ಗೌತಮ್‌ ಅದಾನಿ ಪುತ್ರನ ವಿವಾಹ ಪ್ರತಿಜ್ಞೆ – ಪ್ರತಿ ವರ್ಷ 500 ಅಂಗವಿಕಲ ಹೆಣ್ಣುಮಕ್ಕಳ ವಿವಾಹಕ್ಕೆ 10 ಲಕ್ಷ ನೆರವು ಘೋಷಣೆ

Public TV
2 Min Read
Jeet Adani

ನವದೆಹಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ (Gautam Adani) ಅವರ ಪುತ್ರ ಜೀತ್‌ ಅದಾನಿ (Jeet Adani) ಮದುವೆಗೆ ಸಜ್ಜಾಗಿದ್ದಾರೆ. ತಮ್ಮ ವಿವಾಹದ ಗೌರವಾರ್ಥ, ಪ್ರತಿ ವರ್ಷ 500 ಅಂಗವಿಕಲ ಮಹಿಳೆಯರಿಗೆ ಮದುವೆಗೆ ತಲಾ 10 ಲಕ್ಷ ರೂ. ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ಜೀತ್‌ ಅದಾನಿ ಅವರು ಫೆ.7 ರಂದು ಜೈಮಿನ್‌ ಶಾ ಅವರನ್ನು ವಿವಾಹವಾಗಲಿದ್ದಾರೆ. ಈ ಕುರಿತು ಎಕ್ಸ್‌ ಖಾತೆಯಲ್ಲಿ ಗೌತಮ್‌ ಅದಾನಿ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಹಾಕಿದ್ದಾರೆ.

ಜೀತ್ ಮತ್ತು ದಿವಾ ತಮ್ಮ ದಾಂಪತ್ಯ ಜೀವನವನ್ನು ಒಂದು ಉದಾತ್ತ ಪ್ರತಿಜ್ಞೆಯೊಂದಿಗೆ ಪ್ರಾರಂಭಿಸಲು ನಿರ್ಧರಿಸಿದ್ದಾರೆ. ಪ್ರತಿ ವರ್ಷ 500 ದಿವ್ಯಾಂಗ ಸಹೋದರಿಯರ ಮದುವೆಗೆ 10 ಲಕ್ಷ ರೂ.ಗಳನ್ನು ದೇಣಿಗೆ ನೀಡುವ ‘ಮಂಗಲ ಸೇವಾ’ ಪ್ರತಿಜ್ಞೆಯನ್ನು ಅವರು ತೆಗೆದುಕೊಂಡಿದ್ದಾರೆ. ಒಬ್ಬ ತಂದೆಯಾಗಿ, ಈ ಪ್ರತಿಜ್ಞೆ ನನಗೆ ಅಪಾರ ತೃಪ್ತಿಯನ್ನು ನೀಡುತ್ತದೆ. ಇದರಿಂದ ಅನೇಕ ದಿವ್ಯಾಂಗ ಹೆಣ್ಣುಮಕ್ಕಳು ಮತ್ತು ಅವರ ಕುಟುಂಬಗಳು ಸಂತೋಷ ಮತ್ತು ಘನತೆಯಿಂದ ಬದುಕಲು ಸಹಾಯ ಮಾಡುತ್ತದೆ ಎಂದು ನಾನು ನಂಬುತ್ತೇನೆ ಎಂದು ಅದಾನಿ ಪೋಸ್ಟ್‌ ಹಂಚಿಕೊಂಡಿದ್ದಾರೆ.

2019 ರಲ್ಲಿ ಅದಾನಿ ಗ್ರೂಪ್ ಸೇರಿದ ಇಪ್ಪತ್ತೇಳು ವರ್ಷದ ಜೀತ್ ಅದಾನಿ, ಎಂಟು ವಿಮಾನ ನಿಲ್ದಾಣಗಳನ್ನು ನಿರ್ವಹಣೆ ಮತ್ತು ಅಭಿವೃದ್ಧಿ ಪೋರ್ಟ್‌ಫೋಲಿಯೊದಲ್ಲಿ ಹೊಂದಿರುವ ಭಾರತದ ಅತಿದೊಡ್ಡ ವಿಮಾನ ನಿಲ್ದಾಣ ಮೂಲಸೌಕರ್ಯ ಕಂಪನಿಯಾದ ಅದಾನಿ ಏರ್‌ಪೋರ್ಟ್ ಹೋಲ್ಡಿಂಗ್ಸ್‌ನ ನಿರ್ದೇಶಕರಾಗಿದ್ದಾರೆ.

ಪೆನ್ಸಿಲ್ವೇನಿಯಾ ವಿವಿಯ ಹಳೆಯ ವಿದ್ಯಾರ್ಥಿಯಾಗಿರುವ ಜೀತ್, ಅದಾನಿ ಗ್ರೂಪ್‌ನ ರಕ್ಷಣಾ, ಪೆಟ್ರೋಕೆಮಿಕಲ್ಸ್ ಮತ್ತು ತಾಮ್ರ ವ್ಯವಹಾರಗಳನ್ನು ನೋಡಿಕೊಳ್ಳುತ್ತಾರೆ. ಅವರು ಗ್ರೂಪ್‌ನ ಡಿಜಿಟಲ್ ರೂಪಾಂತರದ ಉಸ್ತುವಾರಿಯನ್ನೂ ಹೊಂದಿದ್ದಾರೆ.

Share This Article