿದ್ದಾರೆ.
Advertisement
ಪೊಲೀಸರು ಹಳೆ ನೋಟು ರದ್ದಿಗೆ ಹೋಗುತ್ತದೆ ಎಂದು ನಿರ್ಲಕ್ಷ್ಯ ಮಾಡುವ ಹಾಗಿಲ್ಲ. ಹಳೇ ನೋಟು ಅಕ್ರಮ ಸಂಗ್ರಹದ ಪ್ರಕರಣ ಅಡಿ ರೌಡಿ ನಾಗ ಕೇಸ್ ಎದುರಿಸುತ್ತಿದ್ದು, ಪ್ರಮುಖ ಸಾಕ್ಷಿಯಾಗಿ ಇದೇ 17 ಕೋಟಿ ಹಣವನ್ನು ಪೊಲೀಸರು ಸಲ್ಲಿಸಬೇಕಿದೆ. ಆದ್ದರಿಂದ ಈ ಹಣವನ್ನು ಪೊಲೀಸರು ಕಾವಲು ಕಾಯುವಂತಾಗಿದೆ.