ನವದೆಹಲಿ: ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿರುವುದಕ್ಕೆ ಆಲ್ಫಾಬೆಟ್ ಇಂಕ್‌ನ ಗೂಗಲ್‌ಗೆ (Google) ಭಾರತದ ಸ್ಪರ್ಧಾತ್ಮಕ ಆಯೋಗ (CCI) ಬರೋಬ್ಬರಿ 1,337 ಕೋಟಿ ರೂ. ದಂಡವನ್ನು (Fine) ವಿಧಿಸಿದೆ.
ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಗೂಗಲ್ ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳನ್ನು ನಡೆಸಿರುವುದಕ್ಕಾಗಿ ಸಿಸಿಐ ದಂಡ ವಿಧಿಸಿರುವುದಾಗಿ ಟ್ವೀಟ್‌ನಲ್ಲಿ ತಿಳಿಸಿದೆ.
- Advertisement -
CCI imposes monetary penalty of ₹ 1337.76 crore on Google for abusing dominant position in multiple markets in the Android Mobile device ecosystem.
Press Release: https://t.co/sXXA0RvK51#Antitrust #AntitrustOrder #antitrustlaw #Google #CCI pic.twitter.com/FE5Yh8PWr4
— CCI (@CCI_India) October 20, 2022
- Advertisement -
2019ರ ಏಪ್ರಿಲ್‌ನಲ್ಲಿ ದೇಶದಲ್ಲಿ ಆಂಡ್ರಾಯ್ಡ್ ಆಧಾರಿತ ಸ್ಮಾರ್ಟ್ಫೋನ್ ಗ್ರಾಹಕರು ಗೂಗಲ್ ವಿರುದ್ಧ ದೂರು ನೀಡಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ನಿಯಂತ್ರಕರು ಆದೇಶಿಸಿದ್ದರು. ಮೊಬೈಲ್ ಆಪ್ ವಿತರಣೆ ಒಪ್ಪಂದ (ಎಂಎಡಿಎ) ಹಾಗೂ ವಿಘಟನೆ ವಿರೋಧಿ ಒಪ್ಪಂದಕ್ಕೆ (ಎಎಫ್‌ಎ) ಸಂಬಂಧಿಸಿದಂತೆ ಗೂಗಲ್ ವಿರುದ್ಧ ಅಕ್ರಮ ವ್ಯವಹಾರಗಳ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಪೊಲೀಸ್ ಅಧಿಕಾರಿಗಳು ಶಿಸ್ತು ಮೀರಿದರೆ ದಂಡ, ಕೆಲಸದಿಂದ ವಜಾ – ಸರ್ಕಾರದಿಂದ ನಿಯಮ ಜಾರಿ
- Advertisement -
- Advertisement -
ಇದೀಗ ಸಿಸಿಐ ಗೂಗಲ್‌ಗೆ ತನ್ನ ಪ್ರಬಲ ಸ್ಥಾನವನ್ನು ದುರುಪಯೋಗಪಡಿಸಿರುವುದಕ್ಕೆ 1,337 ಕೋಟಿ ರೂ. ದಂಡ ವಿಧಿಸಿದೆ. ಮಾತ್ರವಲ್ಲದೇ ಅನ್ಯಾಯದ ವ್ಯವಹಾರಗಳನ್ನು ನಿಲ್ಲಿಸಿ, ನಿರ್ದಿಷ್ಟ ಸಮಯದೊಳಗೆ ಎಲ್ಲಾ ಸರಿಪಡಿಸಿಕೊಳ್ಳುವಂತೆ ಹೇಳಿದೆ. ಇದನ್ನೂ ಓದಿ: ಅಧಿಕಾರಕ್ಕೆ ಬಂದ ಕೆಲವೇ ವಾರಗಳಲ್ಲಿ ಬ್ರಿಟನ್ ಪ್ರಧಾನಿ ಸ್ಥಾನಕ್ಕೆ ಲಿಜ್ ಟ್ರಸ್ ರಾಜೀನಾಮೆ