– ಸರ್ಕಾರದ ವಿರುದ್ಧ ಡಯಾಗ್ನಾಸ್ಟಿಕ್ ಸಿಬ್ಬಂದಿ ಸಮರ
ಬೆಳಗಾವಿ: ರಾಜ್ಯ ಸರ್ಕಾರಕ್ಕೆ ಒಂದರ ಮೇಲೊಂದರಂತೆ ತಲೆನೋವು ಶುರುವಾಗುತ್ತಿದೆ. ಸಾರಿಗೆ ನೌಕರರ ಸಮರ ಒಂದು ಕಡೆಯಾದರೆ ಇದೀಗ ಡಯಾಗ್ನಾಸ್ಟಿಕ್ ಸಿಬ್ಬಂದಿ(Diagnostics Employees) ಸಮರ ಸಾರಿದ್ದಾರೆ. ಸಿಬ್ಬಂದಿಯ ಪ್ರತಿಭಟನೆಯಿಂದ ರಾಜ್ಯದ ಸುಮಾರು 14 ಜಿಲ್ಲೆಗಳ ಸರ್ಕಾರಿ ಆಸ್ಪತ್ರೆಗಳ 18 ಸೆಂಟರ್‌ಗಳಲ್ಲಿ ಎಂಆರ್‌ಐ (MRI) ಮತ್ತು ಸಿಟಿ ಸ್ಕ್ಯಾನ್ (CT Scan) ಬಂದ್ ಆಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಕ್ಯಾನ್ ಸೇವೆ ಒದಗಿಸುವ ಕ್ರಸ್ನಾ ಡಯಾಗ್ನಾಸ್ಟಿಕ್ ಸಂಸ್ಥೆಗೆ ಸರ್ಕಾರ ಹಣ ಪಾವತಿ ಮಾಡಿಲ್ಲ. ಕಳೆದ 3 ವರ್ಷದಿಂದ 140 ಕೋಟಿ ರೂ. ಹಣ ಪಾವತಿ ಮಾಡದೇ ಸರ್ಕಾರ ಬಾಕಿ ಉಳಿಸಿಕೊಂಡಿದೆ. ಹೀಗಾಗಿ ವಿಜಯಪುರ, ಯಾದಗಿರಿ, ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಎಂಆರ್‌ಐ, ಸಿಟಿ ಸ್ಕ್ಯಾನ್ ಸೇವೆ ಬಂದ್ ಆಗಿದೆ. ಇದನ್ನೂ ಓದಿ: ವಿಧಾನಸೌಧದಲ್ಲಿ ಮಾಧ್ಯಮಗಳ ನಿರ್ಬಂಧಕ್ಕೆ ವಿರೋಧ – ಮಾಧ್ಯಮ ಪ್ರತಿನಿಧಿಗಳಿಂದ ಮೌನ ಧರಣಿ
ಖಾಸಗಿ ಸ್ಕ್ಯಾನ್ ದರಕ್ಕೆ ಹೋಲಿಸಿದ್ರೆ ಅರ್ಧಕ್ಕರ್ಧ ಕಡಿಮೆ ಆಗುತ್ತಿತ್ತು. ಈಗ ಜಿಲ್ಲಾಸ್ಪತ್ರೆಗಳಲ್ಲಿ ಸಿಟಿ ಸ್ಕ್ಯಾನ್ ಬಂದ್ ಆಗಿದ್ದು, ಖಾಸಗಿ ಸಿಟಿ ಸ್ಕ್ಯಾನ್ ಮೊರೆ ಹೋಗಬೇಕಾಗಿದೆ ಎಂದು ಜನರು ಪರದಾಡುತ್ತಿದ್ದಾರೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ಕೂಡ ಆಕ್ರೋಶ ಹೊರಹಾಕಿದ್ದಾರೆ. ಈ ಮಧ್ಯೆ, ಹಳೆ ಬಾಕಿ ಎಲ್ಲಾ ಸೇರಿ 140 ಕೋಟಿ ರೂ. ಕೊಡಿ ಎನ್ನುತ್ತಾರೆ. ಹಿಂದೆ ಸ್ಕ್ಯಾನ್ ಮಾಡಿದ್ದಕ್ಕೆ ದೃಢೀಕರಣ ಕೊಡಿ ಎಂದು ಕೇಳಿದ್ದೇವೆ. ಎಲ್ಲಾ ಪರಿಶೀಲನೆ ಮಾಡಿ ಹಣ ಬಿಡುಗಡೆ ಮಾಡುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

