ನವದೆಹಲಿ: ಕೊರೊನಾ ಮಾಹಾಮಾರಿ ವಿರುದ್ಧದ ಹೋರಾಟಕ್ಕೆ ಪ್ರಧಾನಿ ನರೇಂದ್ರ ಮೋದಿ 15 ಸಾವಿರ ಕೋಟಿ ರೂ. ಪ್ಯಾಕೇಜ್ ಘೋಷಿಸಿದ್ದಾರೆ.
ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿಗಳು, ಇಂದು ಮಧ್ಯರಾತ್ರಿ 12 ಗಂಟೆಯಿಂದಲೇ ಭಾರತ ಸಂಪೂರ್ಣ ಲಾಕ್‍ಡೌನ್ ಮಾಡಲಾಗುವುದು ಎಂದು ತಿಳಿಸಿದರು. ಮುಂದಿನ 21 ದಿನಗಳ ಮನೆಯಲ್ಲಿ ಲಕ್ಷ್ಮಣ ರೇಖೆ ಹಾಕಿಕೊಂಡು ಹೊರಗೆ ಬರಬೇಡಿ. 21 ದಿನದ ಈ ಯುದ್ಧದಲ್ಲಿ ನಾವು ಯಶಸ್ವಿಯಾಗದಿದ್ದರೆ, ದೇಶ 21 ವರ್ಷ ಹಿಂದಕ್ಕೆ ಹೋಗಲಿದೆ ಎಂದು ಎಚ್ಚರಿಸಿದರು.
Advertisement
इससे कोरोना से जुड़ी टेस्टिंग फेसिलिटीज,
पर्सनल प्रोटेक्टिव इक्वीपमेंट्स, Isolation Beds,
ICU beds,
ventilators,
और अन्य जरूरी साधनों की संख्या तेजी से बढ़ाई जाएगी: PM @narendramodi #IndiaFightsCorona
— PMO India (@PMOIndia) March 24, 2020
Advertisement
ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ಕೇಂದ್ರ ಸರ್ಕಾರ 15 ಸಾವಿರ ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ. ಕೊರೊನಾಗೆ ಸಂಬಂಧಿಸಿದ ವೈದ್ಯಕೀಯ ಸಲಕರಣೆಗಳು, ವೈಯಕ್ತಿಯ ಸಂರಕ್ಷಣಾ ಸಲಕರಣೆಗಳು ((Personal protective Equipment)) ವೆಂಟಿಲೇಟರ್, ಔಷಧಿಗಳು, ಐಸೋಲೇಶನ್ ಬೆಡ್, ಐಸಿಯು ಬೆಡ್ ಮತ್ತು ಚಿಕಿತ್ಸೆಗೆ ಬೇಕಾದ ಅವಶ್ಯಕ ವಸ್ತುಗಳಿಗಾಗಿ ಈ ನಿಧಿಯ ಬಳಕೆಯಾಗಲಿದೆ ಎಂದು ಪ್ರಧಾನಿಗಳು ತಿಳಿಸಿದರು.
Advertisement
अब कोरोना के मरीजों के इलाज के लिए,
देश के हेल्थ इंफ्रास्ट्रक्चर को और मजबूत बनाने के लिए केंद्र सरकार ने आज 15 हजार करोड़ रुपए का प्रावधान किया है: PM @narendramodi #IndiaFightsCorona
— PMO India (@PMOIndia) March 24, 2020
Advertisement
ನಿಮ್ಮ ಮೊದಲ ಪ್ರಾಥಮಿಕ ಆದ್ಯತೆ ಸ್ವಸ್ಥ ಆರೋಗ್ಯ ಸೇವೆಗೆ ನೀಡಬೇಕೆಂದು ರಾಜ್ಯ ಸರ್ಕಾರಗಳಿಗೂ ಮನವಿ ಮಾಡಿಕೊಂಡಿದ್ದೇನೆ. ಇಂತಹ ಸಂದರ್ಭಗಳಲ್ಲಿ ಗೊತ್ತಿದ್ದೋ, ಗೊತ್ತಿರದೆಯೂ ಗೊಂದಲ ಉಂಟು ಮಾಡುವ ಸುದ್ದಿಗಳು ಹರಿದಾಡುತ್ತಿರುತ್ತೇವೆ. ಅವುಗಳತ್ತ ಗಮನ ನೀಡದೇ ನೀವೇ ಹಾಕಿಕೊಂಡ ಲಕ್ಷ್ಮಣ ರೇಖೆ ದಾಟಿ ಬರಬೇಡಿ ಎಂದು ಮನವಿ ಮಾಡಿಕೊಂಡರು.