ಪಾಲಿಕೆಗೆ ಆಯ್ಕೆಯಾದ ಆಪ್ ಕೌನ್ಸಿಲರ್‌ಗಳನ್ನು ಖರೀದಿಸಲು BJP ಯತ್ನ – ಆಪ್ ಆರೋಪ

Public TV
2 Min Read
AAP 2

ನವದೆಹಲಿ: ದೆಹಲಿಯ ಮಹಾನಗರ ಪಾಲಿಕೆಗೆ (MCD) ಆಯ್ಕೆಯಾದ ಕೌನ್ಸಿಲರ್‌ಗಳನ್ನು ಬಿಜೆಪಿ ಪಕ್ಷವು ಖರೀದಿಸಲು ಪ್ರಯತ್ನಿಸುತ್ತಿದೆ. ಈ ಮೂಲಕ ಬಿಜೆಪಿ (BJP) ತನ್ನ ಕೊಳಕು ರಾಜಕಾರಣವನ್ನು ಪ್ರದರ್ಶಿಸಿದೆ ಎಂದು ಆಮ್ ಆದ್ಮಿ ಪಕ್ಷ (AAP) ಆರೋಪಿಸಿದೆ.

ಈ ಸಂಬಂಧ ಎಎಪಿ ನೂತನ ಕೌನ್ಸಿಲರ್‌ಗಳಾದ ಡಾ.ರೋನಾಕ್ಷಿ ಶರ್ಮಾ, ಅರುಣ್ ನವಾರಿಯಾ, ಜ್ಯೋತಿ ರಾಣಿ ಹಾಗೂ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ (Sanjay Singh) ಅವರಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಆಪ್ ಕೌನ್ಸಿಲರ್‌ಗಳನ್ನು ಖರೀದಿಸಲು ಬಿಜೆಪಿ (BJP) 100 ಕೋಟಿ ರೂ. ಬಜೆಟ್ ಅನ್ನು ಪ್ರಸ್ತಾಪಿಸಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂಡೀಗಢ ಬಿಜೆಪಿ, ಕಾಂಗ್ರೆಸ್‍ಗೆ ಮುಖಭಂಗ – ನಗರಪಾಲಿಕೆ ಚುನಾವಣೆಯಲ್ಲಿ ಎಎಪಿ ಮೇಲುಗೈ

ARAVINDH KEJIRIWAL

ಭಾರತೀಯ ಜನತಾ ಪಕ್ಷವು ಕರ್ನಾಟಕ, ಮಹಾರಾಷ್ಟ್ರ, ಅರುಣಾಚಲ ಪ್ರದೇಶ, ಉತ್ತರಾಖಂಡ, ಮಧ್ಯಪ್ರದೇಶ, ಗೋವಾ ಹಾಗೂ ಗುಜರಾತ್ ನಂತೆಯೇ ಚುನಾಯಿತ ಪ್ರತಿನಿಧಿಗಳನ್ನು ಖರೀದಿಸಿರುವ ಸೂತ್ರವನ್ನು ಪ್ರಯೋಗ ಮಾಡುತ್ತಿದ್ದಾರೆ. ಹಣ ಹಾಗೂ ಬೆದರಿಕೆಯ ಮೂಲಕ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲು ಹಾಗೂ ಜನಾದೇಶವನ್ನು ಅವಮಾನಿಸಲು ಪ್ರಯತ್ನಿಸುತ್ತಿದೆ. ಅಂತಹವರನ್ನು ಬಂಧಿಸಿ ಜೈಲಿಗಟ್ಟುವಂತೆ ದೆಹಲಿ ಪೊಲೀಸ್ ಆಯುಕ್ತರಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಮಳೆಬಿಲ್ಲು ಬಣ್ಣದ ಶರ್ಟ್ ಧರಿಸಿ ಬಂಧನವಾಗಿದ್ದ ಅಮೆರಿಕದ ಪತ್ರಕರ್ತ ಕತಾರ್‌ನಲ್ಲಿ ನಿಧನ

som dutt aap 2

ಬಿಜೆಪಿ ನಮಗಿಂತಲೂ 30 ಸ್ಥಾನಗಳನ್ನು ಕಡಿಮೆ ಪಡೆದಿದ್ದರೂ ನಾಚಿಕೆಯಿಲ್ಲದೇ ಮೇಯರ್ ಸ್ಥಾನವೂ ನಮ್ಮದೇ ಎಂದು ಹೇಳುತ್ತದೆ. ಅಧಿಕಾರಕ್ಕೆ ಬರಲೇಬೇಕು ಎಂಬ ಉದ್ದೇಶದಿಂದ 100 ಕೋಟಿ ರೂ. ಬಜೆಟ್ ಅನ್ನು ಪ್ರಸ್ತಾಪಿಸಿದ್ದಾರೆ. 10 ಕೌನ್ಸಿಲರ್‌ಗಳಿಗೆ ತಲಾ 10 ಕೋಟಿಯಂತೆ 100 ಕೋಟಿ ಹಣ ವ್ಯಯಿಸಲು ಮುಂದಾಗಿದೆ ಎಂದು ದೂರಿದ್ದಾರೆ.

ಎಎಪಿ ಕೌನ್ಸಿಲರ್‌ಗಳು ಅರವಿಂದ್ ಕೇಜ್ರಿವಾಲ್ (Arvind Kejriwal) ಅವರೊಂದಿಗೆ ಬದ್ಧತೆ ಮತ್ತು ಪ್ರಾಮಾಣಿಕತೆಯಿಂದ ಇದ್ದಾರೆ. ನಮ್ಮ ಕೌನ್ಸಿಲರ್‌ಗಳು ಅವರ ಎಲ್ಲಾ ತಂತ್ರಗಳನ್ನು ಬಹಿರಂಗಪಡಿಸುತ್ತಲೇ ಇರುತ್ತಾರೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಆಪ್‌ ಗೆದ್ದರೂ ದೆಹಲಿ ಮೇಯರ್‌ ಹುದ್ದೆ ಬಿಜೆಪಿಗೆ ಸಿಗುತ್ತಾ?

bjp flag 1

ಇತ್ತೀಚೆಗೆ ದೆಹಲಿ ಮುನ್ಸಿಪಲ್ ಕಾರ್ಪೋರೇಷನ್‌ನ 250 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 134 ಸ್ಥಾನಗಳನ್ನು ಗೆಲ್ಲುವ ಮೂಲಕ ಎಎಪಿ 15 ವರ್ಷಗಳ ಬಿಜೆಪಿ ಆಡಳಿತವನ್ನ ಕೊನೆಗೊಳಿಸಿತು. ಬಿಜೆಪಿ 104 ಸ್ಥಾನಗಳನ್ನು ಗೆದ್ದುಕೊಂಡರೆ, ಕಾಂಗ್ರೆಸ್ ಕೇವಲ 9 ಸ್ಥಾನಗಳನ್ನು ಗೆದ್ದು ಮಕಾಡೆ ಮಲಗಿತು.

Live Tv
[brid partner=56869869 player=32851 video=960834 autoplay=true]

Share This Article