ಬೆಂಗಳೂರು: ಬೈಕು, ಕಾರು ಕದ್ದರೆ ಸುಲಭವಾಗಿ ತಗಲಾಕೊಳ್ತೀವಿ ಎಂದು ಕಾಸ್ಟ್ಲಿ ಸೈಕಲ್‍ಗಳನ್ನು ಟಾರ್ಗೆಟ್ ಮಾಡಿ ಕದೀತಿದ್ದ ಆರೋಪಿ ಇದೀಗ ಅಂದರ್ ಆಗಿದ್ದಾನೆ
ಖದೀಮರು ಸ್ಕೆಚ್ ಹಾಕಿ ಸೈಕಲ್ ಗಳನ್ನು ಕದಿಯುತ್ತಿದ್ದರು. ಇದೀಗ ಆರೋಪಿಗಳನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ. ಸಂಜಯ್ ನಗರ ಪೊಲೀಸರು ಆರೋಪಿ ಮಹಮ್ಮದ್ ರಫಿಕ್‍ನನ್ನು ಬಂಧಿಸಿ ಒಟ್ಟು 10ಲಕ್ಷ ರೂಪಾಯಿ ಮೌಲ್ಯದ 45 ಸೈಕಲ್ ಗಳನ್ನ ವಶಕ್ಕೆ ಪಡೆದಿದ್ದಾರೆ.
ಇವರು ಸಂಜಯ್ ನಗರ, ಯಲಹಂಕ ನ್ಯೂಟೌನ್, ಹೈಗ್ರೌಂಡ್ ಹೀಗೆ ಬೆಂಗಳೂರಿನ ಸುಮಾರು ಹದಿನೈದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಲೆಬಾಳುವ ಹಕ್ರ್ಯುಲಸ್, ಅಟ್ಲಾಸ್, ಬಿಎಂಡಬ್ಲ್ಯು ಸೇರಿದಂತೆ ಹಲವು ಕಂಪನಿಗಳ ಬೆಲೆಬಾಳುವ ಸೈಕಲ್ ಗಳನ್ನು ಕಳ್ಳತನ ಮಾಡಿದ್ದಾನೆ. ಈತನ ಜೊತೆ ಆದಿಲ್ ಪಾಷಾ ಕೂಡ ಸೈಕಲ್ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇದನ್ನೂ ಓದಿ: ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ
ಆರೋಪಿಗಳು ಸಿಕ್ಕಾಕ್ಕೊಂಡಿದ್ದು ಹೇಗೆ?
ಬೆಳಗ್ಗೆ ರಸ್ತೆಗಳಲ್ಲಿ ಓಡಾಡಿ ಬೆಲೆಬಾಳುವ ಸೈಕಲ್ ಗಳಿರುವ ಮನೆಗಳನ್ನು ಗೊತ್ತುಮಾಡಿಟ್ಟುಕೊಳ್ಳುತ್ತಿದ್ದರು. ನಂತರ ಕತ್ತಲು ಕವಿಯುತ್ತಿದ್ದಂತೆ ಕಟ್ಟಿಂಗ್ ಪ್ಲೇಯರ್ ಹಿಡಿದು ಸೈಕಲ್ ನ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಇಷ್ಟೆಲ್ಲ ಸೈಕಲ್ ಕದ್ದರೂ ಆರೋಪಿಗಳು ಮಾತ್ರ ಸಿಕ್ಕಿರಲಿಲ್ಲ. ಅಲ್ಲದೆ ಇವರು ಸೈಕಲ್ ಕಳ್ಳತನ ಪ್ರಕರಣದಲ್ಲಿ ಕರೆತಂದು ವಿಚಾರಣೆ ನಡೆಸಿದಾಗ ಸಿಕ್ಕಿಲ್ಲ.
ಬದಲಿಗೆ ಪಬ್ಬು, ಬಾರು, ಬೀಡಾ ಅಂಗಡಿ ಇಂತಹ ಕಡೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಓಡಾಡುವವರನ್ನು ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ಮಾಡಲಾಗಿತ್ತು. ಸುಮಾರು 40 ಮಂದಿ ಅನುಮಾನಾಸ್ಪದ ವ್ಯಕ್ತಿಗಳನ್ನು ಕರೆತಂದು ವಿಚಾರಣೆ ಮಾಡುವ ಸಂದರ್ಭದಲ್ಲಿ ಆರೋಪಿ ರಫಿಕ್ ನ ಕೈಯಲ್ಲಿ ಕಟ್ಟಿಂಗ್ ಪ್ಲೇಯರ್ ಇರುವುದು ಕಂಡುಬಂದಿದೆ. ವಿಚಾರಣೆ ನಡೆಸುತ್ತ ಹೋದಾಗ ಸೈಕಲ್ ಕಳ್ಳತನ ಮಾಡುತ್ತಿರುವುದಾಗಿ ಬಾಯ್ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಸೈಕಲ್ ಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ತಪ್ಪೊಪ್ಪಿಕೊಂಡು, ಈ ಎಲ್ಲ ಕಳ್ಳತನದ ಹಿಂದೆ ಒಬ್ಬ ಮಿಲಿಟರಿ ಹವಾಲ್ದಾರ್ ಕೂಡ ಇದ್ದಾನೆ ಎಂಬ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾನೆ. ಇದನ್ನೂ ಓದಿ: ಮಲೆಮಹದೇಶ್ವರ ಬೆಟ್ಟ 5 ವರ್ಷಗಳಲ್ಲಿ ದಕ್ಷಿಣ ಭಾರತದ ಪ್ರಸಿದ್ಧ ಯಾತ್ರಾ ಕ್ಷೇತ್ರವಾಗಲಿದೆ: ಬೊಮ್ಮಾಯಿ
ಇದೀಗ 45 ಸೈಕಲ್‍ಗಳನ್ನು ಕಳ್ಳನಿಂದ ವಶಪಡಿಸಿಕೊಂಡರೂ ಅದರಲ್ಲಿ ಕೇವಲ 15 ಸೈಕಲ್ ಗಳ ಮಾಲೀಕರು ಮಾತ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ. ಹೀಗಾಗಿ ಉಳಿದ ಮಾಲೀಕರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ನಿಮ್ಮ ಸೈಕಲ್ ಕಳ್ಳತನವಾಗಿದ್ದರೆ ಸೂಕ್ತ ದಾಖಲೆ ತೋರಿಸಿ ಪಡೆಯಬಹುದಾಗಿದೆ.