ಚಿಕ್ಕಬಳ್ಳಾಪುರ: ತಾಲೂಕಿನ ಐತಿಹಾಸಿಕ ಪ್ರಸಿದ್ಧ ನಂದಿ ಗ್ರಾಮದ ಭೋಗನಂದೀಶ್ವರ ಜಾತ್ರೆಯಲ್ಲಿ (Bhoganandishwara) ಬಡಪಾಯಿ ವ್ಯಾಪಾರಸ್ಥರ ಬಳಿ ಸುಂಕದ ಹೆಸರಲ್ಲಿ ಸಾವಿರಾರು ರೂಪಾಯಿ ಸುಲಿಗೆ ಮಾಡಲಾಗಿದೆ.
ಜಾತ್ರೆಯಲ್ಲಿ ದೇವಾಲಯದ ಹೊರಭಾಗದ ಪ್ರಮುಖ ರಸ್ತೆಯಲ್ಲಿ ಇಡುವ ಅಂಗಡಿ ಮಳಿಗೆಗಳ ಬಳಿ ಸುಂಕ ವಸೂಲಿಯ ಗುತ್ತಿಗೆಯನ್ನ ಹರಾಜು ಪ್ರಕ್ರಿಯೆಯಲ್ಲಿ ನಂದಿ ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆಯ ಮಗ ಹಿತೇಶ್ ಗೌಡ ಪಡೆದುಕೊಂಡಿದ್ದ. ಹರಾಜು ಸುಂಕ ವಸೂಲಿ ನಿಬಂಧನೆಗಳ ಪ್ರಕಾರ 1 ಅಡಿ ರನ್ನಿಂಗ್ ಫೀಟ್‌ಗೆ 10 ರೂ. ವಸೂಲಿ ಮಾಡಬೇಕು. ಆದರೆ ಹಿತೇಶ್ ಗೌಡ 1 ಅಡಿಗೆ 10 ರೂ. ಬದಲು 1,000 ರೂ. ವಸೂಲಿ ಮಾಡಿದ್ದಾನೆ ಎಂದು ವ್ಯಾಪಾರಸ್ಥರು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಮುದ್ದಿನ ಬೆಕ್ಕು ಸಾವು – ಮೃತದೇಹದ ಜೊತೆ 2 ದಿನ ಕಳೆದು ಮಹಿಳೆ ನೇಣಿಗೆ ಶರಣು
Advertisement
Advertisement
ಹಿತೇಶ್ ಗೌಡ ಮನಸ್ಸೋ ಇಚ್ಛೆ ತಾನು ಹೇಳಿದ್ದೇ ರೇಟ್ ಎಂದು ಸಾವಿರಾರು ರೂ. ವಸೂಲಿ ಮಾಡಿದ್ದಾನೆ. ಬಡಪಾಯಿ ವ್ಯಾಪಾರಿಗಳ ಬಳಿ ಒಂದೊಂದು ಅಂಗಡಿಗೆ 7,000 ರೂ. ಇಂದ 50,000 ರೂ.ವರೆಗೂ ವಸೂಲಿ ಮಾಡಿದ್ದಾನೆ. ಸುಂಕ ವಸೂಲಿ ನಿಯಮಗಳನ್ನು ಲೆಕ್ಕಕ್ಕೆ ಇಡದೇ ಸಾವಿರಾರು ರೂ. ವಸೂಲಿ ಮಾಡಲಾಗಿದ್ದು, ಸುಂಕದ ದರ ಪ್ರಶ್ನೆ ಮಾಡಿದವರ ಮೇಲೆ ದೌರ್ಜನ್ಯ ದರ್ಪ ತೋರಿದ ಆರೋಪವೂ ಕೇಳಿಬಂದಿದೆ. ಹೆಣ್ಣು ಮಕ್ಕಳು ಎನ್ನದೇ ಕೀಳಾಗಿ ಮಾತನಾಡಿದ್ದಾರೆ ಎಂದು ಮಹಿಳಾ ವ್ಯಾಪಾರಸ್ಥರು ನೊಂದುಕೊಂಡಿದ್ದಾರೆ. ಇದನ್ನೂ ಓದಿ: ಕನ್ನಡ ಚಿತ್ರರಂಗದವರು ಜೀತದಾಳುಗಳೇ? ಅಧಿಕಾರಕ್ಕೆ ಕಾಂಗ್ರೆಸ್ ಮಾಡಿದ ಪಾದಯಾತ್ರೆಗೆ ಯಾಕೆ ಭಾಗವಹಿಸಬೇಕು: ಮುನಿರತ್ನ
Advertisement
Advertisement
ಕಿವಿ ಒಲೆ ಅಡ ಇಟ್ಟು ಸುಂಕ ಕಟ್ಟಿದ ಅಜ್ಜಿ:
ಇನ್ನು ಜಾತ್ರೆಯಲ್ಲಿ ವ್ಯಾಪಾರಕ್ಕೆ ಬಂದ ಒಬ್ಬೊಬ್ಬರದ್ದು ಒಂದೊಂದು ಅಳಲು. ಸ್ಟೀಲ್ ಪಾತ್ರೆ ಸಾಮಾನು ಮಾರಾಟ ಮಾಡಲು ಬಂದ ಅಜ್ಜಿ ಸಾವಿತ್ರಮ್ಮ ಕೇಳಿದಷ್ಟು ಸುಂಕ ಕಟ್ಟಲು ಸಾಧ್ಯವಾಗದೇ 5,000 ರೂ.ಗೆ ಕಿವಿ ಓಲೆ ಅಡ ಇಟ್ಟು ಸುಂಕ ಕಟ್ಟಿದ್ದಾಳೆ. ಕೇವಲ 7 ಅಡಿ ಜಾಗದಲ್ಲಿ ಅಂಗಡಿ ಇಟ್ಟುಕೊಂಡಿರುವ ಸಾವಿತ್ರಮ್ಮ ಅಡಿಗೆ ಸಾವಿರ ರೂ.ನಂತೆ 7,000 ರೂ. ಕಟ್ಟಿದ್ದಾಳೆ. ಯಾಕೆ ಇಷ್ಟು ಅಂತ ಪ್ರಶ್ನೆ ಮಾಡಿದರೇ ಇಟ್ರೇ ಇಡಿ ಇಲ್ಲ ಅಂದ್ರೆ ಅಂಗಡಿ ಎತ್ತುವಂತೆ ಅವಾಜ್ ಹಾಕುತ್ತಾನೆ ಎಂದು ಹಲವು ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಹೀರೋಗಳು ಜೀರೋ ಆಗಿದ್ದಾರೆ.. ಗುಂಪುಗಾರಿಕೆ, ಜಾತಿ ರಾಜಕಾರಣ ಬಿಟ್ ಬಿಡಿ: ಕಾಂಗ್ರೆಸ್ ನಾಯಕರಿಗೆ ಡಿಕೆಶಿ ವಾರ್ನ್